________________
ನವಮಾಶ್ವಾಸಂ / ೪೨೭ ಮll ವಿಜಿಗೀಷುತ್ವದೊಳೊಂದಿ ಗೋವುಳಿಗನಪ್ಪಂ ಮತ್ಸ ನಾಳಾಗಿ ವಾ
ರಿಜನಾಭಂ ಹರಿಯಂಬ ದೊಡ್ಡಿವೆಸರು ಪೊತ್ತಿರ್ದ ನೀಂ ಮಂತ್ರಿಯಾ | ಗೆ ಜಯೋದ್ಯೋಗಮನೆತ್ತಿಕೊಂಡು ರಣದೊಳ್ ಭೂಭಾಗಮಂ ನೆಟ್ಟನೂ
ಬೃಜೆಯಿಂದಂಜಿಸಿಕೊಳ್ಳದಿರ್ಪಿರೆ ಸಮಂತಾ ಗಂಡರೀ ಗಂಡರಂ || ೪೭ ಚಂ! ಪುಸಿಯನೆ ಸಾಮಮಂ ನುಡಿದು ಭೇದಮನುಂಟೊಡತಾಗೆ ಮಾಡಿ ಛಿ
ದ್ರಿಸಲೊಳಪೊಕ್ಕು ಮಿಕ್ಕು ನೆಗಟ್ಟುಗ್ರವಿರೋಧಿಗಳೆತ್ತಮೆಯ್ದೆ ಬಂ | ಚಿಸಿ ಪೊಂಗಕ್ಕೆ ಸರನೆ ತಾವೊಳಗಂ ತವೆ ತೋಡಿ ತಿಂದು ರ ಕಸಿಯರ ಕಂಡ ಕುಂಬಳದ ಮಾವೊಲಾಗಿರೆ ಮಾಡದಿರ್ಪಿರೇ || ೪೮
ವll ನಾಮಲ್ಲಮೊಂದೆ ಗರುಡಿಯೊಳೋದಿದ ಮಾನಸರೆವಮ್ಮ ನಿಮ್ಮಡಿ ಕೆಮ್ಮನೆ ಬಬಲಿಸಲ್ಬಡ ಬಂದ ಬಟ್ಟೆಯಿನ ಬಿಜಯಂಗೆಯ್ಕೆಮೆನೆ ಮುರಾಂತಕನಂತಕನಂತ ಮಾಮಸಕಂ ಮಸಗಿ ದುರ್ಯೋಧನನನಿಂತೆಂದಂಉll ಸೀತಯ ದೂಸಂದಣಿದ ರಾವಣನಂತಿರೆ ನೀನುಮೀಗಳೇ
ಸೀತೆಯ ದೂಸಂದಣಿಯಲಾಟಸಿದೆ ನಿನಗಂತು ಸೀತೆಯೇ ! ಸೀತೆ ಕಡಂಗಿ ಕಾಯ್ದು ಕಡೆಗಣಿದಳಪ್ರೊಡೆ ಧಾತ್ರನಿಂ ತೊದ ಊಾತಿನೊಳೇನೂ ಪಾಂಡವರ ಕೆಯ್ಯೋಳೆ ನಿನ್ನ ನಿಸೇಕಮಾಗದೇ ೪೯
ಸ್ಥಾಪಿಸುವುದಕ್ಕೆ ನಾನು ದಡ್ಡನೇ ? ೪೭. ಗೋವಳಿಗನಾಗಿದ್ದು ಜಯಾಕಾಂಕ್ಷೆಯಿಂದ ಕೂಡಿ ವಿರಾಟನ ಸೇವಕನಾಗಿ (ಮನುಷ್ಯನ ಆಳಾಗಿ) ಕಮಲನಾಭ, ಹರಿ, ಎನ್ನುವ ದೊಡ್ಡ ಹೆಸರನ್ನು ಹೊತ್ತಿರುವ ನೀನು ಮಂತ್ರಿಯಾಗಿರಲು ಆ ಶೂರರಾದ ಪಾಂಡವರು ಜಯೋದ್ಯೋಗವನ್ನು ಹೂಡಿ (ಯುದ್ಧದಲ್ಲಿ ಗೆಲ್ಲುವ ಕಾರ್ಯದಲ್ಲಿ ತೊಡಗಿ) ಶೂರರಾದ ನಮ್ಮನ್ನು ಪರಾಕ್ರಮದಿಂದ ಹೆದರಿಸಿ ಯುದ್ದದಲ್ಲಿ ನೇರವಾಗಿ ಭೂಮಿಯ ಭಾಗವನ್ನು ಪೂರ್ಣವಾಗಿ ಪಡೆಯದೇ ಇರುತ್ತಾರೆಯೇ ? ೪೮. ಸುಳ್ಳು ಸಾಮವನ್ನು ಹೇಳಿ, ಕೂಡಲೆ ಭೇದವನ್ನುಂಟುಮಾಡಿ, ಛಿದ್ರಿಸಲು ಒಳಹೊಕ್ಕು, ಉಗ್ರ ವಿರೋಧಿಗಳಾದ ನೀವು ಎಲ್ಲ ರೀತಿಯಿಂದಲೂ ವಂಚನೆಮಾಡಿ ರಾಕ್ಷಸಿಯರು ನೋಡಿದ ಕುಂಬಳದ ಕಾಯಿಯಂತೆ ಹೊರಗಡೆ ಮಾತ್ರ ಸರಿಯಾದವರಂತೆ ತೋರಿ ಒಳಗೆಯೆ ಕೇಡನ್ನು ಮಾಡದಿರುತ್ತೀರಾ ? ವ|| ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರಾಗಿದ್ದೇವೆ. ನೀವು ನಮ್ಮನ್ನು ವೃಥಾ ಆಯಾಸಪಡಿಸಬೇಡಿ ; ಬಂದ ದಾರಿಯಲ್ಲಿ ಬಿಜಯಮಾಡಿಸಿ ಎಂದನು. ಕೃಷ್ಣನು ಯಮನಂತೆ ವಿಶೇಷವಾಗಿ ಕೋಪಿಸಿಕೊಂಡು ದುರ್ಯೋಧನನಿಗೆ ಹೀಗೆಂದನು. ೪೯. ಸೀತಾದೇವಿಯ ಕಾರಣದಿಂದ ನಾಶವಾದ ರಾವಣನ ಹಾಗೆ ಈಗ ನೀನೂ ಕೂಡ ರಾಜ್ಯದ (ಭೂಮಿಯ) ಆಸೆಯಿಂದ ನಾಶವಾಗಲು ಆಶಿಸುತ್ತಿದ್ದೀಯೆ ; ನಿನಗೆ ಈ ಸೀತೆ (ಭೂಮಿಯು) ಆ ಸೀತೆಯೇ ಆಗಿದ್ದಾಳೆ. (ನಾಶಕಾರಕಳು). ಉತ್ಸಾಹಿಸಿ ಕೋಪದಿಂದ ನಿನ್ನನ್ನು ಭೂಮಿಯು ತಿರಸ್ಕರಿಸುವುದಾದರೆ ಬ್ರಹ್ಮನ ಸಹಾಯದಿಂದಲೇ ಪಾಂಡವರ ಕಮ್ಮಿಂದಲೇ ನಿನಗೆ ನಿಷೇಕ (ಶಾಸ್ತಿ, ಪ್ರಸ್ತುತ) ಆಗದಿರುತ್ತದೆಯೇ ? ಅಡ್ಡ
28