________________
ನವಮಾಶ್ವಾಸಂ / ೪೩೭ ವ|| ಎಂದು ಮುಂತಪ್ಪ ಕಜ್ಜಮಂ ತನ್ನೊಳ ಬಗೆದವಾರ್ಯ ವೀರ್ಯ೦ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು ದುರ್ಯೋಧನನಟ್ಟಿದ ದೇವಸವಳದ ಪದಿನೆಂಟು ಕೋಟಿ ಪೊನ್ನುಮನೊಟ್ಟಿ ಬೆಟ್ಟಾಗ ಪುಂಜಿಸಿಕoll ಸೋರ್ವ ವಸುಥಾರೆಯಂ ಕೆ
ಯಾರ್ವ ನಿಧಾನಮುಮನಿಸಿ ತವಳಎಂ | ಪಾರ್ವoಗಮಳಿಪಿ ಬೇಡಿದ
ಪಾರ್ವಂಗಂ ಪಿರಿದನಿತ್ತನಂಗಮಹೀಶಂ || ವ|| ಅಂತು ಚಾಗಂಗೆಯು ಜಗನ್ಮಂಗಳ ಗಂಗಾವಾರಿಯೊಳನಿವಾರಿತ ಪರಾಕ್ರಮನಘಮರ್ಷಣಪೂರ್ವಕಂ ಮಿಂದು ಕನಕಪಾತ್ರದೊಳ್ ತಕ್ಕನೆ ತೀವಿದ ಕನಕ ಕಮಳಂಗಳಿಂದಾದಿತ್ಯತೇಜನಾದಿತ್ಯಂಗರ್ಥ್ಯಮತಿ ಸೂರ್ಯಜಂ ಸೂರ್ಯಮಂತ್ರಂಗಳನೋದಿ ನೀರ ಸೂಸಿ ರ್ಪದಕ್ಷಿಣಂಗೆಯ್ದಾಗಳ್ಕಂt ಸಂಗತ ತರಂಗಯುತಯಂ
ಮಂಗಳಲಕ್ಷಣೆಯನಂದು ಭೋಂಕನೆ ಕಂಡಂ | ಗಂಗಾಂಗನೆಯಂ ಕಾಣ್ಣವೂ ಲಂಗನ್ನಪಂ ಮುಂದೆ ನಿಂದ ಕೊಂತಿಯನಾಗಳ್ ||
೭೩
ಸಾಧ್ಯವಿಲ್ಲ. ನಿಷ್ಕರ್ಷೆಮಾಡಿಕೊಂಡು ಉದ್ಧತರಾದ ಶತ್ರುಸೈನ್ಯಸಮೂಹವನ್ನು ನಾಶವಾಗುವ ಹಾಗೆ ಲೆಕ್ಕಕ್ಕೆ ಮಾತ್ರ ಹೋರಾಡಿ ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ. ವ|| ಎಂದು ಮುಂದೆ ಆಗಬೇಕಾದ ಕಾರ್ಯವನ್ನು ತನ್ನಲ್ಲಿ ನಿಷ್ಕರ್ಷೆಮಾಡಿಕೊಂಡನು. ಅವಾರ್ಯವೀರ್ಯನಾದ ಕರ್ಣನು ಒಂದು ಆದಿತ್ಯವಾರದ ದಿನ ಗಂಗೆಯಲ್ಲಿ ಸ್ನಾನಮಾಡಬೇಕೆಂದು ಬಂದು ದುರ್ಯೊಧನನು ಕಳುಹಿಸಿದ ದೇವಮಾನದ ಹದಿನೆಂಟು ಕೋಟಿ ಚಿನ್ನವನ್ನು ಒಟ್ಟಾಗಿ ಬೆಟ್ಟದಂತೆ ರಾಶಿಮಾಡಿದನು. ೭೨. ತಾನು ಮಾಡುವ ದಾನವು ಧಾರಾಕಾರವಾಗಿ ಸುರಿಯುವ ಸುವರ್ಣವೃಷ್ಟಿಯನ್ನೂ ಕೈವಶವಾದ ನಿಧಿಯನ್ನೂ ಕಡೆಗಣಿಸುತ್ತಿರಲು ದಕ್ಷಿಣೆಯನ್ನು ನಿರೀಕ್ಷಿಸುತ್ತಿರುವವನಿಗೂ ಆಶೆಪಟ್ಟು ಬೇಡಿದ ಬ್ರಾಹ್ಮಣರಿಗೂ ಕರ್ಣನು ಕೊಡುಗೈಯಿಂದ ದಾನಮಾಡಿದನು. ವ|| ಹಾಗೆ ತ್ಯಾಗ ಮಾಡಿ ಲೋಕಮಂಗಳ ಸ್ವರೂಪೆಯಾದ ಗಂಗಾನದಿಯಲ್ಲಿ ತಡೆಯಿಲ್ಲದ ಪರಾಕ್ರಮವುಳ್ಳ ಕರ್ಣನು ಪಾಪಪರಿಹಾರವಾದ ಮಂತ್ರೋಚ್ಚಾರಣಪೂರ್ವಕವಾಗಿ ಸ್ನಾನಮಾಡಿ ಚಿನ್ನದ ಪಾತ್ರೆಯಲ್ಲಿ ಪೂರ್ಣವಾಗಿ ತುಂಬಿದ ಚಿನ್ನದ ಕಮಲಗಳಿಂದ ಆದಿತ್ಯತೇಜನಾದ ಕರ್ಣನು ಸೂರ್ಯನಿಗೆ ಅರ್ಭ್ಯವೆತ್ತಿ ಸೂರ್ಯಮಂತ್ರವನ್ನು ಜಪಿಸಿ ಅರ್ಭ್ಯಪ್ರದಾನ ಮಾಡಿ ಮೂರುಪ್ರದಕ್ಷಿಣೆ ಮಾಡಿದನು. ೭೩. ಆಗ ಅಲೆಗಳಿಂದ ಕೂಡಿದವಳೂ ಮಂಗಳಲಕ್ಷಣವುಳ್ಳವಳೂ ಆದ ಗಂಗಾದೇವಿಯನ್ನು ಕಾಣುವ ಹಾಗೆ ಮುಂದೆ ನಿಂತಿದ್ದ