________________
೩೨೬ / ಪಂಪಭಾರತಂ
ಕರೆದೊಡೆ ಜೂದಿಂಗಂ ಧುರ ಭರಕಾಖೇಟಕ್ಕೆ ಭೂಭುಜಂಗಾಗದು ಮೆ | ಯರೆದಿರಲೆಂಬ ಪುರಾತನ ಗುರುವಚನಂ ತನಗೆ ನಿಟ್ಟೆಪಟ್ಟುದವೆಂದಂ ||
20
ವ|| ಅಂತು ಪೂಡಿಕೊಂಡು ನಾಟವಾಸಗೆಯನಿಕ್ಕಲ್ವೇಳ್ವುದುಂ ಶಕುನಿ ಮುನ್ನೆ ತನ್ನ ಮಾಡಿದ ನಾದವಾಸಗೆಗಳನರಸಾಳಂತೆ ಕಣ್ಣಡೆದು ಮೆಟ್ಟಿ ಮಟ್ಟಮಾದಿಕ್ಕುವಾಗಲೊಡ್ಡಮಂ ಪೇಟೆಮನೆ ಪೊಲುಪೋಗಿಂಗಮಗಮಾಡುವ ತಮ್ಮುತಿರ್ವರುಂ ಪಲಗೆಗೆ ಸಾಯಿರ ಗದ್ಯಾಣದ ಪೊನ್ನೇ ಸಾಲುಮಗಳಂ ಬೇಡೆಂದು ದುರ್ಯೋಧನನೊಕ್ಕಲಂ ಪುಡಿಯೊಳ್ ಪೊರಳುವಂತ ಪಾಸಂಗೆಯಂ ಪೊರಳ್ಳಿ ಮುನ್ನಂ ನೆತ್ತಮನಯದನಂತವರ ದಾಯಮನಾಡ ಮಡಿಮಡಿಗುಲುವುದು ಮೊಂದು ಪತ್ತೆಂಟು ಪಲಗೆಯಂ ಮೆಳಡಿಸಲೆಂದು ಸೋಲು ಸೋಲದೊಳೇವಯಿಸಿಯಿನೊಡಂ ಕೊಳ್ಳಿಮೆಂದು
ಚoll ಪಲಗೆಗೆ ಪತ್ತು ಸಾಯಿರಮ ಗದ್ಯಣಮಂದಿರದೊಡ್ಡಿ ತಾಮರ
ಜ್ವಲಗೆಯನಾಡಿ ಸೋಡೆ ಸುಯೋಧನನೇವದ ಧರ್ಮಪುತ್ರನಂ | ಕುಲಧನ ಸಂಕುಲನಂಗಳನೆ ತಂದಿದೆಯಿಟ್ಟವನಾಡಿ ಸೋಲ್ತನಾ
ಕುಲಮತಿ ಮುಂದೆ ಭಾರತದೊಳೊಡ್ಡುವುದು ಕಡು ನನ್ನ ಮಾವೋಲ್ ||೭೨ (ದುರ್ಯೊಧನನು) ನಾವಾಡೋಣವೇ ಬನ್ನಿ ಎಂದು ಕರೆದನು. ಆಡುವ ಮನಸ್ಸು ಧರ್ಮರಾಜನಿಗೂ ಉಂಟಾಯಿತು. ೭೧. ಜೂಜಿಗೂ ರಣಕ್ಕೂ ಬೇಟೆಗೂ ಕರೆದರೆ ರಾಜನಾದವನು ಮೈಮರೆಸಿಕೊಂಡಿರುವುದು ಯೋಗ್ಯವಲ್ಲ ಎಂಬ ಪುರಾತನವಾದ ಹಿರಿಯಮಾತು ಅವನ ವ್ರತವಾಗಿ ಬಿಟ್ಟಿತು. ವll ಇಬ್ಬರೂ ಆಟವಾಡಲು ಮೊದಲು ಮಾಡಿದರು. ದಾಳಗಳನ್ನು ಬಿಡುವಂತೆ ಹೇಳಲು ಶಕುನಿಯು ಮೊದಲೇ ತಾನು ಸಿದ್ಧಪಡಿಸಿದ್ದ ಕಳ್ಳದಾಳಗಳನ್ನು ರಾಜಭಟನಂತೆ ದುರ್ಯೋಧನನ ಇಂಗಿತವನ್ನು ತಿಳಿದು ದಾಳಗಳನ್ನು ಕುಟ್ಟಿ ಸಮಪ್ರದೇಶದಲ್ಲಿ ಉರುಳಿಸಿದನು. ಪಣ(ಒತ್ತೆವನ್ನು ಕೇಳಿ ಎಂದನು ದುರ್ಯೋಧನ, ಹೊತ್ತು ಹೋಗುವುದುದಕ್ಕೂ ಪ್ರೀತಿಗೂ ಆಡುವ ನಮ್ಮಿಬ್ಬರಿಗೂ ಪಗಡೆಯಾಟದ ಹಾಸಿನ ಒಂದ ಹಲಗೆಗೆ ಸಾವಿರಗದ್ಯಾಣದ (ನಾಣ್ಯ) ಚಿನ್ನ (ಹಣವೇ)ವೇ ಸಾಕು, ಹೆಚ್ಚಿನದು ಬೇಡ ಎಂದು ತೀರ್ಮಾನಿಸಿದರು. ದುರ್ಯೋಧನನು ತನ್ನ ಕುಲವನ್ನೇ ಧೂಳಿನಲ್ಲಿ ಹೊರಳಿಸುವಂತೆ ದಾಳಗಳನ್ನು ಹೊರಳಿಸಿ ಮೊದ ಮೊದಲು ಪಗಡೆಯಾಟವನ್ನು ತಿಳಿಯದವನ ಹಾಗೆ ಗರವನ್ನು ಹಾಕಿ, ಸಲಸಲಕ್ಕೂ ಇಟ್ಟಿ ಒತ್ತೆಯನ್ನು ಅವರನ್ನು ಮೋಸಗೊಳಿಸುವದಕ್ಕೋಸ್ಕರ ಸೋತು ಸೋಲದಿಂದ ಅಸಮಾಧಾನಪಟ್ಟವನಂತೆ ನಟಿಸಿದನು. ಈಗ ಇನ್ನೂ ಒತ್ತೆಯನ್ನು ತೆಗೆದುಕೊಳ್ಳುವ ಯೆಂದು-೭೨. ಹಲಗೆಗೆ (ಒಂದು ಆಟಕ್ಕೆ ಹತ್ತುಸಾವಿರ ಗದ್ಯಾಣವಿರಲಿ ಎಂದು ತಕ್ಷಣ ಒಡ್ಡಿ ಆ ಹಲಗೆಗಳನ್ನೂ ಸೋತನು. ಸಮಾಧಾನದಿಂದ ಧರ್ಮರಾಯನೂ ದುರ್ಯೋಧನನೂ ಕಲಕಿದ ಮನಸ್ಸುಳ್ಳವರಾಗಿ ಸಮಸ್ತಕುಲಧನಗಳನ್ನೂ ಒಡ್ಡಿದರು. ಮುಂದೆ ನಡೆಯಲಿರುವ ಭಾರತಯುದ್ಧದಲ್ಲಿ ತನ್ನ ವಂಶವನ್ನು ಬಲಿಯಾಗಿ ಒಡ್ಡುವುದನ್ನು ನಿಜವನ್ನಾಗಿಸುವಂತೆ ಧರ್ಮರಾಜನು ಕುಲಧನಸಮೂಹಗಳನ್ನೂ ತಂದು