________________
೨೫
ಅಷ್ಟಮಾಶ್ವಾಸಂ | ೩೭೫ - ವl ಅಂತನಿಗಿ ಪೊಡವಟ್ಟುಕಂನೀನಪ್ಪುದನಣಮಣಿಯದೆ
ದಾನವ ಮಾನವ ಸುರೇಂದ್ರ ಮಣಿಮಕುಟತಟಾ | ವ್ಯಾನಪದಂಗಾ ನೆಗಟ್ಟುದ
- ನಾನೇತತೊಳೆಂತು ನೀಗುವೆಂ ನೀಂ ಬೆಸಸಾ || * ವll ಎಂದು ವಿನಯವಿನಮಿತೋತ್ತಮಾಂಗನಾಗಿ ಕರಕಮಳಂಗಳಂ ಮುಗಿದು ತನ್ನ ಮುಂದಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ವಿನಯಕ್ಕಂ ಮೆಚ್ಚಿ ಮೆಚ್ಚಿದೆಂ ಬರವಂ ಬೇಡಿ ಕೊಳೆನೆ ಮಹಾಪ್ರಸಾದಂ ಪೆತೇನುಮನೊಲ್ಲೆನನಗೆ ನಿಮ್ಮಡಿ ಪಾಶುಪತಾಸ್ತಮಂ ದಯೆಗೆಯ್ಯುದನೆ ನಿನ್ನ ತಪಶ್ಯಕ್ತಿಗಂ ಭಕ್ತಿಗೆ ಮೆಚ್ಚಿತ್ರನೆಂದುಕಂ11 ಕೇಶದ ಫಳಮರ್ದಗೊಳ್ಳದೆ -
ಈಶಂ ಮನಮೊಸೆದು ನೆಗಟ್ಟಿ ದಿವ್ಯಾಸ್ತಮನಾ | ಪಾಶುಪತಾಸ್ತಮನಿತ್ತು ವಿ ನಾಶಿತರಿಪುವಕ್ಕೆ ಹರಿಗನೆಂದಂ ದಯೆಯಿಂ ||
೨೬ ವ|| ಆಗಳೀಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಮಂಜರಿಕಾಸ್ತಮೆಂಬ ಮೋಘಾಸ್ತಮಂ ವಿಕ್ರಮಾರ್ಜುನಂಗೆ ಕುಡೆ ಮೂವತ್ತುಮೂದೇವರುಂ ತಂತಮ್ಮ ನೆಚ್ಚಿನಂಬುಗಳಂ ತಂದೀಯ ಗುಣಾರ್ಣವಂ ಸಂಪೂರ್ಣ ಮನೋರಥನಾಗಿರ್ದಾಗಳಿಂದಂ ಪರಾಕ್ರಮಧವಳನ
ಗಂಗಾನದಿ, ನದಿಯ ಪಕ್ಕದಲ್ಲಿ ಚಂದ್ರ, ಪ್ರಕಾಶಮಾನವಾಗಿರಲು ಮುಂಭಾಗದ ಕೊರಳಿನಲ್ಲಿ ಕರೆಯು ಪ್ರಕಟವಾಗಿ ಕಾಣಿಸಿಕೊಳ್ಳಲು ಶಿವನ ಪಾದಕ್ಕೆ ಅರ್ಜುನನು ತಕ್ಷಣ ನಮಸ್ಕರಿಸಿದನು. ವ| ಹಾಗೆ ಬಗ್ಗಿ ನಮಸ್ಕಾರಮಾಡಿ-೨೫. (ನನ್ನನ್ನು ಪ್ರತಿಭಟಿಸಿದವನು ಶಿವನಾದ) ನೀನು ಎಂಬುದನ್ನು ತಿಳಿಯದೆ ರಾಕ್ಷಸ, ಮನುಷ್ಯ, ದೇವೇಂದ್ರ ಇವರುಗಳ ರತ್ನಖಚಿತವಾದ ಕಿರೀಟಪ್ರದೇಶಗಳಿಂದ ಆವರಿಸಲ್ಪಟ್ಟ ಪಾದಗಳುಳ್ಳ ಶಿವನಾದ ನಿನಗೆ ನಾನು ಮಾಡಿದ ಅಪಚಾರವನ್ನು ಯಾವುದರಲ್ಲಿ ಹೇಗೆ ಕಳೆಯಲಿ ಎಂಬುದನ್ನು ನೀನೇ ಅಪ್ಪಣೆ ಕೊಡಿಸು. ವ|| ಎಂದು ವಿನಯದಿಂದ ಬಗ್ಗಿದ ತಲೆಯುಳ್ಳವನಾಗಿ (ನಮಸ್ಕರಿಸಿ) ಕರಕಮಲಗಳನ್ನು ಮುಗಿದು ತನ್ನ ಮುಂದುಗಡೆ ನಿಂತಿದ್ದ ಪರಾಕ್ರಮಧವಳನ ಪರಾಕ್ರಮಕ್ಕೂ ವಿನಯಕ್ಕೂ ಮೆಚ್ಚಿ ಶಿವನು “ಮೆಚ್ಚಿದ್ದೇನೆ ವರವನ್ನು ಕೇಳಿಕೊ' ಎಂದನು. ಅರ್ಜುನನು ಮಹಾಪ್ರಸಾದ, ಬೇರೆಯೇನೂ ಬೇಡ, ನನಗೆ ತಮ್ಮಪಾಶುಪತಾಸ್ತವನ್ನು ದಯಮಾಡಿ ಕೊಡಿಸಬೇಕು ಎಂದನು. ನಿನ್ನ ತಪ್ಪಶ್ಯಕ್ತಿಗೂ ಭಕ್ತಿಗೂ ಮೆಚ್ಚಿ ಕೊಟ್ಟಿದ್ದೇನೆ ಎಂದು ಶಿವನು ಹೇಳಿದನು. ೨೬. ಕಷ್ಟದಿಂದ ಸಂಪಾದಿಸಿದ ಫಲ ಹೃದ್ಯವಾಗದೇ ಇರುತ್ತದೆಯೇ? ಈಶ್ವರನು ಮನಃಪ್ರೀತಿಯಿಂದ ಪ್ರಸಿದ್ಧವಾದ ದಿವ್ಯಾಸ್ತವಾದ ಪಾಶುಪತಾಸ್ತ್ರವನ್ನು ದಯೆಯಿಂದ ಕೊಟ್ಟು ಅರ್ಜುನನನ್ನು 'ಶತ್ರುಗಳನ್ನು ಗೆಲ್ಲುವವನಾಗು' ಎಂದು ಹರಸಿದನು. ವ|| ಆಗ ಈಶ್ವರನು ಕೊಟ್ಟುದಕ್ಕೆ ಸಮಾನವಾದ ಬಹುಮಾನವೆಂದು ಗೌರೀದೇವಿಯು ಅಂಜರಿಕಾಸ್ತವೆಂಬ ಬಹು ಬೆಲೆಯುಳ್ಳ ಆಸ್ತವನ್ನು ವಿಕ್ರಮಾರ್ಜುನನಿಗೆ ಕೊಟ್ಟಳು.