________________
೩೩೮/ಪಂಪಭಾರತಂ
ಚಂ|| ಪುಗುವುದರಮಿರ್ಪಿರವು ಹನ್ನೆರಡಬ್ಬಮದಲ್ಲದಲ್ಲಿ ಕೋ ಅಗದ ವನೇಚರಾಧಿಪರ ದಾಯಿಗರತ್ತಣಿನಪ್ಪಪಾಯ ಕೋ | ಟಿಗೆ ಪವಣಿಲ್ಲ ಕಲ್ಲಿಗೆಡೆಯಾವುದೋ ಪಾಳೆಯ ಬಟ್ಟೆದಪ್ಪಿ ಮುಂ ನೆಗಡೆಯಿಲ್ಲ ಪೋಗು ಜಯಮಕ್ಕೆ ಶುಭಂ ನಿಮಗಕ್ಕೆ ಮಂಗಳಂ || ೨೧
ವ|| ಎಂದೊಡಲ್ಲಿರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕೆಯಾಗಿಯುಂ ಪಾಟೆಗೆ ಗಂಟಾಗಿಯುಂ ನೆಗಟ್ಟಮಲ್ಲೊಂದು ಪೊಡವಟ್ಟು ಕೊಂತಿಯಂ ವಿದುರನ ಮನೆಯೊಳಿರಲ್ವೇಟ್ಟು ಸುಭದ್ರೆಯನಭಿಮನ್ಯು ವರಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳಿಸಿ ನಿಜ ಪರಿಜನಂಬೆರಸು ಗಂಗೆಯಂ ಪಾಯದು ಪಡುವಣ ದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳು ಪೋಗೆ ವೋಗ
ಚoll ದಸ ಪಸುರೇಟೆ ಪಚ್ಚೆಯೊಳ ಮುಚ್ಚಿ ಮುಸುಂಕಿದ ಮಾಯಾದುದಾ
ಗಸಮಳಿ ನೀಳ ನೀಳ ಗಳಕಂಠ ತಮಾಳ ವಿಳನೀರದ || ಪ್ರಸರ ವಿಭಾಸಿಯಾದುದು ಸಮಾರನುದಾರ ಕದಂಬ ಕೇತಕೀ ಪ್ರಸರ ರಜಸ್ವರ ಪ್ರಕಟ ಪಾಂಸುಳವಾದುದು ಮೇಘಕಾಲದೊಳ್ || ಕರಿಯ ಮುಗಿಲ್ಗಳಿಂ ಗಗನಮಂಡಳಮೊಟ್ಟರ ಸೋಗೆಯಿಂ ವನಾಂ ತರಮೆಸೆದೊಪ್ಪೆ ತೋರ್ಪ ಮೊಳೆವುಳಿನೀ ಧರಣೀವಿಭಾಗ | ಏರ ಪೊಸ ವೇಟಕಾರರ್ದಗಳ ಪೊಸ ಕಾರ ಪೊಡರ್ಪುಗಂಡದೇಂ ಕರಿತುವದೇಂ ಕಲಂಕಿದುವದೇಂ ಕುಡೆಗೊಂಡುವದೇಂ ಕನಲ್ಲುವೋ || ೨೩
ಚಂ।।
دو
೨೧. ನೀವು ಪ್ರವೇಶಮಾಡಬೇಕಾಗಿರುವುದು ಕಾಡು, ಇರಬೇಕಾದ ಕಾಲ ಹನ್ನೆರಡುವರ್ಷ; ಅದಲ್ಲದೆಯೂ ಅಲ್ಲಿ ಕ್ರೂರಮೃಗಗಳ, ಬೇಡನಾಯಕರ, ದಾಯಾದಿಗಳ ಕಡೆಯಿಂದ ಬರುವ ಅಪಾಯ ಸಮೂಹಕ್ಕೆ ಅಳತೆಯೇ ಇಲ್ಲ: ಬುದ್ಧಿ ಹೇಳುವುದಕ್ಕೆ ಅವಕಾಶವೆಲ್ಲಿದೆ? ಧರ್ಮಮಾರ್ಗವನ್ನು ಬಿಟ್ಟು ನೀವು ಇದುವರೆಗೆ ನಡೆದ ಸಂದರ್ಭವೇ ಇಲ್ಲ: ಧರ್ಮರಾಜ! ನಿನಗೆ ಶುಭವಾಗಲಿ ಮಂಗಳವಾಗಲಿ ಹೋಗಿಬಾ ಎಂದು ಆಶೀರ್ವದಿಸಿದರು. ವll ಧರ್ಮರಾಜನು 'ನಾವು ಅಲ್ಲಿದ್ದರೂ ನಿಮ್ಮ ಮನಸ್ಸಿಗೆ ಅಸಹ್ಯವಾಗುವ ಹಾಗೆಯೂ ಧರ್ಮಕ್ಕೆ ದೂರವಾಗಿಯೂ ನಡೆಯುವವರಲ್ಲ' ಎಂದು ಹೇಳಿ ನಮಸ್ಕಾರಮಾಡಿ ಕುಂತಿಯನ್ನು ವಿದುರನ ಮನೆಯಲ್ಲಿರಹೇಳಿ ಸುಭದ್ರೆಯನ್ನು ಅಭಿಮನ್ಯುವಿನೊಡನೆ ದ್ವಾರಾವತಿಗೆ ಕೃಷ್ಣನ ಹತ್ತಿರಕ್ಕೆ ಕಳುಹಿಸಿ, ತಮ್ಮಪರಿವಾರದೊಡನೆ ಮುಂದಕ್ಕೆ ನಡೆದರು. ಗಂಗಾನದಿಯನ್ನೂ ದಾಟಿ ಅದರ ಪಶ್ಚಿಮದಿಕ್ಕಿನಲ್ಲಿರುವ ಕಾಮ್ಯಕವನದ ಮಾರ್ಗವನ್ನನುಸರಿಸಿ ಹೋದರು. ೨೨. ಮಳೆಗಾಲವು ಪ್ರಾರಂಭವಾಯಿತು. ದಿಕ್ಕುಗಳು (ಪಚ್ಚೆ ಪೈರುಗಳಿಂದ) ಹಸಿರುಹತ್ತಲು ಪಚ್ಚೆಯ ರತ್ನದಿಂದ ಹೊದಿಸಿದ ಹಾಗಾಯಿತು. ಆಕಾಶವು ದುಂಬಿ ಯಂತೆ ಶಿವನ ಕೊರಳಿನಂತೆ, ಹೊಂಗೆಯ ಮರದಂತೆ ಕಪ್ಪಗಿರುವ ಅತ್ಯಂತ ನೀಲ ಬಣ್ಣದ ಮೋಡಗಳ ಸಮೂಹದಿಂದ ಪ್ರಕಾಶಮಾನವಾಯಿತು. ಗಾಳಿಯು ವಿಸ್ತಾರವಾಗಿ ಹಬ್ಬಿರುವ ಕದಂಬ ಮತ್ತು ಕೇದಗೆ ಹೂವುಗಳ ಸಮೂಹದಿಂದ ಹೊರಗೆ ಚೆಲ್ಲುತ್ತಿರುವ ಪರಾಗದಿಂದ ಕೂಡಿದುದಾಯಿತು. ೨೩. ಕಪ್ಪಾಗಿರುವ ಮೋಡಗಳಿಂದ