________________
ಏಕಾದಶಾಶ್ವಾಸಂ | ೫೦೧ ಉll ಉನ್ನತಮಸ್ತಕಸ್ಥಳದೊಳಂಬುಗಳಟ್ಟುಡಿದಿರ್ದೊಡತ್ತಮಿ
ತನ್ನ ತಂದು ಬಲ್ನಡಿಗರಿಲ್ಕುಟಿನೊಳ್ ಕಿಟ್ ನೊಂದೆನೆನ್ನದಃ | ಎನ್ನದಣಂ ಮೊಗಂ ಮುರಿಯದಳದೆ ಬೇನೆಗಳೊಳ್ ಮೊಗಂಗಳಂ ಬಿನ್ನಗೆ ಮಾಡದಿರ್ದರಳವಚ್ಚರಿಯಾಗೆ ಕೆಲರ್ ಮಹಾರಥರ್ ||
ಚಂil ರಸಮೋಸರ್ವನೆಗಂ ತಗುಳೆ ಪಾಡುವ ಗಾಣರ ಗೇಯಮಟ್ಕಜಂ
ಪೊಸಯಿಸೆ ಸೋಂಕುವೊಲ್ಲೊಲಿಸುವೋಪಳ ಸೋಂಕು ಪೊದು ಜಾದಿಯೊಳ್ | ಮಸಗಿದ ಕಂಪು ಕಂಪನೊಳಕೊಂಡಲ್‌ವೊಂದಲರೆಂಬಿವಂದು ಪಾ ಆಸುವುವುದರ ವೀರ ಭಟರಾಹವಕೇಳಿ ಪರಿಶ್ರಮಂಗಳಂ |
ವll ಆಗಳ್ ಧರ್ಮನಂದನಂ ಮುಕುಂದಂಗೆ ಬಲಿಯನಟ್ಟಿ ಬರಿಸಿ ನಮ್ಮ ಸೇನಾನಾಯಕ ನುತ್ತಾಯಕನಾಗಿ ಗಾಂಗೇಯರಿಂದಮದನಿನ್ನಾರ್ಗೆ ವೀರಪಟ್ಟಮಂ ಕಟ್ಟುವಂ ಪೇಟೆಮನೆ
ಕoll ,
ಬೇಳೆಯ ಕೊಂಡದೊಳುರ್ಚಿದ ಬಾಳ್ವರಸರಿಬಲಮನರಿಯಲೆಂದಂಕದ ಕ | ಟ್ನಾಳ್ವರನ ಬಲಂ ನಿನ ಗಾಳ್ವೆಸಕೆಂದಿರ್ದನ ಧೃಷ್ಟದ್ಯುಮ್ಮಂ !
೩. ಎತ್ತರವಾದ ತಲೆಯ ಪ್ರದೇಶದಲ್ಲಿ ಬಾಣಗಳು ನಾಟಿಕೊಂಡು ಮುರಿದಿರಲು ಬಲಿಷ್ಠರಾದ ದಾಂಡಿಗರು ಆ ಕಡೆಯಿಂದ ಈ ಕಡೆಯಿಂದ ಒಟ್ಟಾಗಿ ಬಂದು ಸೇರಿ ಇಕ್ಕಳದಿಂದ ಅವುಗಳನ್ನು ಕೀಳುತ್ತಿದ್ದರೂ ನೋವಾಯಿತು ಎನ್ನದೆ ಅಃ ಎನ್ನದೆ ಸ್ವಲ್ಪವೂ ಮುಖವನ್ನು ತಿರುಗಿಸದೆ ಹೆದರದೆ ಮುಖವನ್ನು ಹೆಚ್ಚಾಗಿ ಮಾಡಿಕೊಳ್ಳದೆ ಕೆಲವು ಮಹಾರಥರು ತಮ್ಮ ಸಾಮರ್ಥ್ಯವು ಆಶ್ಚರ್ಯಕರವಾಗುವ ಹಾಗೆ ಇದ್ದರು. ೪. ರಸವು ಪ್ರಸರಿಸುವವರೆಗೂ ಬಿಡದೆ ಹಾಡುವ ಗಾಯಕಿಯರ ಗಾನ, ಪ್ರೀತಿಯನ್ನು ಉಂಟುಮಾಡುವಂತೆ ಹತ್ತಿರವೇ ಕುಳಿತು ಸುಖವನ್ನು ಹೆಚ್ಚಿಸುತ್ತಿರುವ ಪ್ರಿಯಳ ಸ್ಪರ್ಶ, ಎಲ್ಲೆಡೆಯೂ ಹರಡಿದ ಜಾಜಿಯ ವಿಜೃಂಭಿಸಿದ ವಾಸನೆಯಿಂದ ಕೂಡಿದ ಗಾಳಿ ಎಂಬವು ಶ್ರೇಷ್ಠರಾದ ವೀರಭಟರ ಯುದ್ಧಪರಿಶ್ರಮವನ್ನು ಹೋಗಲಾಡಿಸುತ್ತಿದ್ದುವು. ವ|| ಆಗ ಧರ್ಮರಾಜನು ಶ್ರೀಕೃಷ್ಣನಲ್ಲಿಗೆ ದೂತನನ್ನು ಕಳುಹಿಸಿ ಬರಮಾಡಿಕೊಂಡು “ನಮ್ಮನಾಯಕನು ತನ್ನ ಪ್ರತಾಪವನ್ನು ಮೆರೆದು ಭೀಷ್ಕರಿಂದ ನಾಶವಾದನು. ಇನ್ನಾರಿಗೆ ವೀರಪಟ್ಟವನ್ನು ಕಟ್ಟೋಣ ಹೇಳಿ' ಎಂದು ಕೇಳಿದನು. ೫. ಯಜ್ಞಕುಂಡದಲ್ಲಿ ಬಿಚ್ಚಿದ ಕತ್ತಿಯಿಂದ ಕೂಡಿ ಶತ್ರುರಾಜರನ್ನು ಕತ್ತರಿಸುವುದಕ್ಕಾಗಿಯೇ ಉದ್ಭವಿಸಿದ, ಸುಪ್ರಸಿದ್ಧನೂ ಮಹಾಬಲಿಷ್ಠನೂ ವೀರನೂ ಆದ ಧೃಷ್ಟದ್ಯುಮ್ಮನು ನಿನಗೆ ಸೇವೆಮಾಡಲೆಂದೇ ಸಿದ್ಧನಾಗಿದ್ದಾನೆಯಲ್ಲವೇ ? ವ| ಎನ್ನಲು ಈ ಕಾರ್ಯ ನನ್ನ ಮನಸ್ಸಿಗೂ ಒಪ್ಪಿದ ಕಾರ್ಯವೇ. ಅವನೇ ವೀರಪಟ್ಟಕ್ಕೆ ಯೋಗ್ಯನಾದವನು ಎಂದು ಧರ್ಮರಾಜನು ದ್ರುಪದನ ಮಗನಾದ ಧೃಷ್ಟದ್ಯುಮ್ಮನಿಗೆ ಹೇಳಿಕಳುಹಿಸಿ ಬರಮಾಡಿ ವಿಶೇಷಪ್ರೀತಿಯಿಂದ