________________
೩೪೬ | ಪಂಪಭಾರತಂ ಜೇವೊಡೆದು ಗಂಧರ್ವರ ಪೋಪ ಬಡಿಯಂ ಬೆಸಗೊಂಡು ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ತನ್ನ ಕಣ್ಣನಭಿಮಂತ್ರಿಸಿಕೊಂಡು ಪಾಳುವ ಗಂಧರ್ವಬಲಮಂ ಜಲಕೃನೆ ಕಂಡು
ಕ೦ll ಕೊಳ್ ಕೊಳ್ಳೆಂದೆತ್ತೊಡೆ ಎಳ
ಯೋಳದ ತೆಳದಿಂದ ಮುಸುಳಿ ದಿವ್ಯಾಸ್ತಚಯಂ | ಗಳ ಕೊಳೆ ಗಾಂಧರ್ವಬಲಂ
ಗಳ ಕಡೆದುವು ಮಿಟ್ಟೆಗೊಂಡ ಚಿಟ್ಟೆಯ ತಳದಿಂ || ೩೮ ವ|| ಅಂತಲ್ಲಿ ಪದಿನಾಲ್ಟಾಸಿರ್ವರ್ ಗಂಧರ್ವರಂ ಕೊಂದೊಡೆ ಚಿತ್ರಾಂಗದಂ ಚರ್ಚಿ ಕೊಳೆ ನಿನ್ನ ನೆಚ್ಚಿನ ಸೆಳೆಯನೆಂದು ಬಿಸುಟೊಡೆ ನೋಯಲೀಯದ ನೆಲದಾಕಾಶದೆಡೆ ಯೋಳಂಬುಗಳಂ ತರತರದಿಂದೆಚ್ಚು ಸೋಪಾನ ಮಾಡಿ ದುರ್ಯೋಧನ ದುಶ್ಯಾಸನರನಿಟಿಪಿ ಕಟುಗಳಂ ಬಿಡದೊಡಗೊಂಡು ಬಂದು ಧರ್ಮಪುತ್ರಂಗೆ ತೋಚಿದೊಡೆ ಸಾಹಸಾಭರಣನ ಸಾಹಸಮನಳವಲ್ಲದೆ ಪೊಗಟ್ಟು ತೊಡೆಯನೇಟಿಸಿಕೊಂಡು ಬಾಯೊಳ್ ತಂಬುಲಂಗೋಟ್ಟಂ ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿರ್ದೆಳಿದಿಕೆಗೆ ಸಂತಸಂಬಟ್ಟು ಸೈರಿಸಲಾಟದಿಂತೆಂದಳಕಂ|| ಎಮ್ಮಂ ಪಿಡಿದೆವಂದಿನ
ನಿಮ್ಮದಟುಗಳೀಗಳೆತ್ತವೋದುವೊ ಪಿಡಿವ | ಟ್ವಿಮ್ಮ ಬಬಲ್ಲಿರೆ ಕಂಡಿರೆ ನಿಮ್ಮಳವಂ ನಿಮಗಮಾಗಳೀಯಡರಾಯೇ ||
೩೯ ಕೊಂಡುಬರುತ್ತೇನೆ, ಆ ವಿಷಯವಾಗಿ ಚಿಂತಿಸದೆ ನಿರೀಕ್ಷಣೆ ಮಾಡುತ್ತಿರಿ ಎಂದು ತನ್ನ ಅಕ್ಷಯತೂಣೀರವನ್ನು ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯನ್ನೇರಿಸಿ ನೀವಿ ಶಬ್ದಮಾಡಿ ನೋಡಿ ಗಂಧರ್ವರು ಹೋದ ದಾರಿಯನ್ನು ಹುಡುಕಿಕೊಂಡು ಹೊರಟನು. ಹಿಮವತ್ವರ್ವತದಲ್ಲಿ ರಾಕ್ಷಸಿಯು ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂದ ತನ್ನ ಕಣ್ಣನ್ನು ಅಭಿಮಂತ್ರಿಸಿಕೊಂಡು ನೋಡಲು ಹಾರಿಹೋಗುತ್ತಿದ್ದ ಗಂಧರ್ವಸೈನ್ಯವನ್ನು ಸ್ಪಷ್ಟವಾಗಿ ಕಂಡನು. ೩೮. ತೆಗೆದುಕೊ ತೆಗೆದುಕೊ ಎಂದು ಹೊಡೆಯಲಾಗಿ ದಿವ್ಯಾಸ್ತಗಳ ಸಮೂಹವು ಪ್ರಳಯಕಾಲದ ಬೆಂಕಿಯ ಚೂರಿನಂತೆ ಮುತ್ತಿ ನಾಟಲಾಗಿ ಗಂಧರ್ವಸೈನ್ಯಗಳು ಮಣ್ಣು ಹೆಂಟೆಯು ತಗುಲಿದ ಚಿಟ್ಟೆಯ ಹುಳುವಿನ ಹಾಗೆ ಉರುಳಿ ಬಿದ್ದುವು. ವ! ಅಲ್ಲಿ ಹದಿನಾಲ್ಕು ಸಾವಿರ ಗಂಧರ್ವರನ್ನು ಕೊಲ್ಲಲು ಚಿತ್ರಾಂಗದನು ಹೆದರಿ ನಿನ್ನ ಪ್ರೀತಿಪಾತ್ರವಾದ ಬಂದಿಯನ್ನು ತೆಗೆದುಕೋ ಎಂದು ದುರ್ಯೊಧನ ಮತ್ತು ದುಶ್ಯಾಸನರನ್ನು ಬಿಸಾಡಿದನು. ಅವರು ನೋಯುವುದಕ್ಕೆ ಅವಕಾಶ ಕೊಡದೆ ಭೂಮ್ಯಾಕಾಶಗಳ ಮಧ್ಯದಲ್ಲಿ ಬಾಣಗಳನ್ನು ವಿಧವಿಧವಾಗಿ ಪ್ರಯೋಗಮಾಡಿ ಮೆಟ್ಟಿಲು ಗಳನ್ನು ಕಟ್ಟಿ ದುರ್ಯೊಧನ ದುಶ್ಯಾಸನರನ್ನು ಇಳಿಸಿ ಕಟ್ಟುಗಳನ್ನು ಬಿಡಿಸದೆಯೆ ಕರೆತಂದು ಧರ್ಮರಾಯನಿಗೆ ತೋರಿಸಿದನು. ಅವನು ಸಾಹಸಾಭರಣನ ಸಾಹಸವನ್ನು ಅಳತೆಯಿಲ್ಲದಷ್ಟು ಹೊಗಳಿ ತೊಡೆಯಮೇಲೆ ಕುಳ್ಳಿರಿಸಿಕೊಂಡು ಬಾಯಲ್ಲಿ ತಾಂಬೂಲ ವನ್ನು ಕೊಟ್ಟನು. ಬ್ರೌಪದಿಯು ಶತ್ರುಗಳು ಕಟ್ಟುಗಳನ್ನು ಕಟ್ಟಿಸಿಕೊಂಡು ಅವಮಾನ ಪಟ್ಟುದಕ್ಕೆ ಸಂತೋಷಪಟ್ಟು ಸಹಿಸಲಾರದೆ ಹೀಗೆಂದಳು-೩೯. ನಮ್ಮನ್ನು ಹಿಡಿದೆಳೆದ