________________
೪೭೮ | ಪಂಪಭಾರತಂ ರಥಾಂಗಧರನಂ ಮುನ್ನಮೇಜಲ್ಬಟ್ಟು ಮೂಟು ಸೂಯ್ ಬಲವಂದು ಪೊಡಮಟ್ಟು ಬಟಿಯಂ ತಾನೇ ವಜ್ರಕವಚಮಂ ತೊಟ್ಟು ತವದೊಳಗಳನೆರಡುಂ ದಿಸೆಯೊಳಂ ಬಿಗಿದು ದ್ರೋಣಾಚಾರ್ಯಂಗೆ ಮನದೋಳ್ ನಮಸಾರಂಗೆಯು ದೊಣಂ ಬಾಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಜೆಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವಾಗಳ್ಮ|| ಸ | ಕುಳಶೈಲೇಂದ್ರಂಗಳಂಭೋನಿಧಿಗಳಖಿಳ ದಿಗಂತಿಗಳ್ ವಿಶ್ವಧಾತ್ರೀ
ವಳಯಂ ಪಾತಾಳಮೂಲಂ ಸಕಲ ಭುವನಮೋಂದೊಂದನ್ ಕೇಣಿಗೊಂಡು | ಚಳಿಸಲ್ ಸೂಸಲ್ ಪಳಂಚಲ್ ಸಿಡಿದೊಡೆದಳಅಲ್ ಫಾತಿ ಜೀಜಬಲಂದು ಮೃಳಿಸುತ್ತರ್ದರಾವಂ ಹರಿಗನೊಳಿದಿರು ಮೀಟಿ ಮಾಜಾಂಪ ಗಂಡಂ || ೬೫
ವ|| ಎಂಬನ್ನೆಗಂ ಪ್ರಳಯಕಾಲ ಜಾತ್ರೋತ್ಸಾತ ವಾತ ನಿರ್ಘಾತದಿಂದಮಳ್ಳಾಡಿ ತಳ್ಳಂಕಂಗುಟ್ಟುವ ಜಳನಿಧಿಗಳಂತೆ ಮೆರೆದಪ್ಪಲ್ ಬಗೆವುಭಯಸೈನ್ಯಂಗಳಂ ಕಂಡ ರಾಜರಾಜನು ಮಿತ್ತ ಧರ್ಮರಾಜನುಮೊಡನೊಡನೆ ಕೆಯ್ದಿಸಿದಾಗ
ಕoll ಪೂರ್ವಾಪರ ಜಳನಿಧಿಗಳ
ಗುರ್ಮಿಸುವಿನಮೊಂದನೊಂದು ತಾಗುವವೊಲಗು | ರ್ವುರ್ವಿರೆ ಪರ್ವಿ ಚತುರ್ವಲ ಮೇರ್ವಸದಿಂದಂದು ಬಂದು ತಾಗಿತ್ತಾಗಳ್ ||
೬೬
ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದ ಬಳಿಕ ತಾನೂ ಹತ್ತಿದನು. ವಜ್ರಕವಚ ವನ್ನು ಧರಿಸಿದನು. ಅಕ್ಷಯತೂಣೀರ (ಬತ್ತಳಿಕೆ)ಗಳನ್ನು ಎರಡುಕಡೆಯಲ್ಲಿಯೂ ಬಿಗಿದುಕೊಂಡನು. ದ್ರೋಣಾಚಾರ್ಯರಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ 'ದ್ರೋಣಾಚಾರ್ಯರು ಬಾಳಲಿ' ಎಂದು ಪ್ರಾರ್ಥಿಸಿದನು. ಮಹಾಪ್ರಚಂಡವಾದ ತನ್ನ ಗಾಂಡೀವವೆಂಬ ಬಿಲ್ಲಿಗೆ ಹೆದೆಯನ್ನೇರಿಸಿ ನೀವಿ ಟಂಕಾರಮಾಡಿದನು. ದೇವದತ್ತ ಶಂಖವನ್ನು ಊದಿ ಸಂಸಪ್ತಕರ ಸೈನ್ಯದ ಕಡೆಗೆ ತೇರನ್ನು ನಡೆಸುವಂತೆ ಕೃಷ್ಣನಿಗೆ ಹೇಳಿದನು. ೬೫. ಕುಲಪರ್ವತಗಳೂ, ಸಮುದ್ರಗಳೂ, ದಿಗ್ಗಜಗಳೂ, ಸಮಗ್ರಭೂಮಂಡಲವೂ ಪಾತಾಳಲೋಕದ ತಳಭಾಗವೂ ಸಮಸ್ತಲೋಕಗಳೂ ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ ಚೆಲ್ಲಾಡಿ, ತಾಗಿ, ಸಿಡಿಲೊಡೆದು, ನಡುಗಿ, ಹಾರಿ, ಜೀರೆಂದು ಶಬ್ದಮಾಡಿ ವ್ಯಾಕುಲಪಟ್ಟವು. ಅರ್ಜುನನಿಗೆ ಇದಿರಾಗಿ ಪ್ರತಿಭಟಿಸುವ ಶೂರನು ಯಾವನಿದ್ದಾನೆ ? ವll ಎನ್ನುವಷ್ಟರಲ್ಲಿ ಪ್ರಳಯಕಾಲದಲ್ಲಿ ಹುಟ್ಟಿ ಮೇಲಕ್ಕೆ ನೆಗೆದ ಗಾಳಿಯ ಹೊಡೆತದಿಂದ ಅಲುಗಿ ಕ್ಲೋಭೆಗೊಂಡ ಸಮುದ್ರದಂತೆ ಎಲ್ಲೆಯನ್ನು ಮೀರಲು ಯೋಚಿಸುತ್ತಿರುವ ಎರಡು ಕಡೆಯ ಸೈನ್ಯಗಳನ್ನೂ ಕಂಡು ಈ ಕಡೆ ಚಕ್ರವರ್ತಿಯಾದ ದುರ್ಯೊಧನನೂ ಆ ಕಡೆ ಧರ್ಮರಾಜನೂ ಯುದ್ಧ ಸೂಚಕವಾಗಿ ಕೈಬೀಸಿದರು. ೬೬. ಪೂರ್ವಪಶ್ಚಿಮ ಸಮುದ್ರಗಳು ಭಯವನ್ನುಂಟುಮಾಡುತ್ತ ಒಂದನ್ನೊಂದು ತಗಲುವ ಹಾಗೆ ಭಯಂಕರವಾದ ಚತುರಂಗಸೇನೆಗಳು ಉತ್ಸಾಹದಿಂದಲೂ ಯುದ್ಧೋದ್ಯೋಗದಿಂದಲೂ ಬಂದು