________________
ಪಾಶ್ವಾಸಂ / ೩೨೫ ಎಂಬ ನುಡಿಯಂ ನವಿಮಾಡಿ ಮದಗಜೇಂದಪುರಮನೆದ ಬರ ಧೃತರಾಷ್ಠಾದಿ ಕುಲವೃದ್ಧರೊಡನೆ ದುರ್ಯೋಧನನಿದಿರ್ವೋಗಿ ಧರ್ಮಪುತ್ರಂಗೆ ಪೊಡೆವಟ್ಟು .. ಭೀಮನಂ ಸಮಾನ ಪ್ರತಿಪತ್ತಿಯೊಳ್ ಕಂಡು ತನಗೆ ಪೊಡಮಟ್ಟ ಮತ್ತಿನ ಮೂವರುಮಂ ತೆಗೆದು ತಜ್‌ಸಿ ಪರಸಿ ತನ್ನ ತಮ್ಮಂದಿರೆಲ್ಲರುಮನಯ್ಯರ್ಗ೦ ಪೊಡವಡಿಸಿ ಫೋಟಲೊಳಗಣವಂದು ರಾಜಮಂದಿರಮಂ ಪೊಕ್ಕುಉll ನೋಡಿ ಪೃಥಾತನೂಜರ ಸಭಾಗೃಹದಂದಮನಂತುಟಪ್ಪುದಂ
ಮಾಡಿದನೆಂದು ಮಾಡಿಸಿ ಸಭಾಲಯಮಂ ನಿಜ ರಾಜಲೀಲೆಯೊಳ್ | ಕೂಡಿ ಯುಧಿಷ್ಠಿರ ಪ್ರಭುಗೆ ತಾನೆ ಸುಯೋಧನನುಯ್ದು ತೋಳದಂ | ನೋಡಿರೆ ಸಿಂಹಮಾಡುವರ ಬಾಲಮನಾಡಿದರೆಂಬ ಮಾಯಿಂ || ೬೯ :
ವ|| ಅಂತು ಸುಯೋಧನಂ ತನ ವಿಭವಮುಮಂ ವಿಳಾಸಮುಮಂ ಪಾಂಡವರ್ಗ ಮಣಿದು ಕಂದುಕಕ್ರೀಡಾದಿ ನಾನಾ ವಿಧ ವಿನೋದಂಗಳಿಂ ಕೆಲವು ದಿವಸಮನಿರ್ದೊಂದು ದಿವಸಂ ತನಗೆ ಸಾವಂ ಸಮಕಟ್ಟುವಂತೆ ಪಿಂಗಾಕ್ರನಕೃಕ್ರೀಡೆಯಂ ಶಕುನಿಯೊಳ್ ಸಮಕಟ್ಟಿ ಪೂಡಲ್ಬಟ್ಟು ಪುಸಿಯನೆ ಪುರಂ ಮುನ್ನಮಾಡಟ್ಟು ತಾನುಂ ಧರ್ಮಪುತ್ರನುಂ ಕೆಲದೊಳಿರ್ದು ನೋಡುತ್ತಿರೆ ಶಕುನಿಯಿಂತೆಂದಂಕ೦ll - ನೋಡುವುದಾಳೇನಟಿಯೊ
ಲಾಡುತ್ತಿರಲಾಗ ತಮುತಿರ್ವರುಮನೆ ನಾ | ಮಾಡುವಮ ಬನ್ನಿಮಂಬುದು ಮಾಡುವ ಬಗೆ ಬಂದು ನೆತ್ತಮಂ ಧರ್ಮಸುತಂ || ೭೦
ದುರ್ಯೋಧನನು ಎದುರಾಗಿ ಹೋಗಿ ಸ್ವಾಗತಿಸಿದನು. ಧರ್ಮರಾಜನಿಗೆ ನಮಸ್ಕಾರಮಾಡಿ ಭೀಮನನ್ನು ಸಮಾನಸತ್ಕಾರಗಳಿಂದ ನೋಡಿ ತನಗೆ ನಮಸ್ಕಾರ ಮಾಡಿದ ಇತರ ಮೂವರನ್ನು ಆಲಿಂಗನಮಾಡಿಕೊಂಡು ಹರಸಿದನು. ತನ್ನ ತಮ್ಮಂದಿರನ್ನೆಲ್ಲ ಆ ಅಯ್ತುಮಂದಿಗೆ ನಮಸ್ಕಾರಮಾಡಿಸಿ ಪಟ್ಟಣದೊಳಕ್ಕೆ ಬಂದು ಅರಮನೆಯನ್ನು ಪ್ರವೇಶಮಾಡಿಸಿದನು. ೬೯. ಪಾಂಡವರ ಸಭಾಮಂಟಪದ ಸೌಂದರ್ಯವನ್ನು ನೋಡಿ ಅಂತಹುದನ್ನು ನಾನೂ ಮಾಡಿಸುತ್ತೇನೆಂದು ದುರ್ಯೋಧನನು ಸಭಾಮಂಟಪವನ್ನು ನಿರ್ಮಿಸಿ ತನ್ನ ರಾಜಲೀಲೆಯಿಂದ ಅದನ್ನು ಸೇರಿ ಯುಧಿಷ್ಠಿರ ಚಕ್ರವರ್ತಿಯನ್ನು ತಾವೇ ಕರೆದುಕೊಂಡು ಹೋಗಿ 'ಸಿಂಹದಾಟ ವನ್ನಾಡುವವರಿಗೆ ಬಾಲದಾಟವನ್ನಾಡಿ ತೋರಿಸಿದರು' ಎಂಬಂತೆ ಅದರ ಸೌಂದರ್ಯ ವನ್ನು ತೋರಿಸಿದನು. ವ|| ದುರ್ಯೋಧನನು ತನ್ನ ವೈಭವವನ್ನೂ ವಿಳಾಸವನ್ನೂ ಪಾಂಡವರಿಗೆ ಪ್ರಕಾಶಪಡಿಸಿ ಚೆಂಡಾಟವೇ ಮೊದಲಾದ ನಾನಾವಿಧವಾದ ಸಂತೋಷಗಳಿಂದ ಕೆಲವು ದಿನವಿದ್ದು ಒಂದು ದಿನ ದುರ್ಯೋಧನನು ತನಗೆ ಸಾವನ್ನು ಸಿದ್ಧಪಡಿಸಿಕೊಳ್ಳುವ ಹಾಗೆ ಶಕುನಿಯಿಂದ ಪಗಡೆಯಾಟವನ್ನು ಸಿದ್ದಪಡಿಸಿದನು. ಪ್ರಾರಂಭದಲ್ಲಿ ಇತರರನ್ನು ಮೊದಲು ಹುಸಿಯಾಟ ಆಡುವಂತೆ ಹೇಳಿ ತಾನೂ ಧರ್ಮರಾಯನೂ ಪಕ್ಕದಲ್ಲಿದ್ದುಕೊಂಡು ನೋಡುತ್ತಿದ್ದರು. ಆಗ ಶಕುನಿಯು ಹೀಗೆಂದನು. ೭೦. ಸುಮ್ಮನೆ ನೋಡುವುದರಲ್ಲಿ ಏನು ಪ್ರಯೋಜನ ? ದುರ್ಯೋಧನನೂ ನೀನು ಪ್ರೀತಿಯಿಂದ ಆಡಬಾರದೇ ಎಂದು ಹೇಳಲು