________________
೪೨೬ | ಪಂಪಭಾರತಂ
ವ|| ಎಂಬುದು ಸುಯೋಧನಂ ಕ್ರೋಧಾನಲೋದ್ದೀಪಿತ ಹೃದಯನಾಗಿ ಶೌರ್ಯಮ ದಾಡಂಬರದೊಳಂಬರಂಬರಂ ಸಿಬಲ್ಲುಚಂ1 ತೊಲಗದ ಗೋವುಗಾದ ಕಿಯಂದಿನ ಗೋವಿಕೆ ನಿನ್ನ ಚಿತ್ತದೊಳ್
ನೆಲಸಿದುದಕ್ಕುಮಗಳದ ವೈಷ್ಣವ ಮೋಹಮೆ ನಿನ್ನ ಮಯ್ಯೋಳ | ಗಲಿಸಿದುದಕುಮಾ ಜಡಧಿ ಸಂಗತಿಯಿಂ ಜಡಬುದ್ಧಿ ಬುದ್ಧಿಯಂ ತೊಲಗಿಸಿತಕ್ಕುಮಲ್ಲದೂಡ ನೀನಿನಿತಂ ನುಡಿವೈ ಪಳಾಳಮಂ || ಕಂ | ಪಳಪಟ್ಟ ಪಗೆವರಂ ನೆ |
ಪಟಪಡಲಣವೀಯದವರನವರ್ಗಳ ಬಾಳ್ | ನಿಳಸಲ್ ಬಗದ್ಯ ಕರಮನ
ಗುಜದಿರ್ಕುಮೆ ನಿನ್ನ ಪೇಟ್ಟ ಧರ್ಮಶ್ರವಣಂ || ಉll
ಭಾಗಮನಾಸೆವಟ್ಟಳಿಪಿ ಬೇಟ್ಟುದು ನಿನ್ನಯ ಕಲ್ಕ ವಿದ್ದ ನೀ ನಾಗಳುಮಣ್ಣ ಬೇಡಿದಪ ಸಜ್ಜನದಂತೆನಗೆಕ್ಕಬಾಗ ನೋ | ಡೀಗಳಿಳಾಲತಾಂಗಿ ಪುದವಲ್ಲಳದಂತನೆ ಮುನ್ನ ನೂಲ ತೋ ಡಾಗದೆ ಕೆಟ್ಟು ಪೋದವರನಿಂ ಮಗುಟ್ಟುಂ ನಿಪಂತು ಬೆಳ್ಳನೇ || ೪೬
ರಾಜ್ಯವನ್ನು ದಯಮಾಡಿ ಕೊಡುವುದಾದರೆ ಕಂಚಿ, ಶ್ರೇಷ್ಠವಾದ ವಾರಣಾಸಿ, ಕಾಕಂದಿ, ಕುರುಸ್ಥಳ, ಉತ್ತಮವಾದ ಕಸ್ಥಳ ಎಂಬ ಅಯ್ದ ಹಳ್ಳಿಗಳನ್ನು ಅವರಿಗೆ ಮಲಗುವುದಕ್ಕೆ (ಸಾಕಷ್ಟು ನೆಲವನ್ನು) ಲೋಕ ಮೆಚ್ಚುವ ಹಾಗೆ (ನಿನ್ನ ಸದ್ಗುಣ ಸ್ಥಿರವಾಗುವ ಹಾಗೆ) ಕೊಟ್ಟರೆ ಸಾಕು. ವ|| ಎನ್ನಲು ದುರ್ಯೋಧನನು ಕ್ರೋಧಾಗ್ನಿಯಿಂದ ಉರಿಯುತ್ತಿರುವ ಹೃದಯವುಳ್ಳವನಾಗಿ ಶೌರ್ಯದ ಸೊಕ್ಕಿನ ಉಬ್ಬರದಲ್ಲಿ ಆಕಾಶದವರೆಗೂ ಸಿಡಿದು ಕೃಷ್ಣನನ್ನು ಕುರಿತು ಹೇಳಿದನು. ೪೪. ಬಾಲ್ಯದ ದನಕಾಯುವ ಮನೋಭಾವ ನಿನ್ನಲ್ಲಿ ಹೋಗದೆ ಇನ್ನೂ ನೆಲೆಸಿರುವಂತಿದೆ. ಅತಿಶಯವಾದ ವೈಷ್ಣವ ಮೋಹವು ನಿನ್ನ ಶರೀರದಲ್ಲಿ ಮಿತಿಮೀರಿರಬೇಕು. ಆ ಜಲಧಿ (ಕ್ಷೀರಸಮುದ್ರ) ಸಂಬಂಧದಿಂದ ಬಂದ ಜಡಬುದ್ದಿಯು ನಿನ್ನ ಬುದ್ದಿಯನ್ನು ತೊಲಗಿಸಿರಬೇಕು. ಅಲ್ಲದಿದ್ದರೆ ನೀನು ಈ ಮೋಸದ ಮಾತನ್ನು ಆಡುತ್ತಿದ್ದೆಯಾ ೪೫. ಹರಿದುಹೋದ (ಕತ್ತರಿಸಿಹೋಗಿರುವ) ಸಂಬಂಧವುಳ್ಳ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅವಕಾಶಕೊಡದೆ ಅವರ ಮೊದಲ ಉನ್ನತಸ್ಥಿತಿಯಲ್ಲಿ ಪುನಃ ಸ್ಥಾಪಿಸಲು ಮನಸ್ಸು ಮಾಡಿದ್ದೀಯ. ನೀನು ಹೇಳಿದ ಧರ್ಮಶ್ರವಣವು ನನಗೆ ಹಿಡಿಸುವುದಿಲ್ಲವಲ್ಲವೆ ? ೪೬. ಭೂಭಾಗವನ್ನು ಕೊಡೆಂದು ಆಶೆಪಟ್ಟು ಕೇಳಿಕೊಳ್ಳುವುದು ನೀನು ಮೊದಲಿಂದ ಕಲಿತ ವಿದ್ಯೆ, ನೀನು ಯಾವಾಗಲೂ ಬೇಡುವ ಸ್ವಭಾವವುಳ್ಳವನು ತಾನೆ. ಈಗ ನನಗೆ ಭೂಮಿಯಂಬ ಸ್ತ್ರೀಯು ಕುಲವಧುವಿನಂತೆ ಒಬ್ಬನೇ ಅನುಭವಿಸುವುದಕ್ಕೆ ಯೋಗ್ಯಳಾದವಳು. ಮತ್ತೊಬ್ಬರೊಡನೆ ಜೊತೆಗೂಡಿ ಇರುವವಳಲ್ಲ. ಅದು ಹೇಗೆಂದರೆ ಮೊದಲು ಕತ್ತರಿಸಿ ಹೋದ ನೂಲಿನಂತೆ ತಿರುಗಿ ಸೇರಿಸಲಾಗದುದು. ಕೆಟ್ಟು ಹೋದವರನ್ನು ಪುನಃ