________________
ನವಮಾಶ್ವಾಸಂ (೪೨೫ ಪಟ್ಟದ ಮೊದಲಿಗರಾಜಿಗೆ ಜಟ್ಟಿಗರವರೆಂದುಮಾಳ್ ಮುನ್ನಿನ ನೆಲನಂ | ಕೊಟ್ಟು ಬಯಟ್ಟು ನಿನಗೊಡ ವುಟ್ಟಿದರಾ ದೂರೆಯರಾಗೆ ತೀರದುದುಂಟೇ || ಮುನ್ನಿನ ನೆಲನಂ ಕುಡುಗೆಮ ಗೆನ್ನರ್ ದಾಯಿಗರೆಮೆನ್ನರತಂತ | ಲೆನ್ನರ್ ಕರುಣಿಸಿ ದಯೆಯಿಂ
ದಿನ್ನಿತ್ತುದೆ ಸಾಲುಮೆಂಬರೆಂಬುದನೆಂಬರ್ | ಚoll ಕರಿ ಕಳಭ ಪ್ರಚಂಡ ಮೃಗರಾಜ ಕಿಶೋರ ಕಠೋರ ಘೋರ ಹೂಂ
ಕರಣ ಭಯಂಕರಾಟವಿಯೊಳಿನ್ನೆವರಂ ನಲಸಿರ್ದ ಸೇದ ನೀಂ | ಕರುಣಿಸಿದಾಗಳಲ್ಲದವರ್ಗಾಅದು ಕಮ್ಮಗೆ ನಾಡ ಚಲ್ಲವ ತರ ನುಡಿಗೊಳ್ಳದಿರ್ ನಿನಗೆ ಪಾಂಡವರಪುದನಾರುಮಪ್ಪರೇ || ೪೨ ಒಂದುಮೊಡಂಬಡುಂ ಪೊರೆಯುಮಿಲ್ಲವರ್ಗೆಂಬುದನೆಯ ನಂಬಿ ನಾ ಡಂ ದಯೆಗೆಯ್ದು ನೀಂ ಕುಡುವಿನಂ ರ್ಪತೇ ಪಡೆಮಾತೂ ಪಳ್ಳಿರ | ಲೈಂದವರ್ಗಿವುದೂಳು ನಿಲೆ ಕೆಂಚಿ ನಗಚ್ಯ ವಾರಣಾಸಿ ಕಾದ ಕಂದಿ ಕುರುಸ್ಥಳಂ ವರ ವೃಕಸ್ಥಳಮಂಬಿವನನ್ನು ಬಾಡಮಂ ॥ ೪೩
ಉll
ಬಿಸಿನೀರು ಮನೆಯನ್ನು ಸುಡುವುದೆ ? ೩೯. ಕೌರವವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವ ಎಲೈ ದುರ್ಯೋಧನನೇ ಪಾಂಡವರೊಡನೆ ಸ್ನೇಹವನ್ನು ಗಳಿಸಿದರೆ ನಿನಗೆ ಪ್ರತಿಭಟಿಸುವ ಪರ್ವತರಾಜರ ಸುಂಕದ ಕಟ್ಟೆಗಳೂ ಅಹಂಕಾರದಿಂದ ವರ್ತಿಸುವ ದೇಶಗಳ ಗಡಿಪ್ರದೇಶಗಳೂ ಎನ್ನುವುವು ಇರುತ್ತವೆಯೇ ? ೪೦. ಅದೂ ಇರಲಿ, ಅವರು ರಾಜ್ಯಪಟ್ಟಕ್ಕೆ ಮೊದಲು ಅರ್ಹರಾದವರು, ಯುದ್ದದಲ್ಲಿ ಶೂರರಾದವರು. ಅವರು ಯಾವಾಗಲೂ ಮೊದಲಿಂದ ಆಳುತ್ತಿದ್ದ ರಾಜ್ಯವನ್ನು ಅವರಿಗೆ ಕೊಟ್ಟು ಆ ಸಮಾಚಾರವನ್ನು ದೂತರ ಮೂಲಕ ಹೇಳಿಕಳುಹಿಸು. ನಿನ್ನ ಸಹೋದರರು ಅಂತಹ ಸಮರ್ಥರಾಗಿರಲು ನಿನಗಸಾಧ್ಯವಾದುದೂ ಉಂಟೇ ? ೪೧. ಅವರು ನಮಗೆ ಮೊದಲಿನ ನೆಲವನ್ನೆ ಕೊಡು ಎನ್ನುವುದಿಲ್ಲ, ನಾವು ದಾಯಾದಿಗಳು (ಸಮಭಾಗಿಗಳು) ಎನ್ನುವುದಿಲ್ಲ. ಹೀಗಲ್ಲ ಹಾಗಲ್ಲ ಎನ್ನುವುದಿಲ್ಲ. ನೀನು ದಯೆಯಿಯಿಂದ ಕೊಟ್ಟುದು ಸಾಕು ಎನ್ನುತ್ತಾರೆ. ನೀನು ಹೇಳಿದಂತೆ ಕೇಳುವರು. ೪೨. ಆನೆಯ ಮತ್ತು ಭಯಂಕರವಾದ ಸಿಂಹದ ಮರಿಗಳ ಕರ್ಕಶವೂ ಭಯಂಕರವೂ ಆದ ಹೂಂಕರಣ ಶಬ್ದದಿಂದ ಕೂಡಿದ ಘೋರವಾದ ಕಾಡಿನಲ್ಲಿ ಇದುವರೆಗೂ ಅವರು ವಾಸಮಾಡಿದ ಆಯಾಸವು ನೀನು ದಯೆತೋರಿಸಿದಲ್ಲದೆ ಶಮನವಾಗುವುದಿಲ್ಲ. ಸುಮ್ಮನೆ ನಂಬಿಸಿ ಹೊಟ್ಟೆಹೊರೆಯುವ ಬೀದಿಹೋಕರ ಮಾತುಗಳನ್ನು ಕೇಳಬೇಡ, ನಿನ್ನ ಕಷ್ಟಸುಖಕ್ಕೆ ಪಾಂಡವರಾಗುವಂತೆ ಇತರರಾಗುತ್ತಾರೆಯೆ ? ೪೩. ಪಾಂಡವರಿಗೆ ಯಾವ ಒಡಂಬಡಿಕೆಯೂ ರಕ್ಷಣೆಯೂ ಇಲ್ಲ ಎಂದು ಚೆನ್ನಾಗಿ ನಂಬಿ ಬೇರೆ ಮಾತಿಲ್ಲದೆ