________________
ನವಮಾಶ್ವಾಸಂ / ೪೨೩ ಕಂll ಲೋಕ ಗುರು ಶಂಖ ಚಕ್ರ ಗ
ದಾಕರನತಿಶಯ ಚತುರ್ಭುಜಂ ಜನಜನಿತ | ವ್ಯಾಕುಳದೆ ಬಂದನೆಂದೂಡ
ಲೋಕದೊಳಿನ್ನನ್ನ ದೊರೆಗೆ ಪಿರಿಯರುಮೊಳರೇ || ೩೦ ವ|| ಎಂದು ತನ್ನ ಬೆಸನನ ಪಾರ್ದು ಲಲಾಟ ತಟ ಘಟಿತ ಮುಕುಳಿತ ಕರಕಮಳನಾಗಿರ್ದ ಮಹಾಪ್ರತಿಹಾರನ ಮೊಗಮಂ ನೋಡಿಮ!! ಬರವೇನೆಂಬುದುಮಂಜನಾಚಲದವೋಲ್ ಕಣೋ ಬರ್ಪಂಬುಜೋ
ದರನಂ ಮೆಲ್ಲನೆ ನೋಡಿ ಮೆಚ್ಚಲಸಿದಂತಂತಾನುಮತ್ತಿರ್ದು ಕೇ | ಸರಿ ಪೀಠಾಗ್ರದಿನಪ್ಪಿಕೊಂಡು ಪೊಡವಟ್ಟುಶ್ಯಾಸನಾಸೀನನಾ
ಗಿರವೇರ್ಷ್ಟಮನಿತ್ತನಂತರಮೆ ತಾಂ ಕುಳ್ಳಿರ್ದು ದುರ್ಯೋಧನಂ || ೩೧ ವ|| ಅಂತು ಮಧುಕೈಟಭಾರಾತಿಯ ಮೊಗಮಂ ನೋಡಿಕ೦ll ಸಂಸಾರದೊಳಿನ್ನೆನ್ನವೊ
ಲೇಂ ಜಿಪಂ ಪಡೆದರೂಳಗೆ ನೀಂ ಬರ ಪತೇಂ | ಕಂಸಾರೀ ಯುಷ್ಯತ್ವದ ಪಾಂಸುಗಳಿಂದಾಂ ಪವಿತ್ರಗಾತ್ರನೆನಾದಂ || ಬಂದ ಬರವಾವುದಿದು ಬಿಸ ವಂದಂ ಬೆಸನಾವುದಾವ ಬೆಸನಂ ಬೆಸಸಲ್ | ಬಂದಿರ್ ಬರವಿನೊಳೀಗಳ ಗುಂದಲೆಯಾಯ್ತನಗಮೀಗಳೆಂಬುದುಮಾಗಳ್ ||
ಭೀಷ್ಮನ ಮುಖವನ್ನು ನೋಡಿ-೩೦. ಲೋಕಗುರುವೂ ಶಂಖಚಕ್ರಗದಾಪಾಣಿಯೂ ಅತಿಶಯವಾದ ನಾಲ್ಕುತೋಳುಗಳುಳ್ಳವನೂ ಆದ ಕೃಷ್ಣನೇ ಲೋಕಪ್ರಸಿದ್ಧವಾದ ಚಿಂತೆಯಿಂದ ನನ್ನ ಬಳಿಗೆ ಬಂದಿದ್ದಾನೆ ಎನ್ನುವಾಗ ಲೋಕದಲ್ಲಿ ನನಗೆ ಸಮಾನವಾದ ಹಿರಿಮೆಯುಳ್ಳವರೂ ಇದ್ದಾರೆಯೇ ಎಂದನು. ವಗಿ ತನ್ನ ಅಪ್ಪಣೆಯನ್ನೇ ನಿರೀಕ್ಷಿಸುತ್ತ ಕೈಮುಗಿದು (ಮೊಗ್ಗಾಗಿ ಮಾಡಿದ್ದ ಕರಕಮಲವನ್ನು ಮುಖದ ಸಮೀಪದಲ್ಲಿ ಸೇರಿಸಿದ್ದು) ನಿಂತಿದ್ದ ಮಹಾದ್ವಾರಪಾಲಕನ ಮುಖವನ್ನು ನೋಡಿ-೩೧. 'ಬರಹೇಳು' ಎಂದನು. ಅಂಜನ ಪರ್ವತದಂತೆ ಕಣ್ಣಿಗೆ ಮನೋಹರವಾಗಿರುವಂತೆ ಕೃಷ್ಣನು ಪ್ರವೇಶಿಸಿದನು. ಅವನನ್ನು ನಿಧಾನವಾಗಿ ನೋಡಿ ಶರೀರಕ್ಕೆ ಏನೋ ಆಯಾಸವಾಗಿರುವಂತೆ ಹೇಗೋ ಎದ್ದು ಸಿಂಹಾಸನದಿಂದಲೇ ಆಲಿಂಗನಮಾಡಿಕೊಂಡು ನಮಸ್ಕಾರಮಾಡಿ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿದನು. ಅರ್ಭ್ಯವನ್ನು ಕೊಟ್ಟಾದಮೇಲೆಯೇ `ದುರ್ಯೊಧನನು ತಾನೂ ಕುಳಿತುಕೊಂಡನು. ವ|| ಮಧುಕೈಟಭರೆಂಬವರ ಶತ್ರುವಾದ ಕೃಷ್ಣನ ಮುಖವನ್ನು ನೋಡಿ ಹೇಳಿದನು. ೩೨. 'ಕೃಷ್ಣ, ನೀನು ಬರಲಾಗಿ ಸಂಸಾರದಲ್ಲಿ ಇನ್ನು ಮೇಲೆ ನನ್ನಂತಹ ಅದೃಷ್ಟಶಾಲಿಗಳಾದವರೂ ಇದ್ದಾರೆಯೇ ? ಮತ್ತೇನು ನಿನ್ನ ಪಾದಧೂಳಿಯಿಂದ ನಾನು ಪರಿಶುದ್ಧವಾದ ಶರೀರವುಳ್ಳವನಾಗಿದ್ದೇನೆ. ೩೩. ತಾವು ದಯಮಾಡಿಸಿದ ಕಾರಣ ಯಾವುದು ? ನಿಮ್ಮ ಆಗಮನ ಆಶ್ಚರ್ಯಕರವಾದುದು;