________________
೩೪೪) ಪಂಪಭಾರತಂ ಮೂಗನರಿದರೆಂಬಂತನಿಬರಂ ಬಾಯಂ ಬಿಟ್ಟು ನೋಡ ನೋಡ ಪೂರ್ವಜನ್ಮದ ಪಗೆ ಚಿತ್ರಾಂಗದನೆಂಬ ಗಂಧರ್ವನಲುವತ್ತು ಕೋಟಿ ಗಾಂಧರ್ವಬಲಂಬೆರಸು ಬಂದು ದುರ್ಯೋಧನ ದುಶ್ಯಾಸನರಿರ್ವರುಮಂ ಕೋಡಗಗಟ್ಟುಗಟ್ಟಿಚಂ|| ಮಿಡುಕದೆ ಭೀಷ್ಮ ನೋಡುತಿರು ಕುಂಭಜ ಸುರ್ಕಿರು ಕರ್ಣ ಮಿಕ್ಕು ಮಾ
ರ್ನುಡಿಯದ ಮೂಗುವಟ್ಟರು ಗುರು ಪ್ರಿಯನಂದನ ಕೂಗಡಂಗದಿ | ರ್ದೂಡೆ ಬರ್ದು ಕಾವುದಿರ್ ಪೊಡರ್ದೊಡೀಗಡ ಕೊಂದಹೆನೆಂದು ಕೂಡ ಕ ಇಡೆ ಜಡಿದುಯ್ದನಾ ಖಚರನಿರ್ವರುಮಂ ಪರಮಾಣುಮಾರ್ಗದಿಂ || ೩೩
ವ|| ಅಂತುಯ್ಯುದುಂ ನೆಗuಯ ಬೀರರೆಲ್ಲಂ ಬಡವರ ಪಿತರರಂತೆ ಮಿಕ್ಕಳ ನೋಡುತ್ತಿರೆ ಮಿಕ್ಕುದುಂಡರಂತ ತಲೆಯಂ ಬಾಗಿ ಬಿಲ್ಗಳಂ ಮುಂದಿಟ್ಟು ಬಿಲ್ಲುಂ ಬೆಳಗುಮಾಗಿರೆ ಸುಯೋಧನನ ಮಹಾದೇವಿ ಭಾನುಮತಿ ಬಾಯಟೆದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲ ಮೇಲೆ ಕವಿದುಪಟ್ಟುಕಂ|| ನೋಂತರ ಪಗೆವರನು
ದಂತಾಯ್ತಂದಿರದ ಪುರುಷಕಾರದ ಪಂಪಂ | ಚಿಂತಿಸಿ ತರಿಸಿ ಮಹೀಶನ
ನಂತಪೊಡಮನಗೆ ಪುರುಷಭಿಕ್ಷಮನಿಕ್ಕಿಂ | ವಗಿ ಎಂದು ಪುಯ್ಯಲಿಡುವ ಭಾನುಮತಿಯ ಪುಯ್ಯಲಂ ಕೇಳು ಸುಯೋಧನಂ ಬಂದ ವೃತ್ತಾಂತವನಳಿದು
ಕತ್ತರಿಸಿದರು' ಎಂಬಂತೆ ಎಲ್ಲರೂ ಆಶ್ಚರ್ಯದಿಂದ ಬಾಯಿಬಿಟ್ಟುಕೊಂಡು ನೋಡುತ್ತಿದ್ದ ಹಾಗೆಯೇ ಹಿಂದಿನ ಜನ್ಮದ ಶತ್ರುವಾದ ಚಿತ್ರಾಂಗದನೆಂಬ ಗಂಧರ್ವನು ಅರುವತ್ತು ಕೋಟಿ ಗಂಧರ್ವಸೈನ್ಯದೊಡನೆ ಕೂಡಿ ಬಂದು ದುರ್ಯೊಧನ ದುಶ್ಯಾಸನರಿಬ್ಬರನ್ನೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿದನು. ೩೩. 'ಭೀಷ್ಮ ಅಳ್ಳಾಡದೆ ನೋಡುತ್ತಿರು, ದ್ರೋಣನೇ ಮುದುರಿಕೊಂಡಿರು; ಕರ್ಣನೇ ಮೀರಿ ಮಾತನಾಡದೆ ಮೌನವಾಗಿರು; ಅಶ್ವತ್ಥಾಮ ನಿನ್ನ ಕೂಗು ಅಡಗದಿದ್ದರೆ ನಿನಗೆ ಬದುಕುವುದೆಲ್ಲಿ ಬಂತು, ಸುಮ್ಮನಿರು; ಜಂಬಮಾಡಿದರೆ ಈಗಲೆ ಕೊಲ್ಲುತ್ತೇನೆ' ಎಂದು ಅವರೆಲ್ಲರೂ ಹೆದರುವಂತೆ ಬೆದರಿಸಿ ಇಬ್ಬರನ್ನೂ ಆ ಚಿತ್ರಾಂಗದನು ಆಕಾಶಮಾರ್ಗದಿಂದ ಎತ್ತಿಕೊಂಡು ಹೋದನು. ವ|| ಹಾಗೆ ಎತ್ತಿಕೊಂಡು ಹೋಗಲು ಪ್ರಸಿದ್ಧರಾದ ವೀರರೆಲ್ಲ ಬಡವರ ತಂದೆಯರಂತೆ ಮಿಟಮಿಟನೆ ನೋಡುತ್ತಿದ್ದರು. ಎಂಜಲನ್ನು ತಿಂದವರಂತೆ ತಲೆಯನ್ನು ತಗ್ಗಿಸಿಕೊಂಡರು. ಬಿಲ್ಲುಗಳನ್ನು ತಮ್ಮ ಮುಂದಿಟ್ಟುಕೊಂಡು ಆಶ್ಚರ್ಯಚಕಿತರಾಗಿ ಏನು ಮಾಡಲೂ ತೋರದಿದ್ದರು, ದುರ್ಯೊಧನನ ಮಹಾರಾಣಿಯಾದ ಭಾನುಮತಿಯು ಅಳುತ್ತಲೂ ಅರಚುತ್ತಲೂ ಬಂದು ಧರ್ಮರಾಜನ ಕಾಲಿನ ಮೇಲೆ ಕವಿದು ಬಿದ್ದಳು. ೩೪. 'ತಾನೇ ಕೊಲ್ಲಬೇಕೆಂದು ಒತಮಾಡುತ್ತಿದ್ದವರ ಹಗೆಯನ್ನು ಎತ್ತು ಇರಿದ ಹಾಗಾಯ್ತು ಎಂದು ಸುಮ್ಮನಿರದೆ ಪುರುಷಪ್ರಯತ್ನದ ವೈಭವವನ್ನು ಯೋಚಿಸಿ ಹೇಗಾದರೂ ಮಹಾರಾಜನನ್ನು ತರಿಸಿ ನನಗೆ ಪುರುಷಭಿಕ್ಷೆಯನ್ನು ಕೊಡಿ' ವಎಂದು ಕೂಗಿಕೊಳ್ಳುತ್ತಿರುವ ಭಾನುಮತಿಯ ಗೋಳನ್ನು ಕೇಳಿ ದುರ್ಯೋಧನನು ಬಂದ