________________
ನವಮಾಶ್ವಾಸಂ | ೪೩೯
ನುಡಿಯನಿದಂ ನಿನ್ನಂಬಿಕೆ
ಪಡಮಾತೇಂ ಕೊಂತಿ ಹರಿಯ ಮತದಿಂ ಕಾಯ | ಲೊಡರಿಸಿ ಬಂದ ಸುತರಂ
ಕುಡದಿರ್ ಪುರಿಗಣೆಯನೆನಿತು ಲಕ್ಷ್ಮಿಸಿದೊಡಂ ||
ಎಂದರವಿಂದಪ್ರಿಯಸಖ
ನಂದಂಬರತಳಮನಡರ್ವುದುಂ ಕೆಯುಗಿದಿಂ || ತಂದಂ ಕುಂತಿಯನಬ್ಬೇಂ
ವಂದಿರ್ಪುದದನಗೆ ಸಯ್ತು ಬರ್ಪಂತೀಗಳ್ ||
ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯೊಳ್ | ನೆಲಸಿದುವು ನಿಮ್ಮ ಕರುಣಾ ಬಲದಿಂ ನೀವೆನ್ನನಿಂದು ಮಗನೆಂದುದಂ
ಪಡೆದ ತಾಯುಂ ತಂದೆಯು
ಮೊಡಲಂ ಪ್ರಾಣಮುಮನವರವವು ಕೆಯೆಡೆಯಂ | ಕುಡುವುದರಿದಾಯ್ತ ನೀಮನ
ಗಡ ಮಡಗದ ಬೆಸಪ ತೊಬ್ರವಸನಂ ಬೆಸಸಿಂ ||
ಎಂಬುದುಮಂಬಿಕ ಮಗನ ಮ
ನಂಬೆಳದ ನೀನುಮಿತ್ತೆಯಾನುಂ ಪತ್ರಂ | ನಂಬಿದ ನಿನ್ನನುಜರ್ ನಿ
ನ್ನಂ ಬೆಸಕೆಯ ನೀನೆ ನೆಲನನಾಳ್ವುದು ಕಂದಾ ||
2.8
26
೮೦
33
೮೨
೭೮. ಇದನ್ನು ಈಗ ಹೇಳುತ್ತಿಲ್ಲ ; ಇಂದಿನ ಮಾತು ಬೇರೆ. ಈಗ ನಿನ್ನ ತಾಯಿಯಾದ ಕುಂತೀದೇವಿಯು ಕೃಷ್ಣನ ಸೂಚನೆಯ ಪ್ರಕಾರ ತನ್ನ ಮಕ್ಕಳ ರಕ್ಷಣೆಯ ಪ್ರಯತ್ನದಲ್ಲಿ ತೊಡಗಿ ಬಂದಿದ್ದಾಳೆ. ಎಷ್ಟು ಲಲ್ಲೆಯ (ಪ್ರೀತಿಯ) ಮಾತುಗಳನ್ನಾಡಿದರೂ ದಿವ್ಯಾಸ್ತ್ರಗಳನ್ನು ಕೊಡಬೇಡ. ೭೯. ಎಂದು ಹೇಳಿ ಸೂರ್ಯನು ಆಕಾಶಪ್ರದೇಶವನ್ನು ಹತ್ತಿದನು. ಕರ್ಣನು ಕುಂತಿಗೆ ಕೈಮುಗಿದು ಹೀಗೆಂದನು: ನನಗೆ ಅದೃಷ್ಟಪ್ರಾಪ್ತಿಯಾದ ಹಾಗೆ ನೀವು ಬಂದಿರುವ ಕಾರ್ಯವಾವುದು ? ೮೦. ನೀವು ತಮ್ಮ ಕರುಣೆಯ ಬಲದಿಂದ ಈಗ ನನ್ನನ್ನು ಮಗನೆಂದು ಹೇಳಿದುದರಿಂದ ನನಗೆ ಛಲವೂ ತ್ಯಾಗವೂ ಮೇಲೆಯೂ ಪರಾಕ್ರಮವೂ ಕುಲವೂ ನನ್ನ ಶರೀರದಲ್ಲಿ ನೆಲಸಿದುವು. ೮೧. ತಾಯಿಯೂ ತಂದೆಯೂ ಮಗನ ಶರೀರವನ್ನೂ ಪ್ರಾಣವನ್ನೂ ಪಡೆದವರು, ಆದುದರಿಂದ ಅದು ಅವರಿಗೆ ಸೇರಿದುವು. ಅವರು ದಯಪಾಲಿಸಿರುವ ಅವನ್ನು ಅವರಿಗೇ ಹಿಂದಿರುಗಿ ಕೊಡುವುದು ಅಸಾಧ್ಯವೇ? ನೀವು ನನಗೆ ಸ್ವಲ್ಪವೂ ಮರೆಮಾಚದೆ ಅಪ್ಪಣೆ ಕೊಡಿಸಬೇಕೆಂದಿರುವ ಸೇವಾಕಾರ್ಯವನ್ನು ಮರೆಮಾಚದೆ ತಿಳಿಸಿ ೮೨. ಎನ್ನಲು ತಾಯಿಯು 'ಮಗನೆ ಮನಸ್ಸಿನಲ್ಲಿ ಹೆದರದೆ ನೀನೂ ಕೊಟ್ಟೆ ನಾನೂ ಪಡೆದಿದ್ದೇನೆ. ಕಂದಾ ನಿನ್ನನ್ನೇ ನಂಬಿರುವ ನಿನ್ನ ತಮ್ಮಂದಿರು ನಿನಗೆ ಸೇವೆ ಮಾಡುವ