________________
೪೮೦ | ಪಂಪಭಾರತಂ
ಚಾತುರ್ವಲಂಗಳ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದಚ್ಚುಮಿಟ್ಟು ಮಿದು ತಡೆದು ಘಟ್ಟಿಸೆಯುಮಾಂಕೆಗೊಂಡು ಕಿಳೆದುಪೊತ್ತು ಕಾದೆ ಕಾದ ಸುರಿವ ಬಿಸುನೆತ್ತರ ಸರಿಯೊಳಮಂಬಿನ ಸರಿಯೊಳಮಂಬರಿವಿಟ್ಟು ಪಾಯ್ದ ಮದಗಜಂಗಳ ಮದಜಲದೊಳಂ ಬಲದ ಕಳಕಳಕ್ಕೆ ಮಸಗಿ ದೆಸೆಯಟೆಯದೆಯುಂ ಪಡೆಯ ಘಟ್ಟಿಸಿದ ಕೀಳ ಘಟ್ಟಣೆಯೊಳ್ ಪೊಟ್ಟಗೊಡೆದ ತಾಳುಗೆಗಳ ರುಧಿರಜಲದೊಳ್ ಬೆರಸಿ ಪದಗಂಪನಾಳ ಜಾತ್ಯತ್ವದ ಲಾಳಾಜಳದೊಳಂ ನೆಲದೊಳೊಗೆವ ರಜಂ ಮೊದಲೂಲಂಗಿದೆಯುಂ ತಿಳಿದಿಕ್ಕಿದಂತೆ ತಲೆಗಳ ಪಡೆದುರುಡೆ ಪರ್ಮರಂಗಳ ಪೋಳೊಳಗಣಿಂದಮೊಗದ ಕೇಸುರಿಗಳ ಬಳಗದಂತಟ್ಟೆಗಳಿಂದಂಬರಂಬರಂ ನೆಗೆದು ಪಾಡುವ ನೆತ್ತರ ಸುಟ್ಟುರೆಗಳಿಂದಂ ಮೇಗೆ ನೆಗೆದ ರಜಂ ಮಸುಳನಾಗೆ ದೆಸೆಯಂದು ತಮ್ಮ ಬಲಮುಮಂ ಮಾರ್ವಲಮುಮನಡೆದು ನವರುಧಿರ ಜಳ ಚಳಚನದೊಳ್ ಘಟ್ಟಿಸಿ ಸಿಂದುರದೊಳ್ ನೆಲಗಟ್ಟಿಸಿದಂತಿರ್ದ ರಂಗಭೂಮಿಯೊಳೆರಡುಂ ಪಡೆಯ ನಾಯಕರ್ ಬಿಲ್ಲಾಳೆಗಂಗಾದುವಾಗಳ
ಕಂll ಪಿಡಿಕೆಯ್ ತೀವಿದ ಕೂರ್ಗಣೆ
ಮಡಕಾಲ್ವರಮಲೆವ ಕಚ್ಚೆ ನಿಡಿಯಸಿಯೊ ಕ || ರ್ಪಿಡಿದ ಪಣೆಗಟ್ಟು ಕೆಳ್ಕೊಡ ಬೆಡಂಗನೊಳಕೊಳ ಧನುರ್ಧರ ಹೆಣೆದಚ್ಚರ್ |
ಶರಸಂಧಾನಂ ನಿಟ್ಟಿಸ
ಲರಿದೆಂಬಿನವೆರಡು ಬಲದ ಕಡುವಿಲ್ಲರ್ ಭೋ | ರ್ಗರೆದಿಗೆ ಕೂರ್ಗಣೆಯೊಳ್ ಪಂ ದರಿಕ್ಕಿದಂತಾಯ್ತು ಗಗನಮಂಡಳಮಲ್ಲಂ ||
20
20
ಕೆಲವು ಕಾಲ ಯುದ್ಧಮಾಡಿದರು. ಸುರಿಯುತ್ತಿರುವ ಬಿಸಿರಕ್ತದ ಮಳೆ, ಬಾಣವರ್ಷದಿಂದ ಪ್ರವಾಹವಾಗಿ ಹರಿಯುವ ಮದ್ದಾನೆಗಳ ಮದೋದಕ, ಸೈನ್ಯದ ಗದ್ದಲಕ್ಕೆ ರೇಗಿ ದಿಕ್ಕು ತೋಚದಂತೆ ಓಡಿ ತಗುಲಿದ ಕಡಿವಾಣದ ಸಂಘರ್ಷಣೆಯಿಂದ ಪೂರ್ಣವಾಗಿ ಸೀಳಿದ ನಾಲಗೆಗಳ ರಕ್ತ, ಹದವಾದ ಕೆಂಪು ಬಣ್ಣವನ್ನು ತಾಳಿದ ಜಾತಿಕುದುರೆಗಳ ಜೊಲ್ಲುರಸ, ಇವುಗಳಿಂದ ನೆಲದಿಂದ ಹೊರಟ ಧೂಳಿನ ಮೂಲವು ನಾಶವಾಯಿತು. (ನೆಲವು ಒದ್ದೆಯಾದುದರಿಂದ ಧೂಳೇಳುವುದೂ ನಿಂತುದರಿಂದ) ಕತ್ತರಿಸಿ ಹಾಕಿದ ತಲೆಗಳು ಹರಿದು ಹಾರಲು ದೊಡ್ಡ ಮರಗಳ ಹೋಳುಗಳ ಒಳಭಾಗದಿಂದ ಹುಟ್ಟಿದ ಕೆಂಪುಜ್ವಾಲೆಯ ಸಮೂಹದಂತೆ ಮುಂಡ ಗಳಿಂದ ಆಕಾಶದವರೆಗೆ ಚಿಮ್ಮಿ ಹಾರುವ ರಕ್ತದಿಂದ ಕೂಡಿದ ಸುಂಟರುಗಾಳಿಯಿಂದ ಮೇಲೆ ಎದ್ದಿದ್ದ ಧೂಳೂ ಮಾಯವಾಯಿತು. ಧೂಳು ಅಡಗಲಾಗಿ ದಿಕ್ಕುಗಳನ್ನು ತಿಳಿದು ತಮ್ಮ ಸೈನ್ಯವನ್ನೂ ಪರಸೈನ್ಯವನ್ನೂ ತಿಳಿದು ಹೊಸದಾದ ರಕ್ತವನ್ನು ಚಿಮಿಕಿಸುವುದರಿಂದ ದಮ್ಮಸ್ಸು ಮಾಡಿ ಕೆಂಪು ಕಾವಿಕಲ್ಲನ್ನು ನೆಲಕ್ಕೆ ಹಾಸಿದಂತಿದ್ದ ಯುದ್ಧಭೂಮಿಯಲ್ಲಿ ಎರಡು ಸೈನ್ಯದ ನಾಯಕರು ಬಿಲ್ಲಿನ ಕಾಳಗವನ್ನು ಕಾದಿದರು. ೭೧. ಕೈತುಂಬ ತುಂಬಿದ ಹರಿತವಾದ ಬಾಣ, ಮೊಳಕಾಲುವರೆಗೆ ಜೋಲಾಡುವ ವೀರಗಚ್ಚೆ, ದೀರ್ಘವಾದ ಕತ್ತಿಯ ಒರೆ, ಕಪ್ಪಾದ ಹಣೆಗಟ್ಟು, ಕೈಚೀಲ ಇವು ಬೆಡಗನ್ನು ಹುಟ್ಟಿಸುತ್ತಿರಲು ಬಿಲ್ದಾರರು ಪರಸ್ಪರ ಹೆಣೆದುಕೊಂಡು ಹೊಡೆದಾಡಿದರು. ೭೨. ಬಾಣವನ್ನು ಹೂಡುವುದನ್ನು ನೋಡಲಸಾಧ್ಯವೆನ್ನುವ ಹಾಗೆ ಎರಡು ಸೈನ್ಯದ