________________
೪೩೮/ಪಂಪಭಾರತಂ
ವ|| ಅಂತು ಕಂಡು ಮನದೊಳಾದಕದಿಂ ಸಾಷ್ಟಾಂಗಮಗಿ ಪೊಡೆವಟ್ಟ ನಿಜನಂದನನ ನಂದಪ್ಪಿಕೊಂಡು ಪರಮಾಶೀರ್ವಚನಂಗಳಿಂ ಪರಸಿ
ಕಂ11 ತೊರೆದ ಕುಚಯುಗಳವಂದಂ
ಬಿರಿವಿಡೆ ಮೊಲೆವಾಲನಯೆಂದಂ ಮೆಯ್ಯಂ । ಕುರಿಸ ಸುರಿವಶ್ರುಜಲಮು
ಬರಿಸಿ ಪೊನಲ್ ಪೊನಲನಟ್ಟೆ ಜನನುತೆಗಾಗಳ್
ಆಗಳ ಮಗನಂ ಪೆತ್ತವೊ
ಲಾಗಿ ಲತಾಲಲಿತ ನೊಸಲ ಕಣ್ಣೆತ್ತವೊಲಂ | ತಾಗಡೆ ರಾಗಕ್ಕಾಗರ
ಮಾಗೆ ದಿನಾಧಿಪತನೂಜನೊಸೆದಿರ್ಪಿನೆಗಂ
ವ|| ಗಂಗಾದೇವಿಯುಂ ದಿವ್ಯಮೂರ್ತಿಯಂ ಕಳ್ಕೊಂಡು ಬಂದು
ಕಂ।।
ಒಪ್ಪಿಸಿದಂ ಕಯ್ಯಡೆಯಂ
ದಬ್ಬಿಸಿದ ನಿನ್ನ ಮಗನನೀಗಳೆ ನಿನಗಂ | ದಪೈಸಿ ಗಂಗೆ ಪೋಪುದು
ಮೊಪ್ಪುವ ನಿಜಬಿಂಬದೊಳಗಣಿಂದಂ ದಿನಪಂ
ಪೋಮಟ್ಟು ಬರಲ್ ತನ್ನಡಿ
ಗೆಳಗಿದ ನಿಜಸುತನನಂ ಪರಸಿ ಮನಂ | ಮಲುಗಿ ರವಿ ನುಡಿದನೆನ್ನುಮ ನುಗಿದ ಮರುಳಗನೆ ಹರಿಗೆ ಕವಚಮನಿ ||
24
2.89
22
22
ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು. ವll ಮನಸ್ಸಿನಲ್ಲುಂಟಾದ ಪ್ರೀತಿಯಿಂದ ಸಾಷ್ಟಾಂಗನಮಸ್ಕಾರ ಮಾಡಿದನು. ಕುಂತಿಯು ತನ್ನ ಮಗನನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಅತ್ಯುತ್ತಮವಾದ ಹರಕೆಗಳಿಂದ ಹರಸಿದಳು. ೭೪. ತೊರೆದ ಎರಡು ಮೊಲೆಗಳೂ ಆಗ ಎದೆಯ ಹಾಲನ್ನು ಧಾರಾಕಾರವಾಗಿ ಸುರಿಸಿದುವು. ಪ್ರೀತಿಯಿಂದ ಶರೀರದಲ್ಲಿ ರೋಮಾಂಚನವುಂಟಾಯಿತು. ಸಂತೋಷದಿಂದ ಹರಿಯುತ್ತಿರುವ ಕಣ್ಣೀರು ಅತ್ಯಧಿಕ ಪ್ರವಾಹವಾಗಿ ಗಂಗೆಯ ಪ್ರವಾಹವನ್ನು ಹೆಚ್ಚಿಸಿತು. ಜನರ ಸ್ತುತಿಗೆ ಪಾತ್ರಳಾದ ಆ ಕುಂತೀದೇವಿಗೆ-೭೫, ಆಗತಾನೆ ಪುತ್ರೋತ್ಸವ ವಾದಂತಾಯಿತು. ಬಳ್ಳಿಯಂತೆ ಕೋಮಲವಾದ ಗಂಗಾದೇವಿಗೆ ಹಣೆಗಣ್ಣನ್ನು ಪಡೆದಷ್ಟು ಸಂತೋಷವಾಯಿತು. ಸೂರ್ಯಪುತ್ರನಾದ ಕರ್ಣನು ಸಂತೋಷಿಸುತ್ತಿದ್ದನು. ವ|| ಆ ವೇಳೆಗೆ ಸರಿಯಾಗಿ ಗಂಗಾದೇವಿಯು ದಿವ್ಯಾಕಾರವನ್ನು ತಾಳಿ ಬಂದು ೭೬. ಕುಂತಿಯನ್ನು ಕುರಿತು 'ನನಗೆ ನ್ಯಾಸವೆಂದು ಒಪ್ಪಿಸಿದ್ದ ನಿನ್ನ ಮಗನನ್ನು ನಿನಗೆ ಈಗ ಒಪ್ಪಿಸಿದ್ದೇನೆ' ಎಂದು ಹೇಳಿ ಗಂಗೆಯು ಅದೃಶ್ಯಳಾದಳು. ಸೂರ್ಯನು ತನ್ನ ಪ್ರಕಾಶಮಾನವಾದ ಬಿಂಬದಿಂದ ೭೭. ಹೊರಟು ಬಂದು ತನ್ನ ಪಾದಕ್ಕೆ ಭಕ್ತಿಯಿಂದ ನಮಸ್ಕಾರಮಾಡಿದ ಮಗನನ್ನು ಪ್ರೀತಿಯಿಂದ ಹರಸಿ ಮನಸ್ಸಿನಲ್ಲಿ ದುಃಖಪಟ್ಟು 'ಹಿಂದೆ ನನ್ನನ್ನೂ ಲಕ್ಷ್ಯಮಾಡದೆ ಬುದ್ಧಿಯಿಲ್ಲದೆ ಮಗನೇ ಇಂದ್ರನಿಗೆ ಕವಚವನ್ನು ಕೊಟ್ಟೆ.