________________
ಷಷ್ಠಾಶ್ವಾಸಂ | ೩೧೯
ಕುಡವೇನ ಕುಡುವನ ಕುಡ
ಪಡೆವನ ಪಂಪೇಂ ನೆಗಡೆಗುಮೊ ಪೇಳ್ವಂ | ಕುಡವೇಮ ಕುಡುವಣ್ಣಂ
ಕುಡುಗಮ ಕುಡೆ ಕೊಳ್ಳ ಕಲಿಯನಾಯಲಕ್ಕುಂ |
ವ|| ಎಂದನಿತಳ್ ಮಾಣದೆ ಗೀರ್ವಾಣಾರಿಯಸುರಾರಿಯನಿಂತೆಂದಂ
ಕಂ
ದೊರೆಯಕ್ಕುಮೆ ನಿನಗೆ ಯುಧಿ
ಷ್ಠಿರನರ್ಘಮನ ಶಂಖದೊಳ್ ಪಾಲೆದಂ | ತಿರೆ ಮಲಿನಮಿಲ್ಲದೊಳುಲ
ದರಸುಗಳಿಗೆ ನೀನುಮಗ್ರಪೂಜೆಯನಾಂತಾ ||
ಮನದೊಲವರದಿಂದೀ ಯಮ
ತನಯನ ಕುಡುವಗ್ರಪೂಜೆ ಮತ್ಸನ್ನಿಧಿಯೊಳ್ | ನಿನಗಸನಿಯ ಮಿನ್ನುವ ನಂ
ಜನ ದೊರೆಯೆಂದೂಣರ ನಂದಗೋಪಾಲಸುತಾ ||
ಮನ ನಿನಗೆ ನಂದಗೋಪಾ
ಲನ ಮನ ತುಟುಗಾರ್ತಿ ನಿನಗೆ ಮನವಂಡತಿ ಪ |
ಚನೆ ಪಸಿಯ ಗೋವನ್ಯ ಕರ ಮನಯದ ನಿನ್ನಳವಿಗಳವನಯದ ನಗ 11
೪೯
980
೫೧
೫೨
ತೃಪ್ತಿಯಾಗಿ ಅಮೃತಪಾನಮಾಡಿ ಗಂಜಳದಿಂದ ಬಾಯಿಮುಕ್ಕಳಿಸಿ ಹಾಗೆ ಹೊಂದಿಕೆಯಿಲ್ಲದೇ ಇದೆಯಲ್ಲ! ೪೯. ಕೊಡು ಎಂದು ಹೇಳುವವನೂ ಕೊಡುವವನೂ ಕೊಟ್ಟರೆ ತೆಗೆದುಕೊಳ್ಳುವವನೂ ಒಬ್ಬೊಬ್ಬರ ಹಿರಿಮೆಯೂ ಎಷ್ಟು ಘನವಾದುದೊ! ನೋಡೋಣ. ಹೇಳುವವನು ಕೊಡು ಎಂದು ಹೇಳಲಿ; ಕೊಡುವಣ್ಣನು ಕೊಡಲಿ; ಕೊಟ್ಟರೆ ತೆಗೆದುಕೊಳ್ಳುವ ಶೂರರನ್ನು ನೋಡಿಯೇ ಬಿಡುತ್ತೇನೆ. ವ! ಎನ್ನು ವಷ್ಟರಲ್ಲಿಯೇ ತಡೆಯದೆ ದೇವತೆಗಳಿಗೆ ಶತ್ರುವಾದ ಶಿಶುಪಾಲನು ಅಸುರಾರಿಯಾದ ಕೃಷ್ಣನನ್ನು ಹೀಗೆಂದು ಮೂದಲಿಸಿದನು. ೫೦. 'ಯುಧಿಷ್ಠಿರನು ನಿನಗೆ ಅರ್ಥ್ಯವನ್ನೆತ್ತಿದರೆ ಅದು ನಿನಗೆ ಯೋಗ್ಯವಾದುದಾಗುತ್ತದೆಯೇ ? ಶಂಖದಲ್ಲಿ ಹಾಲೆರೆದಂತೆ ನಿಷ್ಕಲ್ಮಷವಾದ ಸತ್ಕುಲದರಸುಗಳು ನಾವಿರುವಾಗ ನೀನು ಅಗ್ರಪೂಜೆಯನ್ನು ಸ್ವೀಕರಿಸುತ್ತೀಯಾ? ೫೧. ಎಲೈ ನಂದಗೋಪಾಲನ ಮಗನೇ, ನಿನ್ನ ಮನಸ್ಸಿನ ಪಕ್ಷಪಾತ(ಪ್ರೀತಿ)ದಿಂದ ಈ ಧರ್ಮರಾಯನು ಕೊಡುವ ಈ ಅಗ್ರಪೂಜೆಯು ನನ್ನೆದುರಿಗೆ ನಿನಗೆ ಸಿಡಿಲಿನ, ಮೃತ್ಯುವಿನ ವಿಷದ ಸಮಾನವೆಂದು ಭಾವಿಸೋ. ೫೨. ಮನೆ ನಿನಗೆ ನಂದಗೋಪಾಲನ ಮನೆ, ದನಕಾಯುವವಳು ನಿನ್ನ ಮನೆಯ ಹೆಂಡತಿ, ನೀನು ಹಚ್ಚ ಹಸಿಯ ದನಕಾಯುವವನು. ಹೆಚ್ಚಿನ ಅವಿವೇಕದಿಂದ ನಿನ್ನ