________________
೫೦೬ | ಪಂಪಭಾರತಂ ಮll ತ್ರಿಜಗಕ್ಕ ಗುರು ದೇವನಾದಿಪುರುಷಂ ಕೇಳೊರ್ವನೊರ್ವಂ ರಿಪು
ಧ್ವಜಿನೀ ಧ್ವಂಸಕನಾಗಿ ಸಂದ ಕಲಿಯುಂ ಬಿಲ್ಲಾಳುಮಿನ್ನೆಂದೊಡೆಂ | - ತು ಜಗತ್ಕಾತರನೇಳಿಪೈ ಮಜವನೇ ಮುಂ ಪೂಣ್ಮುದಂ ಬಿಲ್ ರಥಂ ಧ್ವಜಮಂಬೆಂಬಿವನೆಯೇ ಸಂಧಿಸು ಜಸಂ ನಿಲ್ವನ್ನೆಗಂ ಕಾದುವೆಂil ೧೬
ವ|| ಎಂಬುದುಮನೇಕ ಶರಭರಿತ ಶಕಟಸಹಸ್ರಮನೊಂದುಮಾಡಿ ಗಾಂಗೇಯನ ಪಗೆ ನಿಲಿಸಿದಾಗಳಮರಾಪಗಾನಂದನನುಮಮರೇಂದ್ರನಂದನನುಮೊರ್ವರೊರ್ವರು ಗಳಸನೆಗೆಯ್ದು ಕಾದುವಾಗಳಂಬರತಳದೊಳೆಲ್ಲಂ ಬಿಳಿಯ ಮುಗಿಲ್ಗಳ ಚಾಪಳಿಗೆಗಳೊಳ್ ಬಂದಿರ್ದ ದೇವ ವಿಮಾನಂಗಳುಮೊಡನೊಡನೆ ಕಲಂಕೆ ಕುಲಗಿರಿಗಳುಂ ದಿಕ್ಕರಿಗಳುಮೊಡನೊಡನೆ ತಾಗಿದಂತೆ ತಾಗಿದಾಗಮ|| ಉಪಮಾತೀತದ ಬಿಲ್ಲ ಬಿ ಸಮಸಂದೊಂದೊರ್ವರೊಳ್ ಪರ್ವೆ ಪ
ರ್ವಿ ಪರವೂಹ ಭಯಂಕರಂ ನೆಗೆದು ಪಾರ್ದಾರ್ದೆಚೊಡಂಬಂಬನ | ಟ್ಟಿ ಪಳಂಚುತ್ತೆ ಸಿಡಿಲ್ಲ ತೋರಗಿಡಿಯಿಂದೊಂದೊಂದುತೋಳ್ ಬೇವುದುಂ | ತ್ರಿಪುರಂಚೊತ್ತಿಸಿದಂತೆ ಪೊತ್ತಿ ಪೊಗದತ್ತ ವಿಯuಂಡಳಂ || ೧೭ ವ|| ಅಂತು ಬ್ರಹ್ಮಾಂಡಮುರಿಯ ಕಾದ
೧೬. “ದುರ್ಯೊಧನ, ಕೇಳು, ಅವರಲ್ಲಿ ಒಬ್ಬನಾದ ಕೃಷ್ಣನು ಮೂರುಲೋಕಕ್ಕೂ ಗುರು, ಒಡೆಯ, ಆದಿಪುರುಷ, ಮತ್ತೊಬ್ಬನಾದ ಅರ್ಜುನನು ಶತ್ರುಪಕ್ಷವನ್ನು ನಾಶಮಾಡುವುದರಲ್ಲಿ ಪ್ರಸಿದ್ಧನಾದ ಶೂರ. ಹೀಗಿರುವಾಗ, ಲೋಕಪ್ರಸಿದ್ದರಾದವರನ್ನು ಹೇಗೆ ತಿರಸ್ಕರಿಸುತ್ತೀಯೆ? ನಾನು ಮೊದಲು ಮಾಡಿದ ಪ್ರತಿಜ್ಞೆಯನ್ನು ಮರೆಯುತ್ತೇನೆಯೆ? ಬಿಲ್ಲು ಬಾವುಟ, ಬಾಣ, ತೇರುಗಳನ್ನು ಸಿದ್ಧಮಾಡು. ಯಶಸ್ಸು ಶಾಶ್ವತವಾಗಿ ನಿಲ್ಲುವ ಹಾಗೆ ಕಾದುತ್ತೇನೆ ವ ಎನ್ನಲು ದುರ್ಯೋಧನನು ಅನೇಕ ಬಾಣಗಳಿಂದ ತುಂಬಿದ ಸಾವಿರಾರು ಬಂಡಿಗಳನ್ನು ಒಟ್ಟುಗೂಡಿಸಿ ಭೀಷ್ಮನ ಹಿಂದೆ ನಿಲ್ಲಿಸಿದನು. ಭೀಷ್ಮನೂ ಅರ್ಜುನನೂ ಒಬ್ಬರನ್ನೊಬ್ಬರು ಬಾಣದ ಗರಿಯಿಂದ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ಆಕಾಶಪ್ರದೇಶದಲ್ಲೆಲ್ಲ ಚೌಕಾಕಾರದ ಮಂಟಪ (ತೇರುಗಳಲ್ಲಿ ಬಂದಿದ್ದ ದೇವವಿಮಾನಗಳು ಜೊತೆ ಜೊತೆಯಲ್ಲಿಯೇ ಕ್ರಮತಪ್ಪಿ ಕಲಕಿಹೋದುವು. ಕುಲಪರ್ವತಗಳೂ ದಿಗ್ಗಜಗಳೂ ಒಟ್ಟಿಗೆ ತಾಗುವ ಹಾಗೆ ತಾಗಿದುವು. ೧೭. ಒಬ್ಬೊಬ್ಬರಲ್ಲಿಯೂ ಹೋಲಿಕೆಯಿಲ್ಲದ ಅಸ್ತ್ರವಿದ್ಯಾ ನೈಪುಣ್ಯವು ಕೂಡಿಕೊಂಡು ವ್ಯಾಪಿಸುತ್ತಿತ್ತು. ಶತ್ರುಸೈನ್ಯಭಯಂಕರನಾದ ಅರ್ಜುನನು ಎದುರುನೋಡುತ್ತ ಆರ್ಭಟಿಸಿ ಹೊಡೆಯಲು ಅವನ ಒಂದು ಬಾಣವು ಮತ್ತೊಂದನ್ನು ಹಿಂಬಾಲಿಸುತ್ತ ತಟ್ಟನೆ ತಗುಲಿ ಸಿಡಿದು ಅದರ ದಪ್ಪನಾದ ಕಿಡಿಗಳು ಒಂದೊಂದರಲ್ಲಿಯೂ ಬೇಯುತ್ತಿರಲು ತ್ರಿಪುರಾಸುರರ ಪಟ್ಟಣಗಳು ಹತ್ತಿ ಉರಿದಂತೆ ಆಕಾಶಮಂಡಲವು ಎಲ್ಲೆಡೆಯಲ್ಲಿಯೂ ಹತ್ತಿ ಹೊಗೆಯಾಡು ತ್ತಿತ್ತು. ವ|| ಹಾಗೆ ಬ್ರಹ್ಮಾಂಡವೇ ಉರಿಯುವ ಹಾಗೆ ಕಾಡುತ್ತಿರಲು