________________
೩೨
ಸಪ್ತಮಾಶ್ವಾಸಂ / ೩೪೩ ಕblು. ಲಾಕ್ಷಾಗೃಹಮಂ ಪುಗಿಸಲು
ಮಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಓಂ | ಗಾಕ್ಷಂಗೆಟ್ಟು ಸೈರಿಸ
ದಾಕ್ಷೇಪದಿನೆಮ್ಮನಿಲ್ಲಿ ಛಿದ್ರಿಸ ಬಂದೈ ||
ವಗಿರಿ ಎಂದು ನಿನ್ನಂ ಪರಿಭವಕ್ಕೆ ತಂದು ನಿನ್ನ ಯಶಮಂ ಕಿಡಿಸಿದೆವಿನ್ ಕೊಂದೊಡೇಮದ ಪುದೆಂದು ದುರ್ಯೋಧನನಲ್ಲಿಗೆ ಪೋಗೆಂದು ಕಟ್ಟಿದ ಕಟ್ಟುಗಳಂ ಬಿಟ್ಟು ಕಳೆದೊಡೆ ಜಯದ್ರಥಂ ಸಿಗಾಗಿ ಕೈಲಾಸದೊಳೀಶ್ವರಂಗೆ ತಪಂಗೆಯ್ದು ಮೆಚ್ಚಿಸಿ ಪಾಂಡವರನೊಂದು ದವಸದನುವರದೊಳ್ ಗೆಲ್ಸನಕ್ಕೆಂದು ಬರಂಬಡೆದು ಪೋದನಿತ್ತ ದುರ್ಯೊಧನಂ ಸಮಸ್ತಸಾಧನಸಹಿತನಾಗಿ ಕಾಡೊಳ್ ಬೇಡರಂತ, ತೋಟ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಮನ್ಯನವರಿಂ ನೋಡಿಸುವುದಮಾಯೆರಡೆ ಸಂಸಾರಫಲವೆಂದು ನಾಗಪುರದಿಂ ಪೊಣಮಟ್ಟು ದುಶ್ಯಾಸನಾದಿಗಳಪ್ಪ ನೊರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಮೆಂಬ ಬೇಟದರಸಿಯರುಂ ಲಕ್ಷಣಂ ಮೊದಲಾಗೆ ನೂರ್ವರ್ ಮಕ್ಕಳುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಕೃತಿಗಳುಮಶ್ವತ್ಥಾಮ ಕರ್ಣ ಶಲ್ಯ ಶಕುನಿ ಸೈಂಧವ ಪ್ರಮುಖನಾಯಕರುಂಬೆರಸು ಬೇಂಟೆಯ ನೆವದಿಂ ಬಂದು ದೈತವನದ ಕೆಲದ ನಂದನವನದೊಳ್ ಪಾಂಡವರ್ಗ ಸಮೀಪಮಾಗೆ ಬೀಡಂ ಬಿಟ್ಟು ಮಾಡಿಸುತ್ತುಂ ಪೊಗಟಿಸುತ್ತಮಿರ್ದನನ್ನೆಗಂ ಪಗೆಯಿಳಿಯಬಂದರ
ಬ್ರೌಪದಿಯೊಡನೆ ಬೀಡಿಗೆ ಬಂದು ಧರ್ಮರಾಜನಿಗೆ ತೋರಿದರು. ೩೨. 'ಅರಗಿನ ಮನೆಯನ್ನು ಪ್ರವೇಶಮಾಡಿಸಲೂ ಪಗಡೆಯಾಟದಿಂದ ರಾಜ್ಯವನ್ನು ಕಸಿದುಕೊಳಲೂ ದುರ್ಯೋಧನನಿಗೆ ಪ್ರೇರೇಪಿಸಿ (ಅಷ್ಟಕ್ಕೆ ತೃಪ್ತಿಪಡದೆ ನಮ್ಮನ್ನು ದೌಷ್ಟದಿಂದ ಇಲ್ಲಿಯೂ ಭೇದಿಸಲು ಬಂದೆಯಾ ?' ವು 'ನಿನ್ನನ್ನು ಅವಮಾನ ಪಡಿಸಿ ನಿನ್ನ ಯಶಸ್ಸನ್ನು ಕೆಡಿಸಿದೆವು. ಇನ್ನು ನಿನ್ನನ್ನು ಕೊಂದರೆ ಏನು ಬರುತ್ತದೆ,' ದುರ್ಯೊಧನನ ಹತ್ತಿರಕ್ಕೆ ಹೋಗಿ ಬದುಕು ಎಂದು ಕಟ್ಟಿದ್ದ ಕಟ್ಟುಗಳನ್ನೆಲ್ಲ ಬಿಚ್ಚಿ ಕಳುಹಿಸಲು ಸೈಂಧವನು ನಾಚಿಕೆಗೊಂಡು ಕೈಲಾಸದಲ್ಲಿ ಈಶ್ವರನನ್ನು ಕುರಿತು ತಪಸ್ಸುಮಾಡಿ ಮೆಚ್ಚಿಸಿ , “ಪಾಂಡವರನ್ನು ಒಂದು ದಿನದ ಯುದ್ದದಲ್ಲಿಯಾದರೂ ಗೆಲ್ಲುವಂತಾಗಲಿ' ಎಂದು ವರವನ್ನು ಪಡೆದು ಹೋದನು. ಈ ಕಡೆ ದುರ್ಯೊಧನನು ಕಾಡಿನಲ್ಲಿ ಬೇಡರಂತೆ ತೊಳಲುತ್ತಿರುವ ಜ್ಞಾತಿಗಳ ಬಾಡಿ ಕೃಶವಾದ ಮುಖಗಳನ್ನು ನೋಡುವುದೂ ವೈಭವಯುಕ್ತವಾದ ತನ್ನನ್ನು ಅವರಿಂದ ನೋಡಿಸುವುದೂ ಇವೆರಡೇ ಸಂಸಾರದ ಫಲವೆಂದು (ಭಾವಿಸಿ) ಸಮಸ್ತ ಸಲಕರಣೆಗಳೊಡನೆ ಹಸ್ತಿನಾಪುರದಿಂದ ಹೊರಟು ಧುಶ್ಯಾಸನನೇ ಮೊದಲಾದ ನೂರ್ವರು ತಮ್ಮಂದಿರನ್ನೂ ಭಾನುಮತಿ ಮತ್ತು ಚಂದ್ರಮತಿ ಎಂಬ ಇಬ್ಬರು ಪ್ರೀತಿಪಾತ್ರರಾದ ರಾಣಿಯರನ್ನು ಲಕ್ಷಣನೇ ಮೊದಲಾದ ನೂರುಜನ ಮಕ್ಕಳನ್ನೂ ಭೀಷ್ಮ ದ್ರೋಣ ಕೃಪ ವಿದುರ ಮೊದಲಾದ ಪ್ರಬೃತಿಗಳನ್ನೂ ಅಶ್ವತ್ತಾಮ, ಕರ್ಣ,ಶಲ್ಯ, ಶಕುನಿ ಸೈಂಧವನೇ ಮೊದಲಾದ ನಾಯಕರನ್ನೂ ಕೂಡಿಬೇಟೆಯ ನೆಪದಿಂದ ಬಂದು ದೈತವನದ ಪಕ್ಕದ ನಂದನವನದೊಳಗೆ ಪಾಂಡವರಿಗೆ ಸಮೀಪವಾಗಿರುವ ಹಾಗೆ ಬೀಡು ಬಿಟ್ಟನು. ತನ್ನ ವೈಭವವನ್ನು ಹಾಡಿಸುತ್ತಲೂ ಹೊಗಳಿಸುತ್ತಲೂ ಇದ್ದನು. ಅಷ್ಟರಲ್ಲಿ 'ಹಗೆಯನ್ನು ಕೊಲ್ಲಲು ಬಂದವರ ಮೂಗನ್ನು