________________
೩೬೮ | ಪಂಪಭಾರತಂ ಮಗ ನಿನಗಂ ಪೇಚಿತ್ತೊಡೆ ಪಾಂಡುರಾಜತನಯಂ ಗಾಂಡೀವಿಯಂ ದಾಯಿಗಂ
ಗೆ ನೆಲಂ ಊದಿನೊಳೊತ್ತವೋಗೆ ಬನಮಂ ಪೊಕ್ಕಣ್ಣನೆಂದೊಂದು ಮಾ || ತನಣಂ ಮಾಜಿದೆ ನಿಂದು ಶಂಕರನ ನೀನಾರಾಧಿಸಂದಿಂತಿದಂ
ಮುನಿ ಪಾರಾಶರನೊಲ್ಲು ಪೇಟ ಹರ ಬರ್ಪನ್ನಂ ತಪಂಗೆಯ್ಯಪಂ || ೫ ವ|| ಅಂತುಮಲ್ಲದೆಚಂl ಸುರಿತ ತಪೋಮಯಾನಳನಿಯೊಡಲಂ ನೆಗಟೀ ಗಿರೀಂದ್ರ ಕಂ
ದರದೊಳಗಿಂತ ದಲ್ ಕರಗಿಪಂ ಪೆಜತೇಂ ಪಡೆಮಾತೂ ಮೇಣ್ ಪುರಂ | ದರನೊಸೆದಿತ್ತುದೊಂದು ಬರದಿಂದುಜದನ್ನ ವಿರೋಧಿವರ್ಗಮಂ ಕರಗಿಪೆನಲ್ಲದಿಲ್ಲಿ ಸೆರಗ ಬೆರಗಂ ಬಗೆಯಂ ದ್ವಿಜೋತ್ತಮಾ || ಎನೆಯೆನೆ ರತ್ನ ರಶ್ಮಿ ಜಟಳಂ ಮಕುಟಂ ಮಣಿಕುಂಡಳಂ ಕನ ತನಕ ಪಿಶಂಗ ದೇಹರುಚಿ ನೀಳಸರೋಜವನಂಗಳಾಗಳು | ಇನಿತುಮರಲ್ಯವೋಲ್ ಪೊಳೆವ ಕಣ್ಣಳುಮಟ್ಕಜಿನೀಯ ವಿಕ್ರಮಾ
ರ್ಜುನನ ಮನಕ್ಕೆ ತೋಚಿದನಿಳಾಮರನಂದಮರೇಂದ್ರರೂಪಮಂ || ೭
ವ|| ಅಂತು ತನ್ನ ಸಹಜರೂಪಮಂ ತೋಟಿ ಮನದಲಿಂ ಅಲೆಂದು ಮಗನನಪ್ಪಿಕೊಂಡು
ನನ್ನ ಸ್ಥಿತಿ ಮೋಕ್ಷಸಾಧನೆಗೆ ಹೊಂದಿಕೊಳ್ಳತಕ್ಕುದಲ್ಲ; ಇದು ಇಹಲೋಕದ ಬಂಧನಕ್ಕೊಳಗಾದುದು. ಅದನ್ನು ಹೇಳದೆ ಸುಳ್ಳು ಹೇಳಿ ನಿಮ್ಮನ್ನು ಕಾಡುವುದು ನನಗೆ ಯೋಗ್ಯವಲ್ಲ. ೫. ನಿನಗೆ ಹೇಳುವುದಾದರೆ ನಾನು ಪಾಂಡುರಾಜನ ಮಗ, ಗಾಂಡೀವಿಯಾಗಿದ್ದೇನೆ. ರಾಜ್ಯವು ಜೂಜಿನಲ್ಲಿ ದಾಯಾದಿಯಾದ ದುರ್ಯೋಧನನಿಗೆ ಒತ್ತೆಯಾಗಿ ಹೋಗಲು ಅಣ್ಣನ ಮಾತನ್ನು ಸ್ವಲ್ಪವೂ ಮೀರದೆ ಅರಣ್ಯಪ್ರವೇಶಮಾಡಿ ಸ್ಥಿರವಾಗಿ ನಿಂತೆವು. ಶಂಕರನನ್ನು ಆರಾಧಿಸು ಎಂದು ವ್ಯಾಸಮಹರ್ಷಿಯು ಪ್ರೀತಿಯಿಂದ ಹೇಳಲಾಗಿ (ಅದರ ಪ್ರಕಾರ) ಈಶ್ವರನು ಪ್ರತ್ಯಕ್ಷವಾಗುವವರೆಗೆ ತಪಸ್ಸನ್ನು ಮಾಡುತ್ತೇನೆ. ವ|| ಹಾಗಲ್ಲದೆ - ೬. ಎಲೈ ಬ್ರಾಹ್ಮಣಶ್ರೇಷ್ಠನೇ ಪ್ರಕಾಶಮಾನವಾದ ತಪಸ್ಸೆಂಬ ಬೆಂಕಿಯಿಂದ ಈ ನನ್ನ ಶರೀರವನ್ನು ಪ್ರಸಿದ್ಧವಾದ ಈ ಕಣಿವೆಯಲ್ಲಿ ಹೀಗೆಯೇ ಕರಗಿಸುತ್ತೇನೆ ನನಗೆ ಬೇರೆ ಮಾತೇ ಇಲ್ಲ. ಮತ್ತು ಆ ಶಿವನು ಪ್ರೀತಿಯಿಂದ ಕೊಡುವ ಒಂದು ವರದಿಂದ ಸಾವಕಾಶ ಮಾಡದೆ ನನ್ನ ಶತ್ರುಸಮೂಹವನ್ನು ಕರಗಿಸುತ್ತೇನೆ: ಹಾಗಲ್ಲದೆ ಇಲ್ಲಿ ನಾನು ಅಪಾಯ ಉಪಾಯಗಳಾವುದನ್ನೂ ಯೋಚನೆಮಾಡುವುದಿಲ್ಲ. ೭. ಎನ್ನುತ್ತಿರುವಾಗಲೇ ರತ್ನಗಳ ಕಾಂತಿಯು ಹೆಣೆದಿರುವ ಕಿರೀಟವೂ ರತ್ನಖಚಿತವಾದ ಕಿವಿಯಾಭರಣವೂ ಹೊಳೆಯುವ ಚಿನ್ನದಂತೆ ಕೆಂಪುಮಿಶ್ರವಾದ ಹೊಂಬಣ್ಣದ ದೇಹಕಾಂತಿಯೂ ಕನ್ನೈದಿಲೆಯ ವನಗಳನ್ನು ಪೂರ್ಣವಾಗಿ ಅರಳುವ ಹಾಗೆ ಮಾಡುವ ಸಾವಿರ ಕಣ್ಣುಗಳೂ ವಿಕ್ರಮಾರ್ಜುನನ ಮನಸ್ಸಿಗೆ ಪ್ರೀತಿಯನ್ನುಂಟುಮಾಡುತ್ತಿರಲು ಆ ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರನು ತನ್ನ ನಿಜಸ್ವರೂಪವನ್ನು ತೋರಿಸಿದನು. ವll ಹಾಗೆ ತನ್ನ ಸ್ವಭಾವಸಿದ್ಧವಾದ ಆಕಾರವನ್ನು ತೋರಿಸಿ ಮನಸ್ಸಿನ ಪ್ರೀತಿಯನ್ನು