________________
೩೬೬ | ಪಂಪಭಾರತಂ
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ - ವರಪ್ರಸಾದೋತ್ಪನ್ನಪ್ರಸನ್ನಗಂಭೀರವಚನರಚನ ಚತುರಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್
ಸಪ್ತಮಾಶ್ವಾಸಂ
ಯಾಚಕವರ್ಗಕ್ಕೆ ಚಿಂತಾಮಣಿಯೂ ಸಾಮಂತಚೂಡಾಮಣಿಯೂ ಆದ ಅರ್ಜುನನನ್ನು ಇಂದ್ರನು ಬಂದು ಕಂಡನು.
ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಏಳನೆಯ ಆಶ್ವಾಸ.