________________
ನವಮಾಶ್ವಾಸಂ / ೪೪೩ ವ|| ಎಂಬುದುಂ ಯಮನಂದನನಿಂತೆಂದಂಮll » 1 ಎಳೆಯಂ ದುರ್ಯೋಧನಂ ತಿಳಿಯದೆ ಕುಡನೆಂದಟ್ಟ ಕಾಧಲ್ಯಮಿಗಳ
ಕಳನಂ ಪೇಯ್ದಂ ಕುರುಕ್ಷೇತಮನೆನೆ ತಡವಿನ್ನಾವುದುಗ್ರಾಜಿಯೊ ದೋ | ರ್ವಳದಿಂದ ತನ್ನ ಮಚ್ಚಂ ಸಲಿಸಿಯ ನೆಲನಂ ಕೊಳ್ಳೆನಿಂ ತನನ್ನೊಳ್ ಕಳನಂ ಬೇಡಯ್ ಕೆಲ್ಲೆಂ ಬಗೆಯನಳಿಯಲಾಟಮಂತಂದ ಪೇಟೆಂ || ೯೩
ವ|| ಎಂದಜಾತಶತ್ರು ಶತ್ರುಪಕ್ಷಕ್ಷಯಂ ಮಾಡುವುದ್ಯೋಗಮವೆತ್ತಿಕೊಂಡು ಪ್ರಯಾಣ ಭೇರಿಯಂ ಪೊಯ್ತಿದಾಗಮll ದಸೆಯಂ ಪೊತ್ತ ಮಜೀಭರಾಜಿ ದಸೆಗೆಟ್ರೋಡಲ್ಕಗಳನ್ನು ಸ
ಪ್ರ ಸಮುದ್ರ ಕರೆಗಣಿ ತನ್ನವಧಿಯಂ ದಾಂಟತ್ತಜಾಂಡಂ ಸಿಡಿ | ಲ್ಲು ಸಿಡಿಲೊಯೊಡೆದೊಂದು ತತ್ತಿಯವೊಲಾಯ್ತಂಬೊಂದು ಸಂದೇಹಮಂ ಪೊಸತಂ ಭೂಭುವನಕ್ಕೆ ಮಾಡಿದುದು ತತ್ಸಾಹಭರೀರವಂ | ೯೪ ಕರಿಗಳ ಭ್ರಂಗಕುಳಾಕುಳೀಕೃತ ಕಟೋಪೇತಂಗಳೊಂಬತ್ತು ಸಾ ಸಿರಮಂತೊಂದು ಗಜಕ್ಕೆ ನೂಲು ರಥಮಂತಾ ಸ್ವಂದನಕ್ಕೊಂದಳೊಳ್ | ತುರಗಂ ನೂಅನಿತುಂ ತುರಂಗದಳದೊಂದೂಂದರ್ಕೆ ನೂಜಾಟ್ ತಗು
ಇರೆ ಬಲ್ಲರ್ ನಡೆ ನೋಡಿ ಕೂಡ ಪಡೆದತ್ತಕೋಹಿಣೀಸಂಖ್ಯೆಯಂ || ೯೫ ಉಂಟುಮಾಡಿ ಪ್ರತಿಭಟಿಸಿ ಯುದ್ಧಮಾಡಿದಲ್ಲದೆ ದುರ್ಯೊಧನನು ರಾಜ್ಯವನ್ನು ಕೊಡುವುದಿಲ್ಲ. ಯುದ್ದಭಾರವೂ ಸಮೀಪಿಸಿದೆ. ಆರು ತಿಂಗಳ ಮೊದಲಿಂದಲೂ ಅದೇನಾಗುತ್ತದೆಂದು ಹರಟುತ್ತಿರುವುದೇ ? ರಣದಲ್ಲಿ ಯಾರು ಎಂಥವರು ಎಂಬುದನ್ನು ಈಗ ತಿಳಿಯುವುದು ಸಾಧ್ಯವೇ? ಕುರುಕ್ಷೇತ್ರಕ್ಕೆ ಬರಲಿ, ಬಂದರೆ ತಿಳಿಯುತ್ತದೆ. ವ|| ಎನ್ನಲು ಧರ್ಮರಾಜನು ಹೀಗೆಂದನು ೯೩. ದುರ್ಯೋಧನನನ್ನು ಸಂಧಿಸಿ ಯುದ್ದಮಾಡಿದ ಹೊರತು ಭೂಮಿಯನ್ನು ಕೊಡುವುದಿಲ್ಲ ಎಂದು ದೂತನ ಮೂಲಕ ಹೇಳಿಕಳುಹಿಸಿ ಈಗ ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ನಿಶ್ಚಯಿಸಿದ್ದೇನೆ ಎಂದ ಮೇಲೆ ಇನ್ನು ಸಾವಕಾಶವೇತಕ್ಕೆ? ಘೋರಯುದ್ದದಲ್ಲಿ ನನ್ನ ಬಾಹುಬಲದಿಂದಲೇ ಅವನ ಆಶೆಯನ್ನು ಪೂರೈಸಿ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಇನ್ನು ಸಾವಕಾಶ ಮಾಡುವುದಿಲ್ಲ. ನಮ್ಮಲ್ಲಿ ಯುದ್ಧಮಾಡುವುದನ್ನಪೇಕ್ಷಿಸಿ ಸರಿಯಾದುದನ್ನೇ ಕೇಳಿದ್ದಾನೆ. ಅವನ ಅಭಿಪ್ರಾಯವನ್ನು ಚೆನ್ನಾಗಿ ತಿಳಿಯಲಾಯ್ತು; ಇನ್ನು ಏಳಿ; ಹಾಗೆಯೇ ಹೇಳಿ ಎಂದು ಅವನನ್ನು ಕಳುಹಿಸಿದನು. ವ|| ಧರ್ಮರಾಯನು ಶತ್ರುಪಕ್ಷವನ್ನು ನಾಶಮಾಡುವ ಕಾರ್ಯವನ್ನು ಅಂಗೀಕರಿಸಿ ಪ್ರಯಾಣಭೇರಿಯನ್ನು ಹೊಡೆಯಿಸಿದನು- ೯೪. ದಿಕ್ಕುಗಳ ಭಾರವನ್ನು ಹೊತ್ತಿರುವ ಮದದಿಂದ ಕೂಡಿದ ದಿಗ್ಗಜಗಳ ಸಮೂಹವು ದಿಕ್ಕೆಟ್ಟು ಓಡಲು ಪ್ರಾರಂಭಿಸಿದವೋ, ಏಳು ಸಮುದ್ರಗಳೂ ಮೇರೆಯನ್ನು ಮೀರಿ ತಮ್ಮ ಎಲ್ಲೆಯನ್ನು ದಾಟಿದುವೋ, ಬ್ರಹ್ಮಾಂಡವು ಸಿಡಿದು ಹೋಗಿ ಸಿಡಿಲಿನಿಂದ ಒಡೆದು ಚೂರಾದ ಒಂದು ಮೊಟ್ಟೆಯಂತಾಯಿತೋ ಎಂಬ ಒಂದು ಸಂದೇಹವನ್ನು ಆ ಭೇರಿಯು ಶಬ್ದವು ಭೂಲೋಕಕ್ಕೆಲ್ಲ ಉಂಟುಮಾಡಿತು. ೯೫. ದುಂಬಿಗಳ ಸಮೂಹದಿಂದ ಹಿಂಸಿಸಲ್ಪಟ್ಟ ಕಪೋಲಗಳನ್ನುಳ್ಳ ಒಂಬತ್ತು ಸಾವಿರ ಆನೆಗಳು, ಅಂತಹ