________________
೩೭೮ ) ಪಂಪಭಾರತಂ ಸೌಭಾಗ್ಯದ ಮೇಗಣ ಬಲ್ಲಾಳನಮುಮನಿಂದ್ರಲೋಕದಿಂ ಪೊಗಟಿಸಿ ಸುಖಮಿರ್ಪನ್ನೆಗಮಿತ್ತ ವಿಕ್ರಾಂತತುಂಗನ ತಡೆದುದರ್ಕೆ ಯುಧಿಷ್ಠಿರ ಭೀಮಸೇನ ನಕುಳ ಸಹದೇವರುಂ ದೌಪದಿಯುಂ ವ್ಯಾಕುಳಚಿತ್ತರಾಗಿಸ |ಆ ದಿವ್ಯಾಸ್ತಂಗಳಂ ಸಾಧಿಸಲೆ ನೆಗಟ್ಟಿ ಪಾರಾಶರಂ ಪೇಳ ಮುನ್ನಂ
ಪೋದಂ ಸಂದಿಂದ್ರಕೀಲಕದನವಮದೇನಾದುದೋ ಕಾರ್ಯಸಿದ್ದಿ | ಪ್ರಾದುರ್ಭಾವಕ್ಕೆ ವಿಘ್ನಂ ಪಲವೊಳವಳಿಯಲ್ಕುರ್ಕುಮೇ ಬಾರದಲ್ಲಿಂ, ಪೋದಂ ವಿಕ್ರಾಂತತುಂಗಂ ಗಡಮದನಟಿಯಾಗದಿನ್ನಲ್ಲಿ ಕಾಲ್ಬಂ || ೩೦
ವ|| ಎಂದು ಪೋದ ದೆಸೆಯನಳೆಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಗಳ ದಿವೋಪದೇಶದೊಳಯ್ಯರುಂ ಗಂಧಮಾದನಗಿರಿಗೆವಂದು ತದ್ದಿರೀಂದ್ರದೊಳ್ ಭೀಮಸೇನರ ದೌಪದಿಯ ಬಯಕೆಗೆ ಧನದನ ಕೊಳದೊಳಗಣ ಕನಕಕಮಳಂಗಳಂ ತರಲೆಂದು ಪೋಗಿಕoll ಪ್ರಕಟಿತ ಸಾಹಸನಣುವ
ತು ಕೋಟಿ ಧನದಾನುಚರರನತಿ ರೌದ್ರಭಯಾ | ನಕಮಾಗೆ ಕೊಂದು ಸೌಗಂ ಧಿಕಕಾಂಚನಕಮಳಹರಣಪರಿಣತನಾದಂ ||
ವll ಮತ್ತಂ ಜಟಾಸುರನೆಂಬಸುರನನಾ ಗಿರೀಂದ್ರಕಂದರದೊಳ್ ಸೀಳು ಸೀಜುಂಬುಳಾಡಿ ಕೆಲವು ದಿವಸಮನಿರ್ದೊಂದು ದಿವಸವೊರ್ವನೆ ಬೇಂಟೆಯ ನೆವದಿಂದಲ್ಲಿಂ ತಳರ್ದು ಬಟ್ಟೆಯ ಕಣ್ಣೂಳಡ್ಡಂಬಿಟ್ಟಿರ್ದ ವೃದ್ಧ ವಾನರನಂ ಕಂಡು
ವರ್ಷಾವಧಿಯಲ್ಲಿ ಪರಸ್ತ್ರೀಯರ ಬಳಿ ಇರಬೇಕಾಗಿ ಬರುವ ಸಂದರ್ಭಕ್ಕಾಗಿ ಈ ಶಾಪವನ್ನು ಸಂತೋಷದಿಂದ ಅಂಗೀಕಾರಮಾಡುತ್ತೇನೆ. ನಿನ್ನ ಮಾತಿನಲ್ಲಿ ದೋಷ ವೇನಿಲ್ಲ ಎಂದನು. ಹೀಗೆ ತನ್ನ ಶುದ್ಧನಡತೆಯೊಡನೆ ಕೂಡಿದ ಪೌರುಷವನ್ನೂ ಸೌಭಾಗ್ಯದಿಂದ ಕೂಡಿದ ಪರಾಕ್ರಮವನ್ನೂ ಇಂದ್ರಲೋಕದವರಿಂದ ಹೊಗಳಿಸಿಕೊಂಡು ಕೆಲವುಕಾಲ ಇಂದ್ರಲೋಕದಲ್ಲಿ ಸುಖವಾಗಿದ್ದನು. ಅಷ್ಟರಲ್ಲಿ ಈ ಕಡೆ ವಿಕ್ರಾಂತತುಂಗನಾದ ಅರ್ಜುನನು ಹಿಂತಿರುಗುವುದಕ್ಕೆ ಸಾವಕಾಶಮಾಡಿದುದಕ್ಕಾಗಿ ಧರ್ಮರಾಜ, ಭೀಮ, ನಕುಳ, ಸಹದೇವ, ದೌಪದಿ ಮೊದಲಾದವರು ಚಿಂತಾಕ್ರಾಂತ ರಾದರು. ೩೦. ಪ್ರಸಿದ್ಧನಾದ ವ್ಯಾಸಮಹರ್ಷಿಯು ದಿವ್ಯಾಸ್ತಗಳನ್ನು ಪಡೆಯಲೇಬೇಕು ಎಂದು ಹೇಳಲು ಅರ್ಜುನನು ಪ್ರಸಿದ್ಧವಾದ ಇಂದ್ರಕೀಲಕ್ಕೆ ಹೋದನು. ಅದೇನಾಯಿತೋ ಫಲಪ್ರಾಪ್ತಿಯಾಗುವುದಕ್ಕೆ ಅನೇಕ ವಿಘ್ನಗಳಿವೆ. ಅದನ್ನು ತಿಳಿಯಲೂ ನಮಗೆ ಸಾಧ್ಯವಾಗುವುದಿಲ್ಲ. ಅರ್ಜುನನು ಇಂದ್ರಕೀಲದಿಂದ ಮುಂದೆ ಹೋದನೋ ಇಲ್ಲವೋ ಎಂಬುದನ್ನೂ ತಿಳಿಯಲಾಗುವುದಿಲ್ಲ; ಅವನನ್ನು ಇನ್ನೆಲ್ಲಿ ಹುಡುಕೋಣ. ವ|| ಎಂದು ಅರ್ಜುನನು ಹೋದ ದಿಕ್ಕನ್ನು ತಿಳಿಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಯ ದಿವೋಪದೇಶದಿಂದ ಅಯ್ತು ಮಂದಿಯೂ ಗಂಧಮಾದನಪರ್ವತಕ್ಕೆ ಬಂದರು. ಆ ಶ್ರೇಷ್ಠಪರ್ವತದಲ್ಲಿ ಭೀಮಸೇನನು ಬ್ರೌಪದಿಯ ಆಶೆಯನ್ನು ತೀರಿಸುವುದಕ್ಕಾಗಿ ಕುಬೇರನ ಸರೋವರದಲ್ಲಿದ್ದ ಚಿನ್ನದ ಕಮಲಗಳನ್ನು