________________
ನವಮಾಶ್ವಾಸಂ (೪೪೧ ಕ೦ll ಪಿಡಿಯಂ ಪುರಿಗಡಯಂ ನರ
ನಡೆಗೊಂಡೊಡಮುಟದ ನಿನ್ನ ಮಕ್ಕಳನಿನ್ನೇ | ರ್ದೊಡಮಣಿಯಂ ಪರ್ಜಸಮನೆ ಪಿಡಿದೆನ್ನನೆ ರಣದೊಳಟೆವೆನಿರದಡಿಯಂ 11
೮೭ ವ|| ಎಂದು ಕೊಂತಿಯಂ ವಿಸರ್ಜಿಸಿ ಚಲದ ಚಾಗದ ಕುಲದ ನಯನಾವರ್ಜಿಸಿ ರಾಧೇಯನೂಂಗಾಧೇಯನಾಗಿರ್ದನಿತ್ತ ಪುರುಷೋತ್ತಮನುಂ ಕತಿಪಯ ಪ್ರಯಾಣಂಗಳಿಂ ವಿರಾಟಪುರ ನಿಕಟವರ್ತಿಯಪ್ಪ ದಿವಿಜಾಪಗಾತಟದುಪವನದೊಳರಿನೃಪವನಕುಪದ್ರವಕಾರಿಯಾಗಿ ನಲಂ ಮೂರಿವಿಟ್ಟಂತ ಬಿಟ್ಟಿರ್ದಜಾತಶತ್ರುವನವನತೋತ್ತಮಾಂಗನಾಗಿ ಕಂಡುಮll ಹಿಮಕೃದ್ವಂಶಜರಪ್ಪ ಪಾಂಡುಸುತರಂ ಕೆಯೊಂಡು ನಿನ್ನಯ್ದು ಬಾ
ಡಮನಿತ್ತು ನಡಪೆಂದು ಸಾಮಮನೆ ಮುಂ ಮುಂತಿಳ್ಕೊಡಾತಂ ಪರಾ| ಕ್ರಮಮಂ ತೋಡಿ ಸಿಡಿಲು ಹಾಯ್ದುದುಮಸುಂಗೊಳ್ಳನ್ನೆಗಂ ವಿಶ್ವರೂ ಪಮನಾಂ ತೋಟದೆನಿಂ ಕಡು ರಣದೊಳ್ ನೀಂ ತೋಜು ನಿನ್ನಾರ್ಪುಮಂ II೮೮
ವll ಎಂಬನ್ನೆಗಂ ದುರ್ಯೋಧನನಟ್ಟಿದ ದೂತಂ ಸಂಜಯನೆಂಬಂ ಬಂದು ಸಕಲ ಸಾಮಂತ ಮಣಿಮಕುಟ ಮರೀಚಿ ಮಸೃಣಿತ ಚರಣಾರವಿಂದನಪ್ಪ ಧರ್ಮನಂದನನಂ ಕಂಡು
ಕೆಟ್ಟು ನಾಶವಾಗಲಿಲ್ಲವೇ. ನನಗೂ ಇನ್ನು ಮೇಲೆ ಬದುಕುವ ಆಸೆಯೆಲ್ಲಿದೆ ? ಉಳಿದ ಮಕ್ಕಳ ಆಸೆಯನ್ನು ಬಿಟ್ಟು ಬಿಟ್ಟಿದ್ದೇನೆ ಎಂದು ಹೇಳಿದ ಕುಂತೀದೇವಿಗೆ ಕರ್ಣನು ದುಃಖಾಗ್ನಿಯು ವೃದ್ಧಿಯಾಗುತ್ತಿರಲು ಇಷ್ಟೊಂದು ಚಿಂತೆಯೇಕೆ ತಾಯಿ, ಯೋಚಿಸ ಬೇಡಿ. ೮೭. ಅರ್ಜುನನು ಪ್ರತಿಭಟಿಸಿದರೂ ದಿವ್ಯಾಸ್ತವನ್ನು ಹಿಡಿಯುವುದಿಲ್ಲ. ಉಳಿದ ನಿನ್ನ ಮಕ್ಕಳು ಗಾಯಪಡಿಸಿದರೂ ಅವರನ್ನು ಕೊಲ್ಲುವುದಿಲ್ಲ. ಪ್ರಖ್ಯಾತಕೀರ್ತಿಯನ್ನೇ - ಆಶ್ರಯಿಸಿ ಯುದ್ದದಲ್ಲಿ ನನ್ನನ್ನೇ ನಾಶಮಾಡಿಕೊಳ್ಳುತ್ತೇನೆ. ಸಾವಕಾಶಮಾಡದೆ ಅಡಿಯೆತ್ತಿ (ಹೊರಡಿರಿ) ವll ಎಂದು ಕುಂತಿಯನ್ನು ಬಿಟ್ಟು ಕಳೆದು ಛಲ, ತ್ಯಾಗ, ಕುಲ, ಮತ್ತು ಸತ್ಯವನ್ನು ಸಂಪಾದಿಸಿಕೊಂಡು ಕರ್ಣನು ಸದ್ಗುಣಕ್ಕೆ ಆಶ್ರಯವಾಗಿದ್ದನು. ಈಕಡೆ ಕೃಷ್ಣನು ಕೆಲವು ಪ್ರಯಾಣಗಳಿಂದ ವಿರಾಟನಗರದ ಸಮೀಪದಲ್ಲಿದ್ದ ಗಂಗಾನದಿಯ ದಡದ ಉಪವನದಲ್ಲಿ ಶತ್ರುರಾಜರೆಂಬ ಕಾಡಿಗೆ ಹಿಂಸಾಕಾರಿಯಾಗಿ ಜಗತ್ತಿನ ಜನವೆಲ್ಲ ಗುಂಪು ಕೂಡಿಕೊಂಡಿರುವಂತೆ ಬೀಡುಬಿಟ್ಟಿದ್ದ ಧರ್ಮರಾಜನನ್ನು ಕುರಿತು ನಮಸ್ಕಾರಪೂರ್ವಕ ಕಂಡು - ೮೮. ಸೋಮವಂಶದಲ್ಲಿ ಹುಟ್ಟಿದ ಪಾಂಡವರನ್ನು ಅಂಗೀಕಾರಮಾಡಿ (ಪುರಸ್ಕರಿಸಿ) ನಿನ್ನ ಅಯ್ತು ಹಳ್ಳಿಗಳನ್ನು ಕೊಟ್ಟು ಕಾಪಾಡು (ನಡಸು) ಎಂದು ಸಾಮೋಪಾಯವನ್ನೇ ಮುಂದುಮಾಡಿ ನುಡಿದೆ. ಅವನು ತನ್ನ ಪರಾಕ್ರಮವನ್ನೇ ಪ್ರದರ್ಶಿಸಿ ಸಿಡಿದು ಮೇಲೆ ಹಾಯ್ದ. ಅವನ ಪ್ರಾಣಗಳನ್ನೇ ಸೆಳೆದುಕೊಳ್ಳುವಂತೆ ನಾನು ವಿಶ್ವರೂಪವನ್ನು ತೋರಿದೆ. ಇನ್ನು ನೀನು ಉತ್ಸಾಹಶಾಲಿಯಾಗಿ ಯುದ್ಧದಲ್ಲಿ ನಿನ್ನ ಶಕ್ತಿಯನ್ನು ಪ್ರದರ್ಶಿಸು ವು ಎನ್ನುವಷ್ಟರಲ್ಲಿ ದುರ್ಯೋಧನನು ಕಳುಹಿಸಿದ ಸಂಜಯನೆಂಬ ದೂತನು ಬಂದು ಸಾಮಂತರಾಜರ ರತ್ನಕಿರೀಟದ ಕಾಂತಿಯಿಂದ