________________
೩೪೦ / ಪಂಪಭಾರತಂ
ಕೆಯೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು ತಮ್ಮ ಕಣ್ಣಂ ಮನಕಂ ಸೊಗಯಿಸೆ ಪಯಣಂಬಂದು ಕಾಮ್ಯಕವನಮಂ ಪುಗುತಂದರದೆಂತೆಂದೊಡ
ದೆಸೆಗೆಂ ಗಜಲತ್ತುಮಿರ್ಪ ಪುಲಿಯಿಂ ನೀಳಾಭ್ರಮಂ ದಂತಿಗೆ ತು ಸಿಡಿಲಾಗಸಕೆಯೇ ಪಾ. ಪಲವುಂ ಸಿಂಗಂಗಳಿಂದತ್ತರು | ರ್ವಿಸಿ ಪಾಯ್ಕರ್ವಿಗಳಿಂ ಮದಾಂಧ ವನಗಂಧೇಭಂಗಳಿಂ ಕಣ್ಣಗು ರ್ವಿಸೆಯುಂ ಚಿತ್ತದೊಳಂದು ಕಾಮ್ಯಕವನಂ ಮಾಡಿತ್ತತಿ ಪ್ರೀತಿಯಂ || ೨೬ ವ|| ಅಂತು ಸೌಮ್ಯಭಯಂಕರಾಕಾರಮಪ್ಪ ಕಾಮ್ಯಕವನಮಂ ಪುಗುತಂದಲ್ಲಿ ತದ್ವನಾಧಿಪತಿಯಪ್ಪ ದೈತ್ಯಂ ಕಿತ್ಕಾರನವರಂ ಪುಗಲೀಯದಡ್ಡಮಾಗಿರೆ
ಮ||
ಮ|| ಮಸಿಯಂ ಪುಂಜಿಸಿದಂತುಟಪ್ಪ ತನು ನೀಳಾಂಭೋಧರಂ ದಾಡೆಗಳ
ಪೊಸ ಮಿಂಚುಗ್ರ ವಿಲೋಚನಂ ದಿವಿಜ ಗೋಪಂ ಕಾರೂ ಮೇಣ್ ಕಾಳ ರ 1 ಕಸನೋ ಪೇತೆನ ಬಂದು ತಾಗೆ ಗದೆಯಂ ಕೊಂಡೆಯ ಭೀಮಂ ಸಿಡಿ ಲ್ಕು ಸಿಡಿಲ್ ಪೊಯ್ದವೊಲಾಗೆ ಪೊಯ್ದನಿಳೆಯೊಳ್ ಕಿಮಾರನಂ ವೀರನಂ ||೨೭
ವ|| ಅಂತು ಕಿಮಾರನಂ ಕೊಂದು ಕಾಮ್ಯಕವನಮಂ ಪೊಕ್ಕು ತವ್ವನ ತಪೋಧನರ ಗೋಷ್ಠಿಯೊಳಮಾಟವಿಕರಟ್ಟಟ್ಟಿಯೊಳಂ ತಮಗಿಂದ್ರಪ್ರಸ್ಥದ ರಾಜಶ್ರೀಯಂ ಮಸುಳಿಸಿ
ಪ್ರವಾಹವನ್ನೂ ನೋಡಿ ಕಣ್ಣಿಗೂ ಮನಸ್ಸಿಗೂ ಆನಂದವಾಗಿರಲು ಪಾಂಡವರು ಪ್ರಯಾಣಮಾಡಿ ಕಾಮ್ಯಕವನವನ್ನು ಪ್ರವೇಶಮಾಡಿದರು. ಅದು ಹೇಗಿತ್ತೆಂದರೆ೨೬. ಎಲ್ಲ ದಿಕ್ಕುಗಳಲ್ಲಿಯೂ ಗರ್ಜಿಸುತ್ತಿರುವ ಹುಲಿಗಳಿಂದಲೂ ನೀಲಾಕಾಶವನ್ನು ಆನೆಯೆಂದು ಭ್ರಮಿಸಿ ಸಿಡಿದು ಆಕಾಶಕ್ಕೆ ವಿಶೇಷವಾಗಿ ಹಾರುವ ಹಲವು ಸಿಂಹಗಳಿಂದಲೂ ಎಲ್ಲೆಲ್ಲಿಯೂ ಭಯವನ್ನುಂಟುಮಾಡಿ ಹರಿಯುವ ಬೆಟ್ಟದ ಝರಿಗಳಿಂದಲೂ ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ ಕಾಮ್ಯಕವನವು ಕಣ್ಣಿಗೆ ಭಯವನ್ನುಂಟುಮಾಡಿದರೂ ಮನಸ್ಸಿಗೆ ಅತ್ಯಂತ ಪ್ರೀತಿಯನ್ನುಂಟುಮಾಡಿತು. ವ ಹಾಗೆ ಸೌಮ್ಯವೂ ಭಯಂಕರವೂ ಆದ ಕಾಮ್ಯಕವನವನ್ನು ಪ್ರವೇಶಿಸಲು ಆ ಕಾಡಿಗೆ ಒಡೆಯನಾದ ಕಿಮ್ಮಿರನೆಂಬ ರಾಕ್ಷಸನು ಅವರು ಪ್ರವೇಶಮಾಡುವುದಕ್ಕೆ ಅವಕಾಶಕೊಡದೆ ತಡೆದನು. ೨೭. ಮಸಿಯನ್ನು ಒಟ್ಟುಗೂಡಿಸಿದ ಹಾಗಿದ್ದ ಅವನ ಶರೀರವೇ ಕರಿಯಮೋಡ, ಕೋರೆಹಲ್ಲುಗಳೇ ಮಿಂಚು, ಭಯಂಕರವಾದ ಕಣ್ಣುಗಳೇ ಮಿಂಚುಹುಳುಗಳು, ಇದು ಮಳೆಗಾಲವೋ ಕಾಳರಾಕ್ಷಸನೋ ಎನ್ನುವ ಹಾಗೆ ಬಂದು ಮೇಲೆ ಬೀಳಲು ಭೀಮನು ಗದೆಯನ್ನು ತೆಗೆದುಕೊಂಡು ವಿಶೇಷವಾಗಿ ಆರ್ಭಟಿಸಿ ಸಿಡಿಲುಹೊಡೆದ ಹಾಗೆ ವೀರನಾದ ಕಿಮ್ಮಿರನನ್ನು ಹೊಡೆದು ಭೂಮಿಯಲ್ಲಿ ಕೆಡವಿದನು. ವ|| ಹಾಗೆ ಕಿಮ್ಮಿರನನ್ನು ಕೊಂದು ಕಾಮ್ಯಕವನವನ್ನು ಪ್ರವೇಶಿಸಿ ಆ ಕಾಡಿನಲ್ಲಿದ್ದ ತಪಸ್ವಿಗಳ ಗುಂಪಿನಲ್ಲಿಯೂ ಅಲ್ಲಿಯ ಕಾಡುಜನರ ಸೇವೆಗಳಲ್ಲಿಯೂ ಸುಖದಿಂದಿದ್ದರು. ಅಲ್ಲಿಯ ಸೌಖ್ಯವು ಅವರಿಗೆ ಇಂದ್ರಪ್ರಸ್ಥದ ರಾಜ್ಯವೈಭವವನ್ನು