________________
೪೨೪ | ಪಂಪಭಾರತಂ
ಅಯ ನಯ ಪರಾಕ್ರಮೋವಾ ಶ್ರಯಂಗಳಂ ಶ್ರೀಗಡರ್ಪುಮಾಡಿದ ನಿನ್ನಿಂ | ದ್ರಿಯ ಜಯಮ ಕೂಡ ಲೋಕ
ತಯದಿಂ ಪೊಗಟಿಸಿದುದಿಂತು ಪಿರಿಯರುಮೊಳರೇ || ಕಂil.
ಉನ್ನತನೆ ಆಗಿಯುಂ ನುಡಿ ನಯನಳವಣನಳವು ವಿನಯಮನಾದಂ | ಮನ್ನಣೆ ಗುರುಜನಮಂ ನಾ ಮನ್ನಿಸಿದುದು ಹಿರಿಯ ಸಿರಿಯೊಳೇಂ ಸುಜನತೆಯೋ | ಕುವಳಯಬಾಂಧವನಸವನ ಕುವಳಯಮಂ ಬೆಳಸಿ ಕುವಳಯಂ ಪೊಅಗೆನೆ ಪಾಂ | ಡವರ ಪೊಅಗಾಗ ನಿನಗೀ ಕುವಳಯಪತಿಯೆಂಬ ಪಂಪೊಡಂಬಡೆ ನೃಪತೀ | ೩೭ ಮನಕತದಿಂದೊರ್ವರ ನಿನಿಸನಗಲಿರ್ದಿರಿನಿಸ ನಿಮಗಂ ತಮಗಂ | ಮುನಿಸುಂಟೆ ಕಾಯ್ದ ಬೆನ್ನೀರ್ ಮನೆ ಸುಡದಂಬೊಂದು ನುಡಿಯವೊಲ್ ಕುರುರಾಜಾ || ೩೮ ಪೊಂಗುವ ಮಲಪರ ಮಲೆಗಳ ಡಂಗಂ ಕಣಲೆವ ಮಂಡಲಂಗಳ ಪ್ರತ್ಯಂ | ತಂಗಳನಲೋಳವ ಪಾಂಡವ | ರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ |.
ಯಾವ ಕಾರ್ಯವನ್ನು ಆಜ್ಞೆ ಮಾಡಲು ಬಂದಿದ್ದೀರಿ ? ಈಗ ನಿಮ್ಮ ಬರುವಿಕೆಯಿಂದ ನನಗೂ ಗೌರವವುಂಟಾಗಿದೆ ಎಂದು ಪ್ರಶ್ನೆಮಾಡಿದನು. ಆಗ -೩೪. ಆ ಸಭಾಸ್ಥಾನದಲ್ಲಿ ಕೃಷ್ಣನು ತನ್ನ ಅಭಿನಯದಿಂದಲೇ ಮಾತುಗಳನ್ನು ಜೋಡಿಸುತ್ತಿರಲು ಹಲ್ಲುಗಳ ಕಾಂತಿಯು ಹಾಸುಹೊಕ್ಕಾಗಿ ಹರಡಿ ಸಭಾಭವನವು ಪ್ರಕಾಶಮಾನವಾಗಿರಲು ಮಾತನಾಡಿದನು. ೩೫. ನಯ ನೀತಿ ಪರಾಕ್ರಮಗಳನ್ನು ಯಶೋಲಕ್ಷ್ಮಿಗೆ ಅಧೀನವನ್ನಾಗಿಸಿರುವ ಜಿತೇಂದ್ರಿಯತ್ವವು ಮೂರುಲೋಕಗಳಿಂದಲೂ ಹೊಗಳಿಸಿಕೊಳ್ಳುತ್ತಿದೆ. ನಿನ್ನಂತಹ ಹಿರಿಯರು ಯಾರಿದ್ದಾರೆ ? ೩೬. ಉನ್ನತವಾಗಿದ್ದರೂ ನಿನ್ನ ಮಾತಿನಲ್ಲಿ ಸತ್ಯಸಂಧತೆಯೂ ಶಕ್ತಿಯಲ್ಲಿ ಪರಾಕ್ರಮವೂ ಪಾಂಡಿತ್ಯದಲ್ಲಿ ವಿನಯವೂ ಹಿರಿಯರಲ್ಲಿ ಮರ್ಯಾದೆಯೂ ನಿನ್ನಲ್ಲಿ ಶೋಭಿಸುತ್ತಿವೆ. ಹೆಚ್ಚಾದ ಸಿರಿಯಿದ್ದರೂ ನಿನ್ನಲ್ಲಿ ಸೌಜನ್ಯವಿದೆ! ೩೭. ಚಂದ್ರನು ಭೂಮಿಯನ್ನೆಲ್ಲ ಬೆಳಗಿಸಿ ಕನ್ನೈದಿಲೆಗೆ ಮಾತ್ರ ಹೊರಗಾಗಿದ್ದಾನೆ ಎಂದರೆ ಸೊಗಯಿಸುತ್ತಾನೆಯೆ ? ಹಾಗೆಯೇ ಪಾಂಡವರು ಹೊರಗಾಗಿದ್ದರೆ ನಿನಗೆ ಭೂಪತಿ (ಚಕ್ರವರ್ತಿ)ಯೆಂಬ ಹಿರಿಮ ಒಪ್ಪುತ್ತದೆಯೇ ? ೩೯. ಇದುವರೆಗೆ ಏನೋ ಮನಸ್ತಾಪದಿಂದ ಒಬ್ಬರನ್ನೊಬ್ಬರು ಅಗಲಿದ್ದೀರಿ ಇಷ್ಟೇ. ನಿಮಗೂ ಅವರಿಗೂ ಕ್ರೋಧವುಂಟೆ? ದುರ್ಯೊಧನ, ಕಾದ