________________
ಏಕಾದಶಾಶ್ವಾಸಂ | ೫೦೩ ಘಟೋತ್ಕಚನಿಳಾವಂತನ ಸಾವಂ ಕಂಡು ಸೈರಿಸದಳಂಭೂಷನನೆಕ್ಕಟ್ಟುವುದುಮವನಳ್ಳಿ ಭಗದತ್ತನಾನೆಯ ಮಯಂ ಪುಗುವುದುಮಳಂಭೂಷನಂ ಪಿಂತಿಕ್ಕಿ ಭಗದತ್ತಂ ಘಟೋತ್ಕಚನಂ ಮಾರ್ಕೋಂಡು- :
ಉತ್ತೊಪ ದಹನದೊಡನೆ ಪೈ ಪತಂಗಳ್ ಕೋಟಿ ಗಣಿತದಿಂದುಜುವಿನಮಾ | ರ್ದುತ್ಕಚ ದಿತಿಜನನುಜದೆ ಘ
ಟೋತ್ಕಚನಂ ಬಿಟ್ಟು ಮೂರ್ಛವೋಪಿನಮೆಚ್ಚಂ || ವll ಅನ್ನೆಗಂ ವೃಕೋದರಂ ಚತುರ್ದಶ ಭುವನಂಗಳೆಲ್ಲಮಂ ತೆರಳ್ಳಿ ತೇರೈಸಿ ನುಂಗುವಂತೆ ಮಸಕದಿಂ ಭಗದತ್ತನಂ ಮಾರ್ಕೊಂಡುಚಂ|| ಇಸುವುದುಮೆಚ್ಚ ಶಾತ ಶರ ಸಂತತಿಯಂ ಭಗದತ್ತನೆಯ ಖಂ
ಡಿಸಿ ರಥಮಂ ಪಡಲ್ವಡಿಸೆ ಮಚ್ಚರದಿಂ ಗಜೆಗೊಂಡು ತಾಗೆ ಮಾ | ಣಿಸಲಮರಾಪಗಾಸುತನಿದಿಚುವುದುಂ ರಥಮಲ್ಪೆ ಪೊಯ್ದು ಶಂ . ಕಿಸದಿದಿರಾಂತ ಸೈಂಧವನುಮಂ ಪವನಾತ್ಮಜನೋಡೆ ಕಾದಿದಂ || ೯
ವ|| ಅಂತು ಕಾದೆ ಸಿಂಧುರಾಜನ ಬೆಂಬಲದೊಳ್ ಕಾದಲೆಂದು ಬಂದ ನೂರ್ವರ್ ಕೌರವರುಂ ಭೀಮನೋಳ್ ತಾಗೆ ತಾಗಿದ ಬೇಗದಿಂ ದುರ್ಧಷ್ರಣ ದುರ್ಮಷ್ರಣ ದೀರ್ಘಬಾಹು ಮಹಾಬಾಹು ಚಿತ್ತೋಪಚಿತ್ರ ನಂದೋಪನಂದರ್ ಮೊದಲಾಗೆ ಮೂವತ್ತು ಮೂವರಂ ಜವಂಗೆ ಬಿರ್ದನಿಕ್ಕುವ೦ತಿಕ್ಕಿ ಮಿನುಟಿದರುಮನುಚಿಯಲೀಯದೆ ಬಟಿಸಂದಾಗಳ್--
ಘಟೋತ್ಕಚನು ಇಳಾವಂತನ ಸಾವನ್ನು ಸೈರಿಸಲಾರದೆ ಅಳಂಭೂಷನನ್ನು ಎದುರಿಸಲು ಅವನು ಹೆದರಿ ಭಗದತ್ತನ ಆನೆಯನ್ನು ಮರೆಹೊಕ್ಕನು. ಭಗದತ್ತನು ಅಳಂಭೂಷನನ್ನು ಹಿಂದಕ್ಕೆ ತಳ್ಳಿ ಘಟೋತ್ಕಚನನ್ನು ಪ್ರತಿಭಟಿಸಿದನು. ೮. ಅತ್ಯತಿಶಯವಾದ ಕೋಪಾಗ್ನಿಯೊಡನೆ ಬಾಣಗಳು ಕೋಟಿಸಂಖ್ಯೆಯಿಂದ ಹೆಚ್ಚಾಗುತ್ತಿರಲು ಆರ್ಭಟಿಸಿ ಕೆದರಿದ ಕೂದಲನ್ನುಳ್ಳ ರಾಕ್ಷಸನಾದ ಘಟೋತ್ಕಚನನ್ನು ಮೂರ್ಛಹೋಗುವ ಹಾಗೆ ಭಗದತ್ತನು ಹೊಡೆದನು. ವ|| ಅಷ್ಟರಲ್ಲಿ ಭೀಮನು ಹದಿನಾಲ್ಕು ಲೋಕಗಳನ್ನೂ ಉಂಡೆ ಮಾಡಿ ಚಪ್ಪರಿಸಿ ನುಂಗುವಂತೆ ರೇಗಿ ಭಗದತ್ತನನ್ನು ಪ್ರತಿಭಟಿಸಿದನು. ೯. ಅವನ ಆ ಹರಿತವಾದ ಬಾಣಸಮೂಹವನ್ನು ಭಗದತ್ತನು ಪೂರ್ಣವಾಗಿ ಕತ್ತರಿಸಿ ರಥವನ್ನು ಉರುಳಿಸಲು ಭೀಮನು ಮತ್ಸರದಿಂದ ಗದೆಯನ್ನು ಧರಿಸಿ ತಾಗಿದನು. ಅದನ್ನು ತಪ್ಪಿಸಲು ಭೀಷ್ಮನು ಎದುರಿಸಿದನು. ಭೀಮನು ಅವನ ರಥವನ್ನು ನಾಶವಾಗುವಂತೆ ಹೊಡೆದು ಸಂದೇಹವೇ ಪಡದೆ, ತನ್ನನ್ನು ಎದುರಿಸಿದ ಸೈಂಧವನನ್ನು ಪಲಾಯನಗೊಳ್ಳುವಂತೆ ಕಾದಿದನು. ವlು ಸೈಂಧವನ ಸಹಾಯಕನಾಗಿ ಕಾದಲು ಬಂದ ನೂರುಮಂದಿ ಕೌರವರೂ ಭೀಮನನ್ನು ಮುತ್ತಿದರು. ತಕ್ಷಣವೇ ದುರ್ಧಷ್ರಣ, ದುರ್ಮಷ್ರಣ, ದೀರ್ಘಬಾಹು, ಮಹಾಬಾಹು, ಚಿತ್ತೂಪ ಚಿತ್ರ, ನಂದೋಪನಂದರೇ ಮೊದಲಾದ ಮೂವತ್ತುಮೂರು ಜನರನ್ನು ಭೀಮನು ಯಮನಿಗೆ ಆತಿಥ್ಯ ಮಾಡುವ ಹಾಗೆ ಹೊಡೆದು ಕೊಂದನು. ಇನ್ನುಳಿದವರನ್ನೂ ಉಳಿಯುವುದಕ್ಕೆ