________________
೫೦೨) ಪಂಪಭಾರತಂ
ವll ಎಂಬುದುಮಿ ಕಜಮನ್ನ ಮನದೊಳೊಡಂಬಟ್ಟ ಕಜಮಾತನೆ ವೀರಪಟ್ಟಕ್ಕೆ ತಕ್ಕನೆಂದು ಧರ್ಮನಂದನಂ ದ್ರುಪದನಂದನಂಗೆ ಬಲೆಯನಟ್ಟಿ ಬರಿಸಿ ಪಿರಿದುಮೊಸಗೆವೆರಸು ತಾನೆ ವೀರಪಟ್ಟಮಂ ಕಟ್ಟಿಕಂti ಆ ಸಮರಮುಖದೊಳೆಸೆವರಿ
ಕೇಸರಿಯ ವಿರೋಧಿ ರುಧಿರ ಜಲನಿಧಿವೊಲ್ ಸಂ | ಧ್ಯಾಸಮಯಮಸೆಯ ತಲತಲ
ನೇಸಬ್ ಮೂಡುವುದುಮೊಡ್ಡಣಕ್ಕೆಂದರ್ | ವ|| ಅಂತಜಾತಶತ್ರು ಮುನ್ನಮೆ ಬಂದೊಡ್ಡಿ ಶತ್ರುಬಲಜಲನಿಧಿಯಾಡ ವಿಳಯ ಕಾಳಾನಿಳನೆ ಬೀಸುವಂತೆ ಕೆಯ್ದಿಸಿದಾಗಳ್ಮ|| ಚತುರಂಗಂ ಚತುರಂಗ ಸೈನ್ಯದೊಳಡುರ್ತ್ತುಂ ತಜ್ರನೆಯಂದು ತಾ
ಗಿ ತಡಂಮಟ್ಟದ ಕಾದೆ ಬಾಳಳುಡಿಗಳ್ ಜೀಪಿಟ್ಟು ಮಾರ್ತಾಗಿ ಶೋ | ಣಿತ ಧಾರಾಳಿಗಳುರ್ಚಿ ಪರ್ಚಿ ಸಿಡಿಯಲ್ ತೇಂಕಲ್ ವಿಮಾನಂಗಳ,
ಲೈ ತಗುಳ್ಳಾಗಳೆ ಮತ್ತಮತ್ತ ತಳರ್ದರ್ ದೇವರ್ ನಭೋಭಾಗದೊಳ್ ||೭ ' ' ವ| ಆಗಳೆರಡುಂ ಪಡೆಯ ನಾಯಕರೊಂದೊರ್ವರೊಳ್ ತಾಗಿ ಕಿಡಿಗುಟ್ಟಿದಂತೆ ಕಾದುವಾಗಳಭಿಮನ್ನು ಉಗ್ರತೇಜನಪ್ಪ ಮಗಧತನೂಜನನೊಂದೆ ಪಾಳಯಂಬಿನೊಳ್ ಕೆಯ್ಯ ಕೂಸನಿಕ್ಕುವ೦ತಿಕ್ಕುವುದುಂ ನೆಪ್ಪಿಂಗೆ ನೆಪುಗೊಳ್ಳದೆ ಮಾಣೆನೆಂಬಂತೆ ಬಕಾಸುರನ ಮಗನಳಂಭೂಷನರ್ಜುನನ ಮಗನಿಳಾವಂತನನಂತಕಲೋಕವನೆಯುಸುವುದುಂ
ಕೂಡಿ ತಾನೆ ವೀರಪಟ್ಟವನ್ನು ಕಟ್ಟಿದನು. ೬. ಆ ಯುದ್ಧಪ್ರಾರಂಭದಲ್ಲಿ ಪ್ರಸಿದ್ಧನಾದ ಅರ್ಜುನನ ಶತ್ರುಗಳ ರಕ್ತ ಸಮುದ್ರದ ಹಾಗೆ ಸಂಧ್ಯಾಕಾಲವು ಪ್ರಕಾಶಿಸುತ್ತಿರಲು ಸೂರ್ಯನು ತಳತಳನೆ ಉದಯಿಸಿದನು. ಎಲ್ಲರೂ ಯುದ್ಧರಂಗಕ್ಕೆ ಬಂದು ಸೇರಿದರು. ವ|| ಧರ್ಮರಾಜನು ಮೊದಲೇ ಬಂದು ಸೈನ್ಯವನ್ನೊಡ್ಡಿ ಶತ್ರುಸೇನಾಸಮುದ್ರವು ನಡುಗುವಂತೆಯೂ ಪ್ರಳಯಕಾಲದ ಮಾರುತವು ಬೀಸುವ ಹಾಗೆಯೂ ಯುದ್ಧಪ್ರಾರಂಭಸೂಚಕವಾಗಿ ಕೈಬೀಸಿದನು. ೭. ಒಂದು ಚತುರಂಗಸೈನ್ಯವು ಮತ್ತೊಂದು ಚತುರಂಗಸೈನ್ಯವನ್ನು ಸಮೀಪಿಸಿ ಬಂದು ತಿನೆ ತಗುಲಿ ಸಾವಕಾಶ ಮಾಡದೆ ಕಾದಿದವು. ಕತ್ತಿಯ ಚೂರುಗಳು ಜೀರ್ ಎಂದು ಶಬ್ದ ಮಾಡಿಕೊಂಡು ತಮ್ಮತಮ್ಮನ್ನೇ ತಗಲಿದುವು. ರಕ್ತಧಾರೆಗಳು ಮೇಲಕ್ಕೆದ್ದು ಹಾರಿ ಸಿಡಿದುವು. ವಿಮಾನಗಳು ತೇಲಾಡಿದುವು. ಅಂತರಿಕ್ಷಭಾಗದಲ್ಲಿ ದೇವತೆಗಳು ಹೆದರಿ ಒಟ್ಟಾಗಿ ಸೇರಿ ಅತ್ತಿತ್ತ ಜಾರಿದರು. ವ|| ಆಗ ಎರಡು ಸೈನ್ಯದ ನಾಯಕರೂ ಒಬ್ಬರಲ್ಲಿ ಒಬ್ಬರು ತಾಗಿ ಕೆಂಡವನು ಸುರಿಸುವ ಹಾಗೆ ಯುದಮಾಡಲು ಅಭಿಮನ್ಯುವು ಬಹಳ ಉಗ್ರವಾದ ತೇಜಸ್ಸನ್ನುಳ್ಳ ಭಗದತ್ತನನ್ನು ಒಂದೇ ಹಾರುವ ಬಾಣದಿಂದ ಕಯ್ಯಲ್ಲಿರುವ ಕೂಸನ್ನು ಬಡಿಯುವಂತೆ ನೆಲಕ್ಕೆ ಅಪ್ಪಳಿಸಿದನು. ಕೊಲೆಗೆ ಪ್ರತಿಯಾಗಿ ಕೊಲೆಮಾಡದೆ ಬಿಡುವುದಿಲ್ಲ ಎನ್ನುವ ಹಾಗೆ ಬಕಾಸುರನ ಮಗನಾದ ಅಳಂಭೂಷನೆಂಬುವನು ಅರ್ಜುನನ ಮಗನಾದ ಇಳಾವಂತನೆಂಬುವನನ್ನು ಯಮಲೋಕಕ್ಕೆ ಕಳುಹಿಸಿದನು.