________________
ದಶಮಾಶ್ವಾಸಂ / ೪೭೯ ಘಟೆಯ ದಂದುಲಿವು ಲಯ ಘನ ಘಟೆಗಳ ಮೊಬಗನಿಗೆ ಪೊಟ್ಟಡದ ತೊಟು ಪಟಹ ಶಂಖ ಭೇರಿಯ ಚಟುವಳಿತದಿಂದಟಳಪಟಳಮಂಬರಪಟಳಂ | ಕರಿ ತುರಗ ರಥ ಪದಾತಿಯ ಚರಣಾಸಂಘಾತ ಜಾತ ರಜಮಾಜಸ್ತಂ | ನೆರೆದಂಬರಕೂಗಯಲ್ ಬಳ ಭರದಿಂ ಧರೆಯೆಟ್ಟು ಪಾಳುವಂತಾಯಾಗಳ್ || ಸಮರ ರಸಪ್ರಿಯರೊಳ್ ಸ
ಮುಮಿಳೆಯೊಳ್ ರಜಮುಮೊದನೆ ರಣಗಲೆಯೊಳ್ || ತಮಮುಂ ಮಿಗೆ ಸತ್ವ ರಜ ಸಮಂಗಳುಂ ಕಾಣಲಾದುವೆರಡುಂ ಪಡೆಯೊಳ್ |
೬೯ ಪಡೆಯ ಪೊಗಗಿದು ಶೇಷಂ ಪಡೆಗಳನುಡುಗುವುದುಮಳೆ ಬೊದಿಲ್ವೇನೆ ಬಿಟ್ಟ | ತಡಿಗಿಡ ಕೂರ್ಮನ ಬೆನ್ನಂ.
ದೊಡೆದು ಸಿಡಿಲೊಡನೆ ನುಚ್ಚುನೂಅಪಿನೆಗಂ | ವ|| ಅಂತು ನೆಲನುಮಾಕಾಶಮೋಂದೊಂದು ತಾಗಿದ ಬೇಗದೊಳಂಬರಂ ಬರಂ ನೆಗೆದ ಧೂಳಿಯೊಳ ದೆಸೆಯಳಿಯದೆಯುಂ ತಮ್ಮ ಬಲಮಂ ಮಾರ್ವಲಮನಳಿಯದೆಯುಂ
ಸಂಘಟಿಸಿದುವು. ೬೭. ಆನೆಯ ಸೈನ್ಯದ ಫೀಂಕಾರ ಶಬ್ದವು ಪ್ರಳಯಕಾಲದ ಮೋಡಗಳ ಸಮೂಹದ ಗುಡುಗೆನ್ನಿಸಿತು. ಉಗ್ರವಾಗಿ ಶಬ್ದಮಾಡುತ್ತಿರುವ ದಮಟೆ, ಶಂಖ, ನಗಾರಿಯ ಧ್ವನಿಯಿಂದ ಅತಲವೆಂಬ ಪಾತಾಳ ಲೋಕದ ಮಾಳಿಗೆಯೂ ಆಕಾಶದ ಮೇಲ್ದಾವಣಿಯೂ ಏಕಕಾಲದಲ್ಲಿ ಒಡೆದು ಹೋದುವು. ೬೮, ಆನೆ ಕುದುರೆ. ತೇರು ಕಾಲಾಳುಗಳ ಪಾದಘಟ್ಟಣೆಯಿಂದ ಉಂಟಾದ ಧೂಳು ಒಟ್ಟಿಗೆ ಕೂಡಿ ಆಕಾಶಕ್ಕೆ ಹಾರಲು ಸೈನ್ಯದ ಭಾರದಿಂದ ಭೂಮಿಯೇ ಎದ್ದು ಹಾರುವ ಹಾಗಾಯಿತು. ೬೯. ಯುದ್ಧಾಸಕ್ತರಾದವರಲ್ಲಿ ಸತ್ಯಗುಣವೂ (ಶಕ್ತಿಯೂ) ಭೂಮಿಯಲ್ಲಿ ರಜೋಗುಣವೂ (ಧೂಳೂ) ರಣಗತ್ತಲೆಯಲ್ಲಿ ತಮೋ ಗುಣವೂ (ಕತ್ತಲೆ) ಉಂಟಾಗಲು ಎರಡು ಸೈನ್ಯಗಳಲ್ಲಿಯೂ ಸ,ರಜಸ್ತಮೋಗುಣಗಳು ತೋರಿ ಬಂದುವು. ೭೦. ಸೈನ್ಯಗಳ ಭಾರಕ್ಕೆ ಹೆದರಿ ಆದಿಶೇಷನು ಹೆಡೆಗಳನ್ನು ಸಂಕೋಚ ಮಾಡಿಕೊಂಡನು. ಭೂಮಿಯು ಬೊದಿಲ್ಲೆಂದು ಬಿದ್ದಿತು. ತಳಭಾಗವು ನಷ್ಟವಾಗಲು ಆಮೆಯ ಬೆನ್ನು ಒಡೆದು ತಕ್ಷಣ ನುಚ್ಚುನೂರಾಯಿತು. ವl1 ಹಾಗೆ ಭೂಮ್ಯಾಕಾಶಗಳು ಒಂದೊಂದರಲ್ಲಿ ತಗುಲಿದ ವೇಗದಲ್ಲಿ ಆಕಾಶದವರೆಗೆ ಹಾರಿದ ಧೂಳಿನಿಂದ ದಿಕ್ಕು ಕಾಣದೆಯೂ ತಮ್ಮ ಪಕ್ಷ ಪ್ರತಿಪಕ್ಷಗಳನ್ನರಿಯದೆಯೂ ಚತುರಂಗ ಸೈನ್ಯವು ತಮ್ಮ ಮೊದಲಿನ ವ್ಯವಸ್ಥೆ ತಪ್ಪಿಹೋಗಿ ಹುಡುಕಾಡುತ್ತ ಥಟ್ ಪೊಟ್ಟೆಂದು ಹೊಡೆದು ಇಟ್ಟು ಕತ್ತರಿಸಿ ತರಿದು ಪ್ರತಿಭಟಿಸಿ