________________
೩೭೬ | ಪಂಪಭಾರತ ಪರಾಕ್ರಮಕ್ರಮೇಗೆಯ್ಯ ತನುಮತಿಯದೆಯುಮತಿಸ್ನೇಹದಿಂ ಪುಷ್ಪವೃಷ್ಟಿಯುಮನಾನಂದಬಾಷ್ಪ ವೃಷ್ಟಿಯುಮನೊಡನೊಡನೆ ಸುರಿದು ಪಲವು ದಿವಸಮುದ್ರೋಗ್ರತಪದೊಳ್ ಮೆಯ್ಯಂ ದಂಡಿಸಿದ ಪರಿಶಮಂ ಪೊಗೆ ಕೆಲವು ದಿವಸಮನೆಮ ಲೋಕದೊಳ್ ವಿಶಮಿಸಿ ಬರ್ಪೆ ಬಾ ಜೋಪಮಂದು ತನ್ನೊಡನೆ ರಥಮನೇಲಿಸಿಕೊಂಡು ಗಗನತಳಕೊಗೆದು ತನ್ನಮರಾವತೀಪುರಮನೆಯ್ದ ಮಗ ಬಂದೊಸಗೆಗೆ ಪೊಬಿಳಷ್ಟ ಶೋಭೆಯಂ ಮಾಡಿಸಿ ಪೊಲೀಲಂ ಪೊಕ್ಕಾಗಲ್ಮll ಪರಿತಂದಂದಮರಾವತೀಪುರದ ವಾರಸ್ತ್ರೀಯರೇನೀತನೇ
ನರನಾ ಖಾಂಡವಮೆಲ್ಲಮಂ ಶಿಖಿಗುಣಲ್ ಕೊಟ್ಟಾತನೀಗಲ್ ಮಹೇ | ಶ್ವರನಂ ಮೆಚ್ಚಿಸಿ ಮಿಕ್ಕ ಪಾಶುಪತವಂ ಪೆತ್ತಾತನೇ ಸಾಹಸಂ ಪಿರಿದುಂ ಚೆಲ್ವನುಮಪ್ಪನೆಂದು ಮನದೊಳ್ ಸೋಲ್ಕಟಂ ನೋಡಿದರ್ | ೨೭
ವ|| ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸ ಸೂಸುವ ವಾಸವಸೀಯರ ಮುಖಾಭ್ಯಾಸವ ಸಂಬಂಧಿಗಳಪ್ಪ ಶೇಷಾಕ್ಷತಂಗಳನೀಶ್ವರನಂ ಗೆಲ್ಲ ಗಲ್ಲಕ್ಕೆ ಸೇಸೆಗೊಳ್ವಂತ ಸೇಸೆಗೊಳುತ್ತುಂ ದೇವರಾಜನೊಡನೆ ದೇವಾಪ್ಟರೋನಿಚಯನಿಚಿತಮಪ್ಪ ದೇವವಿಮಾನಮಂ ಪೊಕ್ಕಾಗಳ್ ದೇವೇಂದ್ರಂ ತನ್ನೊಡನೆ ಮಜ್ಜನಂಬುಗಿಸಿ ದಿವ್ಯಾಹಾರಂಗಳನೊಡನಾರೋಗಿಸಿ ತಂಬುಲಂಗೊಂಡು
ಮೂವತ್ತು ಮೂರು ದೇವರುಗಳು ತಮ್ಮ ಪ್ರಧಾನಾಸ್ತಗಳನ್ನು ತಂದುಕೊಟ್ಟರು. ಗುಣಾರ್ಣವನಾದ ಅರ್ಜುನನು ಸಂಪೂರ್ಣ ಮನೋರಥನಾದನು. ಇಂದ್ರನು ಪರಾಕ್ರಮಧವಳನಾದ ಅರ್ಜುನನ ಶೌರ್ಯ ಪರಾಕ್ರಮಗಳಿಗೆ ಯಾವ ರೀತಿಯ ಸತ್ಕಾರ ಮಾಡಬೇಕೆಂಬುದನ್ನು ತಿಳಿಯದೆ ವಿಶೇಷವಾದ ಸ್ನೇಹದಿಂದ ಪುಷ್ಪವೃಷ್ಟಿಯನ್ನೂ ಆನಂದಬಾಷ್ಪವನ್ನೂ ಜೊತೆಜೊತೆಯಲ್ಲಿಯೇ ಸುರಿಸಿದನು. ಅನೇಕ ದಿನ ಬಹು ಕಠಿಣವಾದ ತಪಸ್ಸಿನಲ್ಲಿ ಶರೀರವನ್ನು ದಂಡಿಸಿದ್ದೀಯೆ. ಆಯಾಸಪರಿಹಾರವಾಗುವ ಹಾಗೆ ಕೆಲವು ಕಾಲ ನಮ್ಮಲೋಕದಲ್ಲಿ ವಿಶ್ರಾಂತಿಯನ್ನು ಪಡೆದು ಬರುವೆಯಂತೆ ಹೋಗೋಣ ಬಾ' ಎಂದು ತನ್ನ ಜೊತೆಯಲ್ಲಿಯೇ ತೇರನ್ನು ಹತ್ತಿಸಿಕೊಂಡು ಆಕಾಶ ಪ್ರದೇಶಕ್ಕೆ ನೆಗೆದು ತನ್ನ ರಾಜಧಾನಿಯಾದ ಅಮರಾವತೀಪಟ್ಟಣವನ್ನು ಸೇರಿದನು. ಮಗನು ಬಂದ ಸಂತೋಷಕ್ಕಾಗಿ ಪಟ್ಟಣವನ್ನು ತಳಿರು ತೋರಣಾದಿ ಎಂಟುಬಗೆಯ ಅಲಂಕಾರಗಳಿಂದ ಸಿಂಗರಿಸಿ ಪುರಪ್ರವೇಶ ಮಾಡಿಸಿದನು-೨೭. ಅಮರಾವತೀ ಪಟ್ಟಣದ ವೇಶ್ಯಾಸ್ತ್ರೀಯರು ಓಡಿ ಬಂದು ಇವನೇ ಅರ್ಜುನನೇನು! ಅಗ್ನಿಗೆ ಖಾಂಡವವನವೆಲ್ಲವನ್ನೂ ಉಣ್ಣಲು ಕೊಟ್ಟನೇನು, ಈಗ ಮಹೇಶ್ವರನನ್ನು ಮೆಚ್ಚಿಸಿ ಶ್ರೇಷ್ಠವಾದ ಪಾಶುಪತಾಸ್ತ್ರವನ್ನು ಪಡೆದವನೇ ಪರಾಕ್ರಮಶಾಲಿಯೂ ವಿಶೇಷ ಸೌಂದರ್ಯವಂತನೂ ಆಗಿದ್ದಾನೆ. ಎಂದು ಮನಸ್ಸಿನಲ್ಲಿ ಸೋತು ಪ್ರೀತಿಯಿಂದ ನೋಡಿದರು. ವ|| ಹಾಗೆ ಕಡೆಗಣ್ಣಿನ ವಿಲಾಸದಿಂದ ಕೂಡಿದ ಇಂದ್ರಲೋಕ ಸ್ತ್ರೀಯರ ಮುಖಕಮಲದ ವಧುವಿನ ಸಂಬಂಧವುಳ್ಳ ಮಂತ್ರಾಕ್ಷತೆಯನ್ನು ಈಶ್ವರನನ್ನು ಜಯಿಸಿದ ಜಯಕ್ಕೆ ಸೇಸೆಯೆಂಬಂತೆ ಸ್ವೀಕರಿಸುತ್ತ ದೇವೇಂದ್ರನೊಡನೆ ದೇವಲೋಕದ ಅಪ್ಪರಸ್ತ್ರೀಯರ ಸಮೂಹದಿಂದ ತುಂಬಿದ್ದ ದೇವವಿಮಾನವನ್ನು ಪ್ರವೇಶಿಸಿದನು. ದೇವೇಂದ್ರನು ಅರ್ಜುನನಿಗೆ ತನ್ನೊಡನೆ ಸ್ನಾನಮಾಡಿಸಿ ದಿವ್ಯಾಹಾರಗಳ ಸಹಪಂಕ್ತಿ