________________
ಮ||
ಸಪ್ತಮಾಶ್ವಾಸಂ | ೩೪೫
ಪಿರಿದುಂ ಕಾಯ್ದಿನೊಳೆಯೇ ಕಾಯ್ದ ಸಮಕಟ್ಟಂ ದೋಷಮಲಕ್ಕ ಮ ಚರಮುಂ ಮೋಘಮೊಡಂಬಡುಂ ಕಲುಷಮುಂ ಮುನ್ನುಳ್ಳುದಂತೆತ್ತಿಯುಂ | ಪೊರೆಯುಂ ಪಂತಮುಮಿಲ್ಲದಂತೆ ಮನದೊಳ್ ನಿಷ್ಕಾರಣಂ ಕಾಯ್ಕರಂ ಪರ ಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳೆನಿಲ್ಲಾಗದೇ || ವ|| ಎಂದು ತನ್ನೊಳ ಬಗೆದು ಭಾನುಮತಿಯನಿಂತೆಂದಂ
ಮ|| ಸುರಿಯಲೇಡಮದರ್ಕೆ ಬಾಷಜಳಮಂ ನಿನ್ನಾಣ್ಯನಂ ನಿನ್ನೊಳಿಂ
ದಿರದಾಂ ಕೂಡುವವಮೊಳಾದ ಕಲಹಕ್ಕೆಂತಾದೊಡಂ ಕೇಳ ನೂ | ರ್ವರೆ ದಲ್ ಕೌರವರಾಮುಮಯ್ಯರ ವಲಂ ಮತ್ತೊರ್ವರೊಳ್ ತೊಟ್ಟ ಸಂ ಗರರಂಗಕ್ಕೆ ಜಸಕ್ಕೆ ಕೂಡುವೆಡೆಯೊಳ್ ನೂಅಯ್ಯರಾವಲ್ಲವೇ ||
Qと
2.99
ವ|| ಎಂದು ಯುಧಿಷ್ಠಿರಂ ಪಾಟಿಯ ಪಸುಗೆಯನಂದು ನುಡಿದೊಡಾ ಪೂಣ್ಣ ಬೆಸನಂ ಕರಮಾಸೆವಟ್ಟು ತನ್ನ ಕೆಲದೊಳಿರ್ದ ಸಾಹಸಾಭರಣನ ಮೊಗಮಂ ನೋಡಿ
ಕಂ!!
ಪಿಡಿದುಯುದು ಗಂಧರ್ವರ
ಪಡೆ ಗಡ ನಿಮ್ಮಣ್ಣನಂ ಸುಯೋಧನನನಿದಂ |
ಕಡೆಗಣಿಸಲಾಗ ನಮಗೀ
ಗಡ ಬೇಗಂ ಬಿಡಿಸಿ ತರ್ಪುದಾತನ ಜಯಂ ||
22
ವ|| ಎಂಬುದುಂ ಮಹಾಪ್ರಸಾದಮಂತೆಗೆಯ್ದನೆಲ್ಲಿವೊಕ್ಕೊಡು ಕೊಂಡು ಬಂದಪೆನೆಂದು ಬಗೆಯದಿದಿರು ನೋಡುತ್ತಿರಿಯೆಂದು ತವದೊಣೆಗಳು ಬಿಗಿದು ಗಾಂಡೀವಮನೇಟಿಸಿ ನೀವಿ
ಕಾರಣವನ್ನು ತಿಳಿದು ೩೫. ಈಗ ವಿಶೇಷವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ ತಾಯಿ! ಅಸೂಯೆಯೂ ವ್ಯರ್ಥವಾದ ತೊಂದರೆಯೂ ದ್ವೇಷವೂ ದುರ್ಯೋಧನನಿಗೆ ಸಹಜವಾದುದೇ. ಅದನ್ನೇ ಅನುಸರಿಸಿಕೊಂಡು ನಾನು ದುಃಖದಿಂದ ನಿಷ್ಕಾರಣವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ, ಇತರರಿಗೆ ಹಿಂಸೆಮಾಡುವ ಸ್ವಭಾವವು ನನ್ನಿಂದ ದೂರವಿರಲಿ ಎಂಬ ಮಾತನ್ನು ನಾನು ಹಿಂದೆಯೇ ಕೇಳಿಲ್ಲವೇ ? ವ|| ಎಂದು ತನ್ನಲ್ಲಿ ಯೋಚಿಸಿ ಭಾನುಮತಿಯನ್ನು ಕುರಿತು ಹೀಗೆಂದನು. ೩೬. ಇದಕ್ಕಾಗಿ ನೀನು ಕಣ್ಣೀರನ್ನು ಸುರಿಸಬೇಡ; ಸಾವಕಾಶಮಾಡದೆ ನಿನ್ನ ಗಂಡನನ್ನು ಈ ದಿನವೇ ತಂದು ಸೇರಿಸುವೆವು; ಕೇಳಮ್ಮ ನಮ್ಮ ಮನೆಯಲ್ಲಿಯೇ ಉಂಟಾದ ಜಗಳಕ್ಕೆ ಕೌರವರು ನೂರು ಜನ, ನಾವು ಅಯ್ದು ಜನವೇ ದಿಟ. ಆದರೆ ಮತ್ತೊಬ್ಬರಲ್ಲಿ ಉಂಟಾದ ಯುದ್ಧ ಸೇರುವ ಸಂದರ್ಭದಲ್ಲಿ ನಾವು ನೂರೈದು ಜನವಲ್ಲವೇ? ವ| ಎಂದು ಧರ್ಮರಾಜನು ಧರ್ಮದ ವಿವೇಕವನ್ನು ತಿಳಿಯುವ ಹಾಗೆ ಹೇಳಿ ತಾನು ಪ್ರತಿಜ್ಞೆ ಮಾಡಿದ ಕಾರ್ಯವನ್ನು ಶೀಘ್ರವಾಗಿ ಸಾಧಿಸಲು ಮನಸ್ಸು ಮಾಡಿ ತನ್ನ ಪಕ್ಕದಲ್ಲಿದ್ದ ಸಾಹಸಾಭರಣನಾದ ಅರ್ಜುನನ ಮುಖವನ್ನು ನೋಡಿ-೩೭. ನಿಮ್ಮಣ್ಣ ನಾದ ದುರ್ಯೋಧನನನ್ನು ಗಂಧರ್ವಸೈನ್ಯವು ಹಿಡಿದುಕೊಂಡು ಹೋಗಿದೆ. ನಾವು ಇದನ್ನು ಕಡೆಗಣಿಸಬಾರದು; ಈಗಲೇ ಬೇಗ ಆತನ ಬಂಧನವನ್ನು ಬಿಡಿಸಿ ತರತಕ್ಕದ್ದು. ವ|| ಎನ್ನಲು ಮಹಾಪ್ರಸಾದ, ಹಾಗೆಯೇ ಮಾಡುತ್ತೇನೆ; ಎಲ್ಲಿ ಹೊಕ್ಕಿದ್ದರೂ
1
1