________________
೪೪o | ಪಂಪಭಾರತಂ ಕಂ|| ನಿನಗಪ್ಪರಸಂ ದುರ್ಯೋ
ಧನನೊಲವಂ ಮುಂದುಗೆಯ್ದು ಬೆಸಕೆಯ್ದರೆ ನಿ. " ನನುಜರೆರಾಸೆಗಂ ಕಿಸು
ತಿನಿಸಾಗದು ಮಗನೆ ನೀನೊಡಂಬಡಲ್ಕುಂ || ವ|| ಎಂಬುದುಮದಲ್ಲಮಂ ಕೇಳು ಕರ್ಣಂ ಮುಗುಳಗೆ ನಕ್ಕುಮಗ ಭಯಮಂ ಲೋಭಮುಮಂಬ ತಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ
ಟೆಯನೊಕ್ಕಾಳನ ಗೆಯ್ದು ಸತ್ತಮುಮಂ ಪಿಂತಿಕ್ಕಿ ಜೋಳಕ್ಕೆ ತ || ಪಿಯುಮಿಂ ಬಾಬುದ ಪೂಣು ನಿಲದಿಕೆಯಿಂ ಬಾಲಂತು ವಿಖ್ಯಾತ ಕೀ ರ್ತಿಯವೋಲೀಯೊಡಲಬ್ಬೆ ಪೇಟಿಮನಗೇಂ ಕಲ್ಲಾಂತರಸ್ಥಾಯಿಯೇ || ೮೪ ಕಂ1 ಮೀಂಗುಲಿಗನೆನಾಗಿಯುಮಣ
ಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ | ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನ ಬಿಸುಡಿಮಿನ್ನನ್ನೆಡೆಯೊಳ್ || . ವ|| ಎಂಬುದುಂ ಕೊಂತಿ ಭೋಂಕನರ್ದದಂದು- ಮl ಅಳೆದೆಂ ನೆಟ್ಟನೆ ಬೆಟ್ಟಿನಿಂತು ನುಡಿ ನೀಂ ಕಂದ ಪೋಗಿಂದ ಕೆ
ಮೃತಿದತ್ತಾಗದೆ ಸೋಮವಂಶಮನಗಿಂ ಬಾಯ್ತಾಸೆಯಲ್ಲಿತ್ತೂ ಬಿ | ಮೀುಟಿದಂ ಮನ ಮಕ್ಕಳಾಸೆಯುಮನಾನೆಂದಲ್ಲಿ ಶೋಕಾಗ್ನಿ ಪೊಂ ಪುಟವೊಗುತ್ತಿರೆ ಕರ್ಣನೆಂದನಿನಿತೇಂ ಪೇಬಿಟ್ಟೆ ಚಿಂತಾಂತರಂ || ೮೬
esge
ಹಾಗೆ (ನಿನ್ನ ಅಜ್ಞಾಧಾರಕರಾಗಿರುವ ಹಾಗೆ) ನೀನೇ ರಾಜ್ಯವನ್ನು ಆಳು, ೮೩. ನಿನಗೆ ಪ್ರಾಪ್ತವಾದ ರಾಜ್ಯವನ್ನು ನಿನ್ನ ತಮ್ಮಂದಿರು ದುರ್ಯೊಧನನ್ನು ಮುಂದುಮಾಡಿಕೊಂಡು ಸೇವೆಮಾಡುವರು, ಇದರಿಂದ (ನೀನು ರಾಜನಾಗುವುದರಿಂದ) ಉಭಯಪಕ್ಷಕ್ಕೂ ಸ್ವಲ್ಪವೂ ದೋಷವುಂಟಾಗುವುದಿಲ್ಲ. ಮಗನೇ ನೀನು ಒಪ್ಪಬೇಕು' ಎಂದಳು ವ|| ಅದನ್ನೆಲ್ಲವನ್ನು ಕರ್ಣನು ಕೇಳಿ ಹುಸಿನಗೆ ನಕ್ಕನು. ೮೪, ಭಯವೂ ಲೋಭವೂ ಇವೆರಡೂ ಪಾಪಕ್ಕೆ ಭಾಗಿಯಾಗಿರಲು ಹಿಂದಿನ ಸಂಪ್ರದಾಯ (ಕ್ರಮ)ವನ್ನು ಬಿಟ್ಟು ಸ್ವಾಮಿಯು ಮಾಡಿರುವ ಸತ್ಕಾರ್ಯಗಳನ್ನೆಲ್ಲ ಹಿಂದಕ್ಕೆ ಹಾಕಿ (ಮರೆತು) ಅನ್ನದ ಋಣಕ್ಕೆ (ಕೃತಜ್ಞತೆಗೆ) ಮೀರಿಯೂ ಬಾಳುವುದೇ ? ಅಶಾಶ್ವತತೆಗೆ ಪ್ರಸಿದ್ದವಾದ ಈ ಶರೀರವು ಪ್ರಖ್ಯಾತಕೀರ್ತಿಯು ಬಾಳುವ ಹಾಗೆ ಯುಗಯುಗಗಳಲ್ಲಿಯೂ ನಿಲ್ಲುವಂತಹುದೇ ಹೇಳಿ ತಾಯಿ, ೮೫. ಮೀನನ್ನು ಕೊಲ್ಲುವ ಸ್ವಭಾವವುಳ್ಳ ಬೆಸ್ತರ ಜಾತಿಯವನಾಗಿದ್ದು ಇಲ್ಲಿಯವರೆಗೆ ನಾನು ಸ್ವಲ್ಪವೂ ಸದ್ಗುಣವನ್ನು ಬಿಟ್ಟಿಲ್ಲ. ಸತ್ಕುಲಪ್ರಸೂತರಾದ ನಿಮ್ಮ ಮಗನಾದ ನನಗೆ (ಆ ಗುಣಗಳನ್ನು ತ್ಯಾಗಮಾಡುವುದು ಆಗುತ್ತದೆಯೇ? ಇನ್ನು ನೀವು ನನ್ನಲ್ಲಿರುವ ಹಂಬಲವನ್ನು ಬಿಸಾಡಿಬಿಡಿ. ವlt ಎನ್ನಲು ಕುಂತಿಯು ಇದ್ದಕ್ಕಿದ್ದ ಹಾಗೆ ಎದೆಯೊಡೆದು-೮೬. ಅಯ್ಯೋ ನಾನು ಹಾಳಾದೆ ಕಂದ, ನೀನು ನೇರವಾಗಿ ಇಷ್ಟು ಒರಟಾಗಿ ಮಾತನಾಡುತ್ತಿದ್ದೀಯೆ. ಚಂದ್ರವಂಶವು ಇಂದೇ