________________
೩೨೪ / ಪಂಪಭಾರತಂ
ಸಮಕಟ್ಟುವಮತ್ತೊಡೆ ಸಪ್ತವ್ಯಸನಂಗಳಯ್ಯರುಮನೊಂದುಂ ಗೆಲ್ಲುವಲ್ಲವು ರಾಷ್ಟ್ರವ್ಯಸನಮಂ ಬಳವ್ಯಸನಮಂ ಪಾರ್ವಮಪ್ಲೋಡವು ಮುನ್ನಮಿಲ್ಲ ಪರಮಂಡಳವ್ಯಸನಮನಾರಯ್ಯಮಫೊಡಿತ್ತುಂ ತೆತ್ತುಂ ಬಾಳ್ವೆ ಮಂಡಲಮಲ್ಲದ ಕೀಟೆಯುಂ ಮಾಟಿಯುಂ ನೆಗು ಮಂಡಲಮಿಲ್ಲ ಪುರುಷಮಂ ಸಮಕಟ್ಟುವಮಪ್ಲೋಡ ಪೊಕ್ಕಿಯಲಣುವರಿಲ್ಲ ರಸದಾನಾದಿಗಳೊಳ್ ಛಿದ್ರಿಸುವ ಮಗ್ಗೂಡವರಾಪ್ತವಂತರುಂ ಬುದ್ಧಿವಂತರುವಾಗಿ ನೆಗರಿನ್ನಾವ ಮಾಯೊಳ್ ಬಗೆಯಂ ಕೆಯ್ದೆ ಮಾಡುವಂ ಪೇಟೆಮನೆ ಶಕುನಿಯಿಂತೆಂದಂ
ಚಂ | ಬೆಸಸಿದ ನಿನ್ನ ಮಾತಿನಿತುಮಂತುಟಿ ಗೆಲ್ಲವು ಪಾಂಡು ಪುತ್ರರಂ ಬಸನದೊಡಂಬಡಂ ಮದುಮಾ ಯಮನಂದನನ ನೆತ್ತದೊಳ್ | ಬಸನಿಗನಾತನಂ ಬರಿಸಿ ನೆತ್ತಮನಾಡಿಸಿ ಗೆದ್ದುಕೊಳ್ಳಮಾ ವಸುಮತಿಯಂ ಮನಂಬಸದೆ ನೀನ್ ಬಟ್ಟೆಯಟ್ಟು ಫಣೀಂದ್ರಕೇತನಾ ||೬೮
ವ|| ಎಂದು ನಾಲವಾಸಗೆಗಳಂ ಮುನ್ನಮೆ ಸಮಕಟ್ಟಿ ತಾಮುಮಾಮುಂ ಕೆಲವು ದೆವಸಂ ಗೋಷ್ಠಿಯೊಳಿರ್ಪ೦ ಬರ್ಕೆಂದು ಬಟ್ಟೆಯನಟ್ಟಿದೊಡವರ ಮನದ ಪುಗೆಯಂ ಪೊಲ್ಲಮೆಯುಮನಯದ ಸಮಸ್ತಬಳೋದ್ಯುಕ್ತನಾಗಿ ಶಕುನಂಗಳ ಕ್ರಮಮಂ ಬಗೆಯದೆ
ವಿಶೇಷವಾಗಿ ಹೆಚ್ಚಿದರು. ಅವರ ಅಭಿವೃದ್ಧಿಗೆ ಪ್ರತಿಯಾಗಿ ಏನುಮಾಡೋಣ, ವ್ಯಸನಗಳನ್ನೇರ್ಪಡಿಸೋಣವೆಂದರೆ ಏಳು ವ್ಯಸನಗಳಲ್ಲಿ ಒಂದೂ ಆ ಅಯ್ದುಜನರನ್ನು ಗೆಲ್ಲಲಾರದು. ರಾಜ್ಯವ್ಯಸನವನ್ನೂ ಬಲವ್ಯಸನವನ್ನೂ ನೋಡೋಣವೆಂದರೆ ಅವು ಮೊದಲೇ ಇಲ್ಲ. ಶತ್ರುಮಂಡಳಗಳಿಂದ ಆಗಬಹುದಾದ ವ್ಯಸನವನ್ನು ವಿಚಾರಿಸುವುದಾದರೆ ಅವೆಲ್ಲ ಕೊಟ್ಟೂ ತತ್ತೂ ಬಾಳುವ ದೇಶಗಳಲ್ಲದೆ ಮೀರಿಯೂ ರೇಗಿಯೂ ಕೆಲಸ ಮಾಡುವ ಮಂಡಲಗಳಲ್ಲ. ಪೌರುಷಪ್ರದರ್ಶನಮಾಡೋಣವೆಂದರೆ ಅವರಲ್ಲಿ ಹೊಕ್ಕು ಯುದ್ಧಮಾಡುವ ಶಕ್ತಿಯವರಿಲ್ಲ. ವಿಷದಾನಾದಿಗಳಿಂದ ಭೇದಿಸೋಣವೆಂದರೆ ಅವರು ಆಪ್ತವಂತರೂ ಬುದ್ಧಿವಂತರೂ ಆಗಿದ್ದಾರೆ. ಬೇರಾವ ರೀತಿಯಲ್ಲಿ ಶತ್ರುವನ್ನು ಅಧೀನಮಾಡಿಕೊಳ್ಳೋಣ ಹೇಳಿಯೆನಲು ಶಕುನಿಯು ಹೀಗೆ ಹೇಳಿದನು.-೬೮, 'ನೀನು ಹೇಳಿದ ಮಾತಿಷ್ಟೂ ಹಾಗೆಯೇ ಸತ್ಯವಾದುದು. ಪಾಂಡುಪುತ್ರರನ್ನು ಅವು ಗೆಲ್ಲಲಾರವು. ಮರೆತೂ ಆ ಧರ್ಮರಾಯನು ವ್ಯಸನವನ್ನು ಅಂಗೀಕರಿಸುವುದಿಲ್ಲ. ಆದರೆ ಧರ್ಮರಾಜನು ಪಗಡೆಯಾಟದಲ್ಲಿ ಆಸಕ್ತನಲ್ಲವೇ. ಅವನನ್ನು ಬರಮಾಡಿ ಪಗಡೆಯಾಟವನ್ನಾಡಿಸಿ ಈ ಭೂಮಿಯನ್ನು ಅವನಿಂದ ಗೆದ್ದುಕೊಳ್ಳೋಣ. ಒಂದೇ ಮನಸ್ಸಿನಿಂದ ದುರ್ಯೋಧನಾ, ನೀನು ದೂತರೊಡನೆ ಅವನಿಗೆ ಹೇಳಿಕಳುಹಿಸು. ವll ಎಂದು ಮೋಸದ ದಾಳಗಳನ್ನು ಮೊದಲೇ ಸಿದ್ಧಪಡಿಸಿ 'ತಾವೂ ನಾವೂ ಕೆಲವುಕಾಲ ಜೊತೆಯಲ್ಲಿ ಒಟ್ಟಿಗಿರೋಣ ಬನ್ನಿ' ಎಂದು ದೂತರನ್ನು ಕಳುಹಿಸಿದರು. ಅವರ ಮನಸ್ಸಿನ ದುರ್ಭಾವವನ್ನೂ ದೌಷ್ಟವನ್ನೂ ತಿಳಿಯದೆ ಪಾಂಡವರು ಸಮಸ್ತಸೈನ್ಯದಿಂದ ಕೂಡಿ ವಿರೋಧವಾದ ಶಕುನಗಳನ್ನೂ ಲಕ್ಷಿಸದೆ “ವಿಧಿಯನ್ನು ಮೀರುವವರಾರು” ಎಂಬ ಮಾತನ್ನು ನಿಜವನ್ನಾಗಿ ಮಾಡಿ ಹಸ್ತಿನಾಪಟ್ಟಣಕ್ಕೆ ಬಂದರು. ಧೃತರಾಷ್ಟ್ರನೇ ಮೊದಲಾದ ಕುಲದ ಹಿರಿಯರೊಡನೆ