________________
ಕಂ|
ಅಷ್ಟಮಾಶ್ವಾಸಂ | ೩೬೯ ಸಾಧಿಸುವೊಡಮರಿನ್ನಪರಂ ಸಾಧಿಸುವೊಡಮಸ್ತಚಯಮನನ್ನುಂ ತನುವಂ | ಬಾಧಿಸು ತಪೋಗ್ನಿಯಿಂದಾ ರಾಧಿಸು ನೀಂ ಮಗನೆ ದುರಿತಹರನಂ ಹರನಂ ||
` ಎಂದು ತಿರೋಹಿತನಾಗಿ ಪು ರಂದರನುಂ ಪೋದನಿತ್ತ ತಪದೋಳ್ ನರನಿಂ || ತೊಂದಿ ನಿಲೆ ತಪದ ಬಿಸುಪಿಂ ಬೆಂದವಿದುದು ವನದೊಳುಳ್ಳ ತಪಸಿಯರ ತಪಂ || ೯ ಖರಕರಕಿರಣಾವಳಿಯಂ ಪರಿದುಟ್ಟಿದುವು ಹಗಲಿರುಳೂ ಶಶಿರುಚಿಯಂ | ಪರಿಭವಿಸಿ ನಭಮನಡರ್ದುವು
ನರೇಂದ್ರತಾಪಸತಪೋಮಯೂಖಾವಳಿಗಳ್ || ವ|| ಅಂತುಗೋಗ್ರತಪಂಗೆಯ್ಯ ತತ್ತಪತೃಪನವಿಪುಳಮರೀಚಿಗಳ ತಮಗೆ ತಪವಿಭಾ ತಮಂ ಮಾಡುವುದುಮಿಂದ್ರಕೀಲನಗೇಂದ್ರದ ತಪೋಧನರೆಲ್ಲಂ ನೆರೆದು ಬಂದು ಕೈಲಾಸದೊಳ್ ವಿಳಾಸಂಚರಸು ಗಿರಿಜೆಯೊಳ್ ತಳಿರ್ದ ಬಾಳೇಂದುಚೂಡಾಮಣಿಗೆ ಸಾಮಂತಚೂಡಾಮಣಿಯ ತಪಃಪ್ರಭಾವಮನಿಂತೆಂದು ಬಿನ್ನಪಂಗೆಯ್ದರ್ಮಲ್ಲಿಕಾಮಾಲೆ || ಆವನೆಂದರೆಯ ಬಾರದಪೂರ್ವನೋರ್ವನರಾತಿವಿ
ದ್ರಾವಣಂ ತಪಕೆಂದು ನಿಂತೊಡೆ ತತ್ತಪೋಮಯಪಾವಕಂ | ದಾವಪಾವಕನಂತೆವೋಲ್ ಸುಡ ಬೆಂದುವಮ್ಮ ತಪಂಗಳಿ
ನಾವ ಶೈಳದೊಳಿರ್ಪವಿರ್ಪಡೆವೇ ನೀಂ ತ್ರಿಪುರಾಂತಕಾ | ತೋರಬೇಕೆಂದು ಮಗನನ್ನು ತಬ್ಬಿಕೊಂಡು ೮. ಮಗನೇ ನೀನು ಶತ್ರುರಾಜರನ್ನು ಗೆಲ್ಲುವುದಕ್ಕಾಗಿ ಬಾಣ(ಅಸ್ತಸಮೂಹವನ್ನು ಪಡೆಯಬೇಕಾದ ಪಕ್ಷದಲ್ಲಿ ತಪೋಗ್ನಿಯಿಂದ ನಿನ್ನ ಶರೀರವನ್ನು ಇನ್ನೂ ದಂಡಿಸು, ಪಾಪವನ್ನು ಹೋಗಲಾಡಿಸುವ ಶಿವನನ್ನು ನೀನು ಆರಾಧನೆ ಮಾಡು. ೯. ಎಂಬುದಾಗಿ ಹೇಳಿ ಇಂದ್ರನು ಅದೃಶ್ಯನಾದನು. ಈ ಕಡೆ ಅರ್ಜುನನು ತಪಸ್ಸಿನಲ್ಲಿ ನಿರತನಾದನು. ತಪಸ್ಸಿನ ಬೆಂಕಿಯಿಂದ ಆ ಕಾಡಿನಲ್ಲಿದ್ದ ತಪಸ್ವಿಗಳ ತಪಸ್ಸೆಲ್ಲವೂ ಸುಟ್ಟು ನಾಶವಾದುವು. ೧೦. ರಾಜತಪಸ್ವಿಯಾದ ಅರ್ಜುನನ ತಪಸ್ಸಿನ ಕಿರಣಸಮೂಹಗಳು ಹಗಲಿನಲ್ಲಿ ಸೂರ್ಯಕಿರಣಗಳ ಸಮೂಹವನ್ನು ಹಿಮ್ಮೆಟ್ಟಿ ಎಬ್ಬಿಸಿ ಓಡಿಸಿದುವು. ರಾತ್ರಿಯಲ್ಲಿ ಚಂದ್ರನ ಕಾಂತಿಯನ್ನು ಹಿಯ್ಯಾಳಿಸಿ ಆಕಾಶಕ್ಕೇರಿದುವು. ವ|| ಹಾಗೆ ಅತ್ಯುಗ್ರವಾದ ತಪಸ್ಸನ್ನು ಮಾಡಲು ಆ ತಪೋಗ್ನಿಯ ವಿಶೇಷ ಕಿರಣಗಳು ತಮ್ಮ ತಪಸ್ಸಿಗೆ ಹಾನಿಯನ್ನುಂಟುಮಾಡಲು ಇಂದ್ರಕೀಲಪರ್ವತದಲ್ಲಿದ್ದ ತಪೋಧನರೆಲ್ಲರೂ ಒಟ್ಟುಗೂಡಿ ಬಂದು ಕೈಲಾಸಪರ್ವತದಲ್ಲಿ ವಿಳಾಸದಿಂದ ಕೂಡಿ ಪಾರ್ವತಿಯೊಡನಿದ್ದ ಶಿವನಿಗೆ ಸಾಮಂತಚೂಡಾಮಣಿಯ ತಪಸ್ಸಿನ ಪ್ರಭಾವವನ್ನು ಹೀಗೆಂದು ವಿಜ್ಞಾಪನೆಮಾಡಿದರು. ೧೧: ಯಾರೆಂದು ತಿಳಿಯಲಾಗುವುದಿಲ್ಲ. ಹಿಂದೆಂದೂ