________________
೪೪೨) ಪಂಪಭಾರತ ಉll ಅಟ್ಟದ ನಿಮ್ಮ ಪೆರ್ಗಡೆ ಬರ್ದುಂಕಿದನೆಂಬುದನಿಂದ್ರಜಾಲಮಂ
ತೊಟ್ಟನೆ ತೋಳ ಬಂದು ಬರ್ದುಕಾಡಿದನಿನ್ನಳಿಪಿಂಡವಟ್ಟುವ | ಟ್ವಿಟ್ಟಿಗಳಂ ಬಿಸುಟ್ಟುದಮಗಂ ತಮಗಂ ಮುಳಿಸಿಂದಮೀಗಳ
ಟ್ಟಗಳಷ್ಟುವೆಂದಿದನೆ ದಲ್ ನುಡಿದಟ್ಟಿದನಮ್ಮ ಭೂಭುಜಂ || ೮೯ ಮll ಬಳ ಸಂಪನ್ನರನಾಸೆಗೆಯ ಚತುರಂಗಾನೀಕಮಂ ಕೂಡಿ ಕೊ
ಳ್ಳುಳಮಂ ಗಂಡುಮನಪುಕೆಯ ಮನಮಂ ಬಲ್ಲಿತ್ತು ಮಾತಿಂದುಮಾ | ನಳೆಯಂ ಕಾದಿದೊಡಲ್ಲದೀಯನಳದಿರ್ಕೆಂದಾ ಕುರುಕ್ಷೇತ್ರಮಂ ಕಳವೇಲ್ಗಟ್ಟಿದನ ಸಾಯಿಮುಟಿಯಿಂ ನಿಮ್ಮೊಂದು ಬಾಯ್ತಾಸೆಯಂ 10 ೯೦ ವ|| ಎಂಬುದುಂ ವೃಕೋದರಂ ಮುಳಿದಾಸ್ಪೋಟಿಸಿಚಂII ಎಷಸನರ೦ಗಮಪ್ಪುದೆನಗಂ ತನಗಂ ದೊರೆ ಕಾಯುಮೇವಮುಂ
ಪಸರಿಸಿ ಪರ್ವಿ ತನ್ನೊಳಮದನ್ನೂಳಮಿರ್ದುದು ಭೀಮನೆಂದೊಡಾ | ಹೆಸರನೆ ಕೇಳು ಸೈರಿಸದ ನಿನ್ನರಸಂ ಕಲಿಯಾಗಿ ನಾಳೆ ಸೈ
ರಿಸುಗುಮ ವೈರಿಭೂಪ ರುಧಿರಾದ್ರ್ರ ಮದೀಯ ಗದಾಭಿಘಾತಮಂ 1೯೧ ವ|| ಎಂಬುದು ಪರಾಕ್ರಮಧವಳನಿಂತೆಂದಂಮll ಕಲುಪುಂ ಕಾಯುಮನುಂಟುಮಾಡಿ ನೆಲನಂ ದುರ್ಯೊಧನಂ ತಾಗಿ ತ
ಇಳಿದುದಲ್ಲದೆ ಕೂಡನಾಜಿ ಭರಮುಂ ಸಾರ್ಚಿತ್ತದೇನೆಂದು ಮು || ಜುದಿಂಗಳ ಜಜುಚುತ್ತುಮಿರ್ಪುದ ರಣಕ್ಕಾರನ್ನರೆಂದೀಗಳೆಂ
ತಲುಯಲ್ ಬರ್ಕುಮೆ ಬರ್ಕೆ ಬಂದೊಡನೆಯಕ್ಕುಂ ಕುರುಕ್ಷೇತ್ರದೊಳIt೯೨ ಪ್ರಕಾಶವಾದ ಪಾದಕಮಲಗಳನ್ನುಳ್ಳ ಧರ್ಮರಾಜನನ್ನು ನೋಡಿ -೮೯. ನೀವು ಕಳುಹಿಸಿದ ಹೆಗ್ಗಡೆಯು ಇಂದ್ರಜಾಲವನ್ನು ತೋರಿ ಬದುಕಿ ಬಂದಿದ್ದಾನೆ. ಇನ್ನು ದೂತರನ್ನು ಕಳುಹಿಸುವುದನ್ನು ನಿಲ್ಲಿಸಿರಿ. ಇನ್ನು ಮೇಲೆ ಕೋಪದಿಂದ ನಮಗೂ ನಿಮಗೂ ಅಟ್ಟಿಯಾಡುವ ಯುದ್ಧಕಾರ್ಯವು ಪ್ರಾಪ್ತವಾಗುವುದು ಎಂಬ ಈ ಸಂದೇಶವನ್ನು ಹೇಳಿ ನಮ್ಮ ರಾಜನು ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾನೆ. ೯೦. ಬಲಸಂಪನ್ನರಾದವರನ್ನು ಕೂಡಿಕೊಳ್ಳಲಿ (ಸೇರಿಸಿಕೊಳ್ಳಲಿ) ; ಚತುರಂಗ ಸೈನ್ಯವನ್ನು ಕೂಡಿಸಿ ರಣರಂಗವನ್ನು ಸೇರಿ ಪರಾಕ್ರಮವನ್ನು ಅಂಗೀಕರಿಸಲಿ ; ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲಿ ; ನಾನು ಎಂದೂ ಯುದ್ದಮಾಡಿದಲ್ಲದೆ ಭೂಮಿಯನ್ನು ಕೊಡುವುದಿಲ್ಲ ತಿಳಿದಿರಲಿ ಎಂದು ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ಗೊತ್ತು ಮಾಡಿ ಕಳುಹಿಸಿದ್ದಾನೆ. ಪೌರುಷಪ್ರದರ್ಶನಮಾಡಿ ಸಾಯಿರಿ, ಬಾಳುವ ಆಸೆಯನ್ನು ಬಿಡಿರಿ ವ|| ಎನ್ನಲು ಭೀಮಸೇನನು ಕೋಪಿಸಿಕೊಂಡು ಆರ್ಭಟಿಸಿ ನುಡಿದನು. ೯೧. ಯುದ್ಧರಂಗವು ನನಗೂ ದುರ್ಯೋಧನನಿಗೂ ಸಮಾನವಾದುದೇ. ನನ್ನಲ್ಲಿಯೂ ಅವನಲ್ಲಿಯೂ ಕೋಪ ಮಾತ್ಸರ್ಯಗಳು ಪ್ರಸರಿಸಿ ಅಧಿಕವಾಗಿವೆ. ಭೀಮನೆಂಬ ಹೆಸರನ್ನೇ ಕೇಳಿ ಸಹಿಸದ ನಿಮ್ಮ ರಾಜನು ಶೂರನಾಗಿ ನಾಳೆಯ ದಿನ ಶತ್ರುರಾಜರ ರಕ್ತದಿಂದ ಒದ್ದೆಯಾದ ನನ್ನ ಗದೆಯ ಪೆಟ್ಟನ್ನು ಸೈರಿಸುತ್ತಾನೆಯೇ ? (ತಡೆದುಕೊಳ್ಳುತ್ತಾನೆಯೇ ?) ವ|| ಎನ್ನಲು ಅರ್ಜುನನು ಹೀಗೆಂದನು ೯೨. ಕೋಪವನ್ನೂ ತಾಪವನ್ನೂ