________________
ಅಷಮಾಶ್ವಾಸಂ | ೩೭೭ ತನ್ನ ತುಡುವ ತುಡುಗೆಗಳೆಲ್ಲಮಂ ತುಡಿಸಿ ಕಿರೀಟಿಯಂ ಕೋಟಿ ಮಾಣಿಯಿಂ ಕೊಂಡಾಡಿ ಕೆಲವು ದಿವಸಮನಿರ್ದು ತನಗವಧ್ವರುಮಸಾದ್ಧರುವಾಗಿರ್ದ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬಲುವತ್ತು ಕೋಟಿ ರಕ್ಕಸರನೆನಗೆ ಗೆಲ್ಲೀಯಲ್ವೇಚ್ಚುಮೆಂದು ಮಾತಳಿಯೆಂಬ ಸಾರಥಿವರಸು ವಿವಿಧಾಸ್ತಗರ್ಭಮಪ್ಪ ರಥಮಂ ಕೊಟ್ರೊಡದನೇಟೆ ಪೋಗಿಮ|| ದನುಜಾನೀಕದ ನಿಂದದೊಂದು ನೆಲೆಯು ಮುಟ್ಟುತ್ತ ಮಾದೇವನಿ
ತ ನಿಜೋಗ್ರಾಸ್ತದೆ ದೈತ್ಯರೆಂಬ ಹೆಸರಿಲ್ಲೆಂಬಂತುಟಂ ಮಾಡಿ ಬಂ | ದೆನಿತಾನುಂ ಮಹಿಮಾಗುಣಕ್ಕೆ ಕಣಿಯಾಗಿರ್ದೊಂದು ಪೆಂಪಿಂದಮಿಂ ದ್ರನೊಳರ್ಧಾಸನಮೇಳದೊಳು ಹರಿಗಂಗಕ್ಕುಂ ಪೆಂಗಕ್ಕುಮೇ 1 - ೨೮
ವ| ಅಂತು ದೇವಲೋಕದೊಳ್ ತನ್ನ ಮಾತ ಮಾತಾಗಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ ರಂಭೆ ಸೋಲ್ಕು ಸೈರಿಸಲಾದೇಕಾಂತದೊಳ್ ಮೇಲೆ ಬಿತ್ತೊಡೆಕಂ ಎಂದು ಪುರಂದರನರಸಿಯ
ಯಂದು ದಲೆನಗದ್ದೆಯೇ ತೊದಲ್ ನುಡಿಯದೆ ಪೋ | ಗಂಗೊಡದೊಂದಬ್ದದೊಳೆ ಬೃ ಹಂದಳೆಯಾಗೆಂದು ಮುನಿದು ಶಾಪವನಿತ್ತಳ್ ||
೨೯ ವ| ಇತೊಡೆಂತುಮಾನ್ ಪರಸ್ತ್ರೀಯರ ದೆಸೆಯೊಳಮಣ್ಣನ ನನ್ನಿಯ ವರ್ಷಾವಧಿಯೊಳ ಮೋತು ಪಿಡಿವ ನಿನ್ನ ನುಡಿಯೊಳೇ ದೋಷವೆಂದು ತನ್ನ ಶೌಚದ ಮೇಗಣ ಕಲಿತನಮುಮಂ
ಭೋಜನವನ್ನು ಮಾಡಿದನು. ಜೊತೆಯಲ್ಲಿಯೇ ತಾಂಬೂಲವನ್ನು ಸ್ವೀಕರಿಸಿದನು. ತಾನು ಧರಿಸುವ ಎಲ್ಲ ಆಭರಣಗಳನ್ನು ತೊಡಿಸಿ ಅರ್ಜುನನನ್ನು ಕೋಟಿರೀತಿಯಿಂದ ಕೊಂಡಾಡಿದನು. ಕೆಲವುದಿನಗಳಿದ್ದು ತಾನು ಕೊಲ್ಲಲು ಅಸಾಧ್ಯರಾಗಿದ್ದ ನಿವಾತಕವಚ ಕಾಲಕೇಯ ಪೌಲೋಮ ತುಳುತಾಳುಕರೆಂಬ ಅರುವತ್ತು ಕೋಟಿ ರಾಕ್ಷಸರನ್ನು ಗೆದ್ದು ಕೊಡಬೇಕು ಎಂದು ಕೇಳಿದನು. ಅರ್ಜುನನು ಸಾರಥಿಯಾದ ಮಾತಲಿಯೊಡನೆ ಕೂಡಿ ಅನೇಕ ರೀತಿಯ ಬಾಣಗಳಿಂದ ತುಂಬಿದ ತೇರನ್ನು ಹತ್ತಿ ೨೮, ರಾಕ್ಷಸ ಸಮೂಹವು ವಾಸಮಾಡುತ್ತಿದ್ದ ಸ್ಥಳವನ್ನು ಮುಟ್ಟಿದನು. ಮಹಾದೇವನು ತನಗೆ ಕೊಟ್ಟ ಭಯಂಕರವಾದ ಪಾಶುಪತಾಸ್ತದಿಂದ ಆ ರಾಕ್ಷಸರನ್ನು ಹೆಸರಿಲ್ಲದಂತೆ ಮಾಡಿ ಬಂದನು. ವಿಶೇಷ ಮಹಾತ್ಮಗೆ ಆಕರವಾದ ಗೌರವದಿಂದ ಇಂದ್ರನೊಡನೆ ಅರ್ಧಾಸನ (ಸಮಪೀಠ)ವನ್ನು ಹತ್ತುವ ಸೌಭಾಗ್ಯವು ಅರ್ಜುನನಿಗಲ್ಲದೆ ಮತ್ತಾರಿಗೆ ಸಾಧ್ಯ. ವ|| ಹಾಗೆ ದೇವಲೋಕದಲ್ಲಿ ತನ್ನ ಮಾತೇ ಮಾತಾಗಿದ್ದ ಪರಾಕ್ರಮಧವಳನ ಪೌರುಷಕ್ಕೂ ಸೌಂದರ್ಯಕ್ಕೂ ರಂಭೆಯು ಸೋತು ಸಹಿಸಲಾರದೆ ರಹಸ್ಯವಾಗಿ ಬಂದು ಮೇಲೆ ಬಿದ್ದು ತನ್ನನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದಳು. ೨೯. 'ಎಲ್ಲಿಯ ವರೆಗೆ ನೀನು ಇಂದ್ರನ ರಾಣಿಯಾಗಿದ್ದೀಯೋ ಅಲ್ಲಿಯವರೆಗೆ ನೀನು ನಿಜವಾಗಿಯೂ ನನಗೆ ತಾಯಿಯಾಗಿದ್ದೀಯೆ. ಕೆಟ್ಟ ಮಾತನಾಡದೆ ಹೋಗು ಎಂದು ಅವಳನ್ನು ಅರ್ಜುನನು ತಿರಸ್ಕರಿಸಿದನು. ರಂಭೆಗೆ ಕೋಪ ಬಂದಿತು. ಒಂದು ವರ್ಷಕಾಲ ಬೃಹಂದಳೆಯಾಗು' ಎಂದು ಶಾಪವನ್ನು ಕೊಟ್ಟಳು. ವ! ಹೇಗೂ ನಮ್ಮಣ್ಣನ ಪ್ರತಿಜ್ಞೆಯ