________________
ಅಷ್ಟಮಾಶ್ವಾಸಂ ಕಂ|| ಶ್ರೀಯಂ ಭುಜಬಳದಿಂ ನಿ
ರ್ದಾಯಾದ್ಯಂ ಮಾಲ್ಪ ಬಗೆಯಿನವಿಕಳನಿಯಮ | ಶ್ರೀಯನಳವಡಿಸಿ ನಿಂದ ಧ ರಾಯುವತೀಶನನುದಾತ್ತನಾರಾಯಣನಂ || ಕಂಡು ನಿಜತನಯನಳವರ್ದ ಗೊಂಡಿರ ಮುದುಪಾರ್ವನಾಗಿ ಮೆಲ್ಲನೆ ಸಾರ್ವಾ | ಖಂಡಳನಂ ಕಾಣಲೊಡಂ
ಗಾಂಡೀವಿಗಿರದುರ್ಚಿ ಪಾಯುವಶ್ರುಜಲಂಗಳ್ | ವ|| ಅಂತು ಮನದೊಳಾದ ಮೊಹರಸಮ ಕಣ್ಣಂ ತುಳುಂಕುವಂತ ಪೋಪೊಣುವ ನಯನಜಲಂಗಳನುತ್ತರೀಯವಲ್ಕಲವಸನೋಪಾಂತದೊಳೊತ್ತುತುಮತಿಥಿಗತಿಥಿಸತ್ಕಾರಮಲ್ಲಮಂ ನಯ ಮಾಡಿದಾಗಳಿಂದ್ರಂನರೇಂದ್ರತಾಪಸನನಿಂತೆಂದಂಕಂ|| ನೀನಾರ್ಗ ನಿನ್ನ ಹೆಸರೇ
ನೀ ನಿಯಮಕ್ಕೆಂತು ಮಯ್ಯನೊಡ್ಡಿದೆಯಿದು ದಲ್ | ತಾನಾಶ್ಚರ್ಯವಿದೇನ
ಜ್ಞಾನಿಯವೋಲ್ ತಪಕೆ ಬಿಲ್ಲುಮಂಬುಂ ದೊರೆಯ | ವ|| ಎನ ಸಾಹಸಾಭರಣನಿಂತೆಂದಂಕಂil ನಿನ್ನೆಂದಂತುಟಿ ಮೋಕ್ಷ
ಕೈರ್ಪಿರವಘಟಮಾನವೃಹಿಕದ ತೊಡ | ರ್ಪಭೈರವಿನೂಳುಂಟಪದ
ನಿನ್ನಂ ಪುಸಿಯಾಡಿ ಕಾಡನಗೇಂ ದೊರೆಯೇ || ೧. ತನ್ನ ಬಾಹುಬಲದಿಂದ ಜಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಅಭಿಪ್ರಾಯದಿಂದ ಸ್ವಲ್ಪವೂ ಊನವಿಲ್ಲದ ತಪೋನಿಷ್ಠೆಯೆಂಬ ಲಕ್ಷಿಯೊಡನೆ ಕೂಡಿಕೊಂಡು ತಪಸ್ಸು ಮಾಡುತ್ತಿದ್ದ ಭೂಪತಿಯೂ ಉದಾತ್ತ ನಾರಾಯಣನೂ ಆದ ಅರ್ಜುನನನ್ನು ಇಂದ್ರನು ಕಂಡನು. ೨. ತನ್ನ ಮಗನ ಪರಾಕ್ರಮವನ್ನು ನೋಡಿ ಎದೆಯು ಸೂರೆಗೊಂಡಿತು. ಮುದಿಬ್ರಾಹ್ಮಣನ ವೇಷದಲ್ಲಿ ಬರುತ್ತಿದ್ದ ಇಂದ್ರನನ್ನು ನೋಡಿ ಅರ್ಜುನನಿಗೆ ಕಣ್ಣೀರು ಥಟ್ಟನೆ ಚಿಮ್ಮಿತು. ವ|| ಹಾಗೆ ಮನಸ್ಸಿನಲ್ಲುಂಟಾದ ಮೊಹರಸವೇ ಕಣ್ಣಿನಿಂದ ತುಳುಕುವಂತೆ ಹೊರಹೊರಡುವ ಕಣ್ಣೀರನ್ನು ಮೇಲೆ ಹೊಡೆದಿದ್ದ ನಾರುಮಡಿಯ ಅಂಚಿನಿಂದ ಒರೆಸಿಕೊಳ್ಳುತ್ತ ಅತಿಥಿಯಾದ ಇಂದ್ರನಿಗೆ ಅತಿಥಿಸತ್ಕಾರವೆಲ್ಲವನ್ನೂ ಮಾಡಿದಾಗ ಇಂದ್ರನು ರಾಜತಪಸ್ವಿಯಾದ ಅರ್ಜುನನನ್ನು ಕುರಿತು ಪ್ರಶ್ನೆ ಮಾಡಿದನು.೩. ನೀನಾರವನು? ನಿನ್ನ ಹೆಸರೇನು ? ಈ ನಿಯಮಕ್ಕೆ ಶರೀರವನ್ನು ಏಕೆ ಅಧೀನಗೊಳಿಸಿದೆ. ಇದು ನಿಜವಾಗಿಯೂ ಆಶ್ಚರ್ಯ. ಅಜ್ಞಾನಿಯ ಹಾಗೆ ಇದೇನು ತಪಸ್ಸಿಗೆ ಯೋಗ್ಯವಲ್ಲದ ಬಿಲ್ಲು ಬಾಣಗಳನ್ನು ತೊಟ್ಟಿದ್ದೀಯಲ್ಲ, ವಗ ಎನ್ನಲು, ಸಾಹಸಾಭರಣನಾದ ಅರ್ಜುನನು ಹೀಗೆಂದನು. ೪. ನೀನು ಹೇಳಿದ ಹಾಗೆಯೇ