________________
೩೪೨) ಪಂಪಭಾರತಂ ಮ|ಪುಗಲಿ ಬನಮಾರ್ಗಮಿಂಬು ನೆಲಸಲ್ ನಾರುಂಟುಡಲ್ ಮೆಲ್ಲೆ ಕೋಂ
ಬುಗಳೊಳ್ ಪಣ್ಣಲಮುಂಟು ಮಾಯ ಕುಡಿಯಲ್, ನೀರುಂಟು ಪದ್ಮಾಕರಾ | ಳಿಗಳೊಳ್ ತಣುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನ ನೈಗೆ ಬನ್ನಂ ಬರಲೀಯದೀ ಬನದೊಳಿರ್ದಂ ಕಾಲಮಂ ಪಾರವೇ || ೩೦
ವಗೆ ಎಂದು ತಿಳಯ್ಯರುಷೇಕ ಕಾರ್ಯಾಲೋಚನಪರರಾಗಿ ದೈತವನದೊಳದೈತ ಸಾಹಸರಿರ್ಪನ್ನೆಗಮೊಂದು ದಿವಸಂ ದುರ್ಯೋಧನನ ಮಯ್ತುನಃ ಸಿಂಧುದೇಶಾಧೀಶ್ವರಂ ಸೈಂಧವನವರಂ ಛಿದ್ರಿಸಲೆಂದು ಮಯ್ಯರೆದು ಬಂದುಮ! ಮೃಗಯಾಕ್ರೀಡೆಗೆ ಪಾಂಡುರಾಜತನಯರ್ ಪೋಪನ್ನೆಗಂ ಬಂದು ತೊ
ಟ್ರಗೆ ಪಾಂಚಾಳಿಯನೆತ್ತಿ ತನ್ನ ರಥದೊಳ್ ತಂದಿಟ್ಟುಕೊಂಡುಯ್ಯನ | ನೈಗಮಂತಾ ಪಡೆಮಾತುಗೇಳತಿಬಳರ್ ಭೀಮಾರ್ಜುನರ್ ಕಾಯ್ದು ಕೆ ಯಿಗೆ ಬೆನ್ನಂ ಪರಿದತ್ತ ಪೋಪೆಯೆಲವೋ ಪೋ ಪೋಗಲೆಂದಯ್ದಿದರ್ || ೩೧
ವ! ಅಂತೆಯ್ಲಿ ತಮ್ಮದಾಘಾತದೊಳಂ ಬಾಣಪಾತದೊಳಮವನ ರಥಮಂ ಶತ ಚೂರ್ಣಂ ಮಾಡಿ ಜಯದ್ರಥನಂ ಕೋಡಗಗಟ್ಟುಗಟ್ಟಿ ಬೆನ್ನಂ ಬಿಲ್ ಕೊಪ್ಪಿನೊಳಿದು ನಡೆಯಂದು ನಡೆಯಿಸಿ ಪಾಂಚಾಳಿಯಂ ಲೀಲೆಯಿಂದೊಡಗೊಂಡು ಬೀಡಿಂಗೆ ವಂದು ಧರ್ಮಪುತ್ರಂಗೆ ತೋಚಿದೊಡೆ
ಯೋಚಿಸಿದರು. ೩೦. ಈ ವನವು ಮತ್ತಾರಿಗೂ ಪ್ರವೇಶಿಸಲಾಗುವುದಿಲ್ಲ: ಇರುವುದಕ್ಕೆ ಸ್ಥಳಾವಕಾಶವೂ ಉಡಲು ನಾರೂ ಉಂಟು; ಊಟಮಾಡಲು ಕೊಂಬೆಗಳಲ್ಲಿ ಹಣ್ಣು ಹಂಪಲುವುಂಟು; ಸ್ನಾನಮಾಡಲೂ ಕುಡಿಯಲೂ ಕೊಳಗಳಲ್ಲಿ ನೀರುಂಟು; ಹೊಂಬಣ್ಣದ ಬಳ್ಳಿವನೆಗಳಲ್ಲಿ ತಂಪುಂಟು; ಈ ವನದಲ್ಲಿ ನಮ್ಮ ಸತ್ಯಪರಿಪಾಲನೆಗೆ ಭಂಗಬರುವುದಿಲ್ಲ. ಈ ವನದಲ್ಲಿಯೇ ಇದ್ದು ಕಾಲಯಾಪನೆ ಮಾಡಬಹುದಲ್ಲವೇ ಎಂದು ಯೋಚಿಸಿ ವ|| ಅಯ್ಯರೂ ಏಕಾಭಿಪ್ರಾಯವಾಗಿ ಅದ್ವಿತೀಯ ಬಲಶಾಲಿಗಳಾದ ಅವರು ಆ ದೈತವನದಲ್ಲಿ ತಂಗಿದರು. ಅಷ್ಟರಲ್ಲಿ ಒಂದು ದಿವಸ ದುರ್ಯೊಧನನ ಮೈದುನನೂ ಸಿಂಧುದೇಶಾಧಿಪತಿಯೂ ಆದ ಸೈಂಧವನು ಅವರನ್ನು ಭೇದಿಸಬೇಕೆಂದು (ರಹಸ್ಯವನ್ನು ತಿಳಿಯಲೆಂದು) ಮೈಮರೆಸಿಕೊಂಡು ಬಂದನು. ೩೧. ಆ ಪಾಂಡುಪುತ್ರರು ಬೇಟೆಗೆ ಹೋಗಿರುವ ಸಮಯವನ್ನೇ ನೋಡಿ ಬಂದು ಇದ್ದಕ್ಕಿದ್ದ ಹಾಗೆ ಬ್ರೌಪದಿಯನ್ನೆತ್ತಿ ತನ್ನ ರಥದಲ್ಲಿಟ್ಟುಕೊಂಡು ಹೋದನು. ಅಷ್ಟರಲ್ಲಿ ಆ ಸಮಾಚಾರವನ್ನು ಕೇಳಿ ಬಹುಸಾಹಸಿಗಳಾದ ಭೀಮಾರ್ಜುನರ ಕೋಪವು ಮಿತಿಮೀರಿರಲು ಅವನ ಬೆನ್ನಿನ ಹಿಂದೆಯೇ ಓಡಿ ಎಲ್ಲಿಗೆ ಹೋಗುತ್ತೀಯೋ ಹೋಗಬೇಡ, ಹೋಗಬೇಡ (ನಿಲ್ಲು) ಎಂದು ಅವನನ್ನು ಸಮೀಪಿಸಿದರು. ವ|| ತಮ್ಮ ಗದೆಯ ಪೆಟ್ಟಿನಿಂದಲೂ ಬಾಣ ಪ್ರಯೋಗದಿಂದಲೂ ಅವನ ತೇರನ್ನು ನೂರು ಚೂರುಮಾಡಿ ಸೈಂಧವನನ್ನು ಕಪಿಯನ್ನು ಬಿಗಿಯುವಂತೆ ಬಿಗಿದು ಅವನ ಬೆನ್ನನ್ನು ಬಿಲ್ಲಿನ ತುದಿಯಿಂದ ತಿವಿದು ಗಾಯಮಾಡಿ ನಡೆ ಎಂದು ನಡೆಯಿಸಿ