________________
೪೨೨/ ಪಂಪಭಾರತಂ ಮಂಜರೀಜಾಳ ಪಲ್ಲವಿತಾಸ್ಥಾನಮಂಟಪನುಮಾಗಿ ಸಭಾಮಂಟಪದೊಳೊಡೋಲಗಂಗೊನ್ನೆಡ ವಲಯದವರವರ ಪಡೆದ ಪ್ರತಿಪತ್ತಿಗಳನುದಿಕ್ಕಿದ ಲೋಹಾಸನಂಗಳೊಳಂ ಮಣಿಖಚಿತ ಕನಕ ಪೀಠಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಂ ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಶಲ್ಯ ಶಕುನಿ ಬಾತ್ಮೀಕ ಸೋಮದತ್ತ ಭಗದತ್ತ ಭೂರಿಶ್ರವಃ ಪ್ರಕೃತಿಗಳನಿರಿಸಿ ಮತ್ತಮನೇಕ ದೇಶಾದೀಶರರೆಲರುಮನಡೆಯಲಿದು ಕುಳ್ಳಿರಿಸಿ ಪೆಂಡವಾಸದೊಳೆಂಡಿರನೆರಡೂಳಿಯೋಳಮಿರಿಸಿ ನೂರ್ವರ್ ತಮ್ಮಂದಿರುಮಂ ಪಿಂತಿರಿಸಿ ಲಕ್ಕಣಂ, ಮೊದಲಾಗೆ ನೂರ್ವರ್ ಮಕ್ಕಳುಮಂ ಮುಂತಿರಿಸಿ ಯುವರಾಜನಪ್ಪಣುಗ ದುಶ್ಯಾಸನನುಮನಂಗರಾಜನಪ್ಪಣುಗಾಳ್ ಕರ್ಣನುಮನೆರಡುಂ ಕೆಲದೊಳಂ ತೊಡೆ ಸೋಂಕೆ ಕುಳ್ಳಿರಿಸಿಮಗ ನನೆಯಂಬಂ ಮಸದನ್ನರಪ್ಪ ಪಲರೊಳೊಂಡಿರ್ ಮನಂಗೊಂಡೊಯ
ನಮಂ ಕೊಳೆ ಪಾಡೆ ಜೇನ ಮತಿ ಕೊಂಡಂತಪ್ಪ ಗೇಯಂ ಮನ | ಕ್ಕೆ ನೆಲಕ್ಕಿಟ್ಟಳಮಾಗೆ ಸಂದ ರಥಿಕರ್ ಕಸ್ತೂಳ್ಳಿನಂ ತುಯೋ
ಧನನೊಡೋಲಗಮಿಂದ್ರನೋಲಗಮುಮಂ ಕೀಲಾಡಿ ಕಣೋಪುಗುಂ || ೨೯
ವli ಅಂತು ಪಿರಿರೋಲಗಂಗೊಟ್ಟಿರ್ಪನ್ನೆಗಂ ಮುನ್ನಮ ಮೂಜನೆಯ ಬಾಗಿಲೊಳ ಬಂದಿರ್ದನಂತನ ಬರವಂ ಪಡಿಯಂ ಬಿನ್ನಪಂಗೆಯ್ಕೆ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿಮಾಣಿಕ್ಯರತ್ನಕಾಂತಿಸಮೂಹದಿಂದ ಸಭಾಮಂಟಪವು ವಿರಾಜಮಾನವಾಗಿದ್ದಿತು. ಆ ಸಭಾಮಂಟಪದಲ್ಲಿ ದುರ್ಯೋಧನನು ಒದ್ದೋಲಗದಲ್ಲಿದ್ದನು. ಆ ಸಭಾಮಂಟಪದ ಮಧ್ಯೆ ಅವಕಾಶವೇ ಇಲ್ಲದೆ ಒತ್ತಾಗಿ ಅವರ ಮದ್ಯಾದಾನುಗುಣವಾಗಿ ಸಿದ್ಧಪಡಿಸಿದ್ದ ಲೋಹಪೀಠಗಳಲ್ಲಿಯೂ ರತ್ನಖಚಿತವಾದ ಸುವರ್ಣಾಸನಗಳಲ್ಲಿ ಸೇರಿಸಿರುವ ಮತ್ತೆಗಳಲ್ಲಿಯೂ ಭೀಷ್ಮ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಶಲ್ಯ, ಶಕುನಿ, ಬಾಹೀಕ, ಸೋಮದತ್ತ, ಭಗದತ್ತ, ಭೂರಿಶ್ರವರೇ ಮೊದಲಾದವರು ಕುಳಿತಿದ್ದರು. ಇತರ ಅನೇಕದೇಶಾಧೀಶರೆಲ್ಲ ತಮ್ಮ ತಮ್ಮ ಸ್ಥಾನಾನುಗುಣವಾಗಿ ಮಂಡಿಸಿದ್ದರು. ರಾಣಿವಾಸದ ಉತ್ತಮಸ್ತೀಯರು ಎರಡುಪಕ್ಕದಲ್ಲಿಯೂ ಇದ್ದರು. ನೂರುಜನ ತಮ್ಮಂದಿರೂ ಹಿಂದುಗಡೆ ಇದ್ದರು. ಲಕ್ಷಣನೇ ಮೊದಲಾದ ನೂರು ಜನ ಮಕ್ಕಳು ಮುಂಭಾಗವನ್ನಲಂಕರಿಸಿದ್ದರು. ಯುವರಾಜನೂ ಪ್ರೀತಿಯ ತಮ್ಮನೂ ಆದ ದುಶ್ಯಾಸನನೂ ಪ್ರೀತಿಯ ಸೇವಕನೂ ಅಂಗರಾಜನೂ ಆದ ಕರ್ಣನೂ ಎರಡು ಪಕ್ಕಗಳಲ್ಲಿಯೂ ತೊಡೆಸೋಂಕುವ ಹಾಗೆ ಹತ್ತಿರದಲ್ಲಿ ಕುಳಿತಿದ್ದರು. -೨೯. ಪುಷ್ಪಬಾಣವನ್ನು ಮಸೆದ ಹಾಗಿರುವ ಅನೇಕ ಒಳ್ಳೆಯ ಸ್ತ್ರೀಯರು ಆಕರ್ಷಕವಾಗಿ ಪ್ರೀತಿಯಿಂದ ಹಾಡುತ್ತಿದ್ದರು, ಜೇನಮಳೆಯನ್ನು ಸುರಿಸಿದಂತಿರುವ ಸಂಗೀತವು ಎಲ್ಲೆಡೆಯಲ್ಲಿಯೂ ವ್ಯಾಪಿಸಿದ್ದಿತು. ಮನಸ್ಸಿಗೂ ಆಸ್ಥಾನಮಂಟಪಕ್ಕೂ ರಮಣೀಯ ವಾಗಿರುವಂತೆ ಪ್ರಸಿದ್ಧವಾಗಿರುವ ರಥಿಕರು ಚಿತ್ತಾಕರ್ಷಕವಾಗಿರಲು ಆ ದುರ್ಯೊಧನನ • ಆಸ್ಥಾನಮಂಟಪವು ಇಂದ್ರನ ಸಭೆಯನ್ನು ಕೀಳಾಗಿ ಕಣ್ಣಿಗೆ ಒಪ್ಪುವಂತಿತ್ತು. ವ|| ಅಂತಹ ಒಡೋಲಗದಲ್ಲಿದ್ದ ದುರ್ಯೋಧನನಿಗೆ ಮೂರನೆಯ ಬಾಗಿಲಿನಲ್ಲಿ ಬಂದಿದ್ದ ಕೃಷ್ಣನ ಆಗಮನವನ್ನು ಪ್ರತೀಹಾರಿಯು ಬಂದು ತಿಳಿಸಲು ದುರ್ಯೊಧನನು