________________
ಸಪ್ತಮಾಶ್ವಾಸಂ ೩೩೯ ವಗ ಅದಲ್ಲದೆಯುರಿಮll ಭವ ಲಾಲಾಟವಿಲೋಚನಾಗ್ನಿಶಿಖೆಯಿಂ ಬೆಂದಳ್ಳಿ ಮತ್ತು ಮನೋ
ಭವನೆಟ್ಟತೊಡೆ ಕಾಮಕಾಂತೆ ಬಟೆಯಂ ತನ್ನಿಚ್ಚೆಯಿಂ ಮೆಚ್ಚಿ ಬ | ಇವುರಂ ತೀವಿದ ಮಾಚ್ಯಾಯ್ತು ನವಿಲಿಂ ಕುಂದಂಗಳಿಂದಿಂದ
ಪವಿಳಾಸಂಗಳಿನಾಲಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ || ೨೪ ಚಂii ಪೊಳೆವಮರೇಂದ್ರಗೋಪದ ಪಸುರ್ತೆಳವುಳ ತಳ ಕಾರ್ಮುಗಿ
ಲಳ ಕಿಜುಗೊಂಕುಗೊಂಕಿದ ಪೊನಲಳ ಕೆಂಪು ಪಸುರ್ಪು ಕರ್ಪು ಬೆ || ಳೊಳಕೊಳೆ ಶಕ ಕಾರ್ಮುಕ ವಿಳಾಸಮನೇನೆರ್ದೆಗೊಂಡು ಬೇಟದ ತಳಗಮನುಂಟುಮಾಡಿದುದೊ ಕಾಮನ ಕಾರ್ಮುಕದಂತೆ ಕಾರ್ಮುಕಂ || ೨೫
ವll ಅಂತು ತಮಗಿದಿರು ಬರ್ಪಂತ ಬಂದ ಪಯೋಧರಕಾಲದೋಳೆರಡು ತಡಿಯುಮಂ ಪೊಯ್ದು ಪರಿವ ತೊರೆಗಳುಮಂ ತೊವನ್ನು ಸೊಗಯಿಸುವಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ ಬಲಿಗೆದಳೆದಂತೆ ಉಪಾಶ್ರಯಂಬಡೆದಳಂಕರಿಸುವಿಂದ್ರಗೋಪಂಗಳುಮಂ ಕಿಸುಗಾಡ ನೆಲಂಗಳೆಳದಳಿರ ಬಣ್ಣಮಂ
ಆಕಾಶವೊಪ್ಪಿರಲು ಹೆಣ್ಣುನವಿಲುಗಳಿಂದ ಕಾಡಿನ ಮಧ್ಯಭಾಗವು ಒಪ್ಪಿರಲು ಆಗತಾನೆ ಕಾಣುತ್ತಿರುವ ಮೊಳೆಹುಲ್ಲುಗಳಿಂದ (ಹುಲ್ಲಿನ ಮೊಳಕೆಗಳಿಂದ) ಭೂಮಿಯು ಒಪ್ಪಿರಲು ಹೊಸ ಪ್ರಿಯಪ್ರೇಯಸಿಯರ ಹೃದಯವು ಹೊಸಮಳೆಗಾಲದ ವೈಭವವನ್ನು ನೋಡಿ ಅದೆಷ್ಟು ಕರಗಾದುವೋ, ಅದೆಷ್ಟು ಕೆರಳಿದುವೋ; ಅದೆಷ್ಟು ಗುಳಿಗೊಂಡವೋ! ವl ಅಷ್ಟೇ ಅಲ್ಲದೆ ೨೪. ಮಳೆಗಾಲದಲ್ಲಿ ಭೂಮಂಡಲವು ನವಿಲುಗಳಿಂದಲೂ ಮೊಲ್ಲೆಯ ಹೂವಿನಿಂದಲೂ ಮಿಂಚುಹುಳಗಳ ವಿಲಾಸದಿಂದಲೂ ಆಲಿಕಲ್ಲುಗಳ ಹರಳುಗಳಿಂದಲೂ ಕೂಡಿರಲು ಈಶ್ವರನ ಹಣೆಗಣ್ಣಿನ ಬೆಂಕಿಯ ಜ್ವಾಲೆಯಿಂದ ಸತ್ತ ಮನ್ಮಥನು ಪುನಃ ಸಜೀವನಾಗಲು ಅದರಿಂದ ಸಂತೋಷಗೊಂಡ ಕಾಮನ ಸತಿಯಾದ ರತಿಯು ತನ್ನಿಷ್ಟಬಂದಂತೆ ನೆಲಕ್ಕೆ ಹಾಸಿದ ವಿವಿಧ ಬಣ್ಣದ ವಸ್ತದಂತೆ ಭೂಮಿಯು ಪ್ರಕಾಶಿಸಿತು. ೨೫. ಹೊಳೆಯುವ ಮಿಂಚುಹುಳುಗಳ, ಹಸುರಾದ ಎಳೆಯ ಹುಲ್ಲುಗಳ, ಒತ್ತಾಗಿರುವ ಕರಿಯಮೋಡಗಳ, ಕಿರಿಕಿರಿದಾಗಿ ವಕ್ರವಾಗಿ ಹರಿಯುವ ಪ್ರವಾಹಗಳ ಕೆಂಪು ಹಸುರು ಬಿಳುಪು ಬಣ್ಣಗಳು ಒಟ್ಟಾಗಿ ಸೇರಿ ಕಾಮನಬಿಲ್ಲಿನ ಸೌಂದರ್ಯವನ್ನೂ ಒಳಗೊಂಡಿರಲು ಮಳೆಗಾಲದ ಪ್ರವೇಶವು ಕಾಮನಬಿಲ್ಲಿನಂತೆಯೇ ಮನಸ್ಸನ್ನಾಕರ್ಷಿಸಿ ಪ್ರೇಮಾಧಿಕ್ಯವನ್ನುಂಟುಮಾಡಿತು. ವ!! ಹಾಗೆ ತಮಗೆ ಎದುರಾಗಿ ಬರುವಂತೆ ಬಂದ ಮಳೆಗಾಲದಲ್ಲಿ ಎರಡುದಡವನ್ನು ಘಟ್ಟಿಸಿ ಹರಿಯುವ ನದಿಗಳನ್ನೂ ಚಿಗುರಿ ಸೊಗಯಿಸುವ ಕಾಡುಗಳನ್ನೂ ಹಸುರುಬಟ್ಟೆಯನ್ನು ಹರಡಿದಂತೆ ಹಸುರಾದ ನೆಲದಲ್ಲಿ ಪದ್ಮರಾಗರತ್ನದ ಹರಳು ಗಳನ್ನು ಚೆಲ್ಲಿದಂತೆ ಅವಲಂಬನವನ್ನು ಪಡೆದು ಅಲಂಕಾರವಾಗಿರುವ ಮಿಂಚು ಹುಳುಗಳನ್ನೂ ಕೆಂಪಗಿರುವ ಕಾಡುಗಳ ನೆಲಗಳ ಎಳೆಯ ಚಿಗುರಿನ ಬಣ್ಣವನ್ನು ಹೊಂದಿ ವಿರಹಿಗಳ ಮನಸ್ಸನ್ನು ಕೆರಳಿಸುವಂತೆ ಜಲಜಲನೆ ಹರಿಯುವ ಝರಿಗಳ