________________
ಸಪ್ತಮಾಶ್ವಾಸಂ | ೩೪೧ ಪಿರಿಯಕರ || ಪಿರಿಯ ಮರಂಗಳ ಮಾಡಮಾಗೆ ಪೊಳೆವಳದಳಿರ್ಗಳ ಸಜ್ಜೆಯಾಗೆ
ಪಿರಿಯ ಮಡುಗಳ ಮಜ್ಜನಮಾಗೆ ಪೊಸ ನಾರೆ ದೇವಾಂಗವಸ್ತಮಾಗೆ | ಪರೆದ ತಂಗಲೆಯ ಪರಿಯಣಮಾಗೆ ಪಣ್ಣಲಮೆತ್ತಿದ ಬೋನಮಾಗ ಸಿರಿಯ ಮಹಿಮೆಯಂ ಮಳಯಲೇನಾರ್ತುರೂ ಬನದೊಳಿರ್ಪಿರವಾ
, ಪಾಂಡವರಾ || ೨೮ ಉlು.
ಪಾಸಣ್ ಸಿಂಹಪೀಠಮಳೆನೀರುತಿ ಮಂಗಳಗೀತಿ ಭೂತಳಂ | ಪಾಸು ಮೃಗವ್ರಜಂ ಪರಿಜನಂ ಪೊದಟೋಲಗಸಾಲೆ ಮಕ್ಕಳಂ | ಬೀಸುವ ಗಾಳಿ ಚಾಮರದ ಗಾಳಿಯನಲ್ ದೂರವೆತ್ತದೇಂ ಸುಖಾ
ವಾಸ ನಿಮಿತ್ತವಾಯೊ ವನವಾಸನಿವಾಸಮ ಪಾಂಡುಪುತ್ರರಾ || ೨೯
ವ|| ಅಂತು ಕಾಮ್ಯಕವನದೊಳಲ್ಕು ವರುಷಮಿರ್ದಾನೆಯ ವರುಷದೊಳದಲಿ ಕೆಲದೊಳೊಂದಿ ಸಂದಿಸಿ ಗಗನತಳಮಂ ತಜುಂಬುವಂತಿರ್ದ ಶಿಖರಿಶಿಖರಂಗಳಿಂದಂ ದೆಸೆಗಳಂ ತಡವರಿಸಿ ಕೊಳ್ವಂತ ಬಳ್ಳವ ಬಳೆದು ಸೊಗಯಿಸುವ ಪೆರ್ಮರಂಗಳಿಂದಂ ವನಲಕ್ಷ್ಮಿ ಯ ಗೋಮಂಡಲದಂತಿರ್ದ ಕಡವಿನ ಕಾಡರ್ಮಯ ಪಿಂಡುಗಳಿಂದ ದೆಸೆಗಲ್ಲಿ ಚರ್ಚೆ ಮೂಂಕಿತವ ವನಮಹಿಷಿಗಳಿಂ ಮದಹಸ್ತಿಯಂತ ಮರವಾಯ್ತ ಪುಲಿಗಳಿನತಿ ಭಯಂಕರಾಕಾರಮಪ್ಪ ದೈತವನಕ್ಕೆ ಬಂದು ತದ್ವನೋಪಕಂಠವರ್ತಿಗಳಪ್ಪ ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗದು
'ಮರೆಯಿಸಿತು. ೨೮. ದೊಡ್ಡಮರಗಳೇ ಹಾಸುಗೆಯಾದವು, ಆಳವಾದ ಮಡುಗಳೇ ಸ್ನಾನ(ಗ್ರಹ)ವಾದುವು ಹೊಸ ನಾರೆ ರೇಷ್ಮೆಯ ಬಟ್ಟೆಯಾಯಿತು. ಹರಡಿದ ತರಗೆಲೆಯೇ ಊಟದತಟ್ಟೆಯಾಯಿತು. ಹಣ್ಣು ಹಂಪಲುಗಳೇ ಶ್ರೇಷ್ಠವಾದ ಭೋಜನ ವಾಯಿತು. ಪಾಂಡವರ ವನವಾಸವೂ ಐಶ್ವರ್ಯದ ಮಹತ್ವವನ್ನು ಪ್ರಕಟಿಸಲು ಸಹಾಯಕವಾಯಿತು. ೨೯. ಹಾಸು ಬಂಡೆಯೇ ಸಿಂಹಾಸನ, ದುಂಬಿಯ ಧ್ವನಿಯೇ ಮಂಗಳವಾದ್ಯ, ಭೂಮಿಯೇ ಹಾಸಿಗೆ, ಮೃಗಗಳ ಸಮೂಹವೇ ಪರಿಹಾರ, ಹೊದರುಗಳೇ ಸಭಾಸ್ಥಾನ, ವಿಶೇಷವಾಗಿ ಬೀಸುವ ಗಾಳಿಯೇ ಚಾಮರದ ಗಾಳಿ ಎನ್ನುವ ಹಾಗಿರಲು ಪಾಂಡವರ ವನವಾಸವೇ ರಾಜ್ಯಭಾರಕ್ಕೆ ಸಮಾನವಾಗಿ ಅವರ ಸುಖಾವಾಸಕ್ಕೆ ಕಾರಣವಾಯಿತು. ವ|| ಪಾಂಡವರ ಹಾಗೆ ಕಾಮ್ಯಕವನದಲ್ಲಿ ಅಯ್ದು ವರ್ಷಗಳ ಕಾಲವಿದ್ದರು. ಆರನೆಯ ವರ್ಷದಲ್ಲಿ ಅದರ ಪಕ್ಕದಲ್ಲಿಯೇ ಸೇರಿಕೊಂಡು ಆಕಾಶಪ್ರದೇಶವನ್ನು ಅಟ್ಟಿಹೋಗುವ ಹಾಗಿದ್ದ ಶಿಖರಗಳನ್ನುಳ್ಳ ಬೆಟ್ಟಗಳಿಂದಲೂ ದಿಕ್ಕುಗಳನ್ನೂ ಹುಡುಕುವಂತೆ ಕೊಬ್ಬಿ ಬೆಳೆದು ಸೊಗಯಿಸುತ್ತಿರುವ ದೊಡ್ಡ ಮರಗಳಿಂದಲೂ ವನಲಕ್ಷಿಯ ಗೋವುಗಳ ಗುಂಪಿನ ಹಾಗಿರುವ ಕಡವು ಮತ್ತು ಕಾಡುಕೋಣಗಳ ಹಿಂಡುಗಳಿಂದಲೂ ದಿಕ್ಕುದಿಕ್ಕುಗಳಲ್ಲಿ ಹೆದರಿ ವಾಸನೆ ನೋಡಲು ಮೂಗನ್ನು ಚಾಚುತ್ತಿರುವ ಕಾಡೆಮ್ಮೆಗಳಿಂದಲೂ ಮದ್ದಾನೆಯಂತೆ ಬಂದು ಮರಕ್ಕೆ ತಗಲುವ ಹುಲಿಗಳಿಂದಲೂ ಅತ್ಯಂತ ಭಯಂಕರವಾಗಿರುವ ದೈತವನಕ್ಕೆ ಬಂದು ಆ ವನದ ಸಮೀಪದಲ್ಲಿರುವ 'ತಪಸ್ವಿಗಳ ಆಶ್ರಮಗಳಲ್ಲಿ ವಿಶ್ರಮಿಸಿಕೊಳ್ಳಲು