________________
೩೨೦ ) ಪಂಪಭಾರತಂ
ಮುರನಡಸಿ ಪಿಡಿದು ಕಟ್ಟಿದ ಪರಿಭವಮಂ ಮಣಿದ ನಿನ್ನ ಪಡಗೆಯ್ದಟ್ಟಂ | ಶರದಿಂ ಬಿಡಿಸಿದನಲ್ಲನೆ | ಸರಿತ್ತುತಂ ಬನ್ನವಿನ್ನವೆಂಬುವುಮೊಳವೇ || ದನುಜಾಂತಕನೆಂಬೀ ನಿ - ನ್ನ ನಚ್ಚುಪೋದಂಕಮಲವೊ ಮುನ್ನೆನ್ನನ್ನಂ | ದನುಜಂ ಪುಟ್ಟದ ಸಂದುದು ನಿನಗೀ ಪೆಸರನ್ನ ಮುಂದೆಯುಂ ಸಂದಪುದೇ || ಆನಿರ್ದ ಸಭೆಯೊಳರ್ಘಮ ನಾನಲ್ಯಾಟಿಸಿದ ನಿನ್ನ ಬಿಸುನೆತ್ತರಂ || ತೀ ನೆರವಿ ನೋಡ ಕುಡಿಯದೂ ಡೇನೋ ಶಿಶುಪಾಲನೆಂಬ ಪಸರಸದಪುದೇ ||
ಮwದ ಮುಚುಕುಂದನೆಂಬನ ಮಿ ಕ್ಕುದನಂದು ನೀನ್ ಜರಾಸಂಧಂಗಂ | ಬಿಜುಡಿಮದಂ ಭೂತಳ ಮಳಿಯದ ನೆನೆಯಲಿ ಗೋವುಗಾದುದು ಪುಸಿಯೇ | , ೫೬ ಮಾನಾವ ಪಂದಿಯಂದೆನಿ ತಾನುಂ ತಾನಾಗಿ ಡೊಂಬವಿದ್ದಯನಾಡಲ್ | ನೀನಳಿವೆಯುದಿದಿರ್ಚಿದೊ ಡಾನಳಿವೆ ನಿನ್ನಲ್ಲಿ ದೆಸೆವಲಿಗೆಯ್ಯ |
ಯೋಗ್ಯತೆಯ ಪ್ರಮಾಣವನ್ನೇ ತಿಳಿಯದೆ ನಡೆದುಕೊಂಡಿದ್ದೀಯೆ. ೫೩. ಮುರಾಸುರನು ಮೇಲೆಬಿದ್ದು ನಿನ್ನನ್ನು ಕಟ್ಟಿಹಾಕಿದ್ದ ಸೋಲನ್ನು ಮರೆತೆಯಾ? ನಿನ್ನ ಹಿಂಗೈಗಟ್ಟನ್ನು ಭೀಷ್ಮನು ಬಿಡಿಸಿದನಲ್ಲವೇ? ನಿನ್ನ ಸೋಲೆಂಬುದು ಇಂಥದೆಂಬುದುಂಟೇ? ೫೪. ಎಲವೋ, ದನುಜಾಂತಕ (ರಾಕ್ಷಸರಿಗೆ ಯಮಸ್ವರೂಪ) ಎಂಬ ನಿನ್ನ ಅಹಂಕಾರಕ್ಕೆ ಪಾತ್ರವಾದ ಹೆಸರು ಮೊದಲು ನನ್ನಂತಹ ದನುಜ(ರಾಕ್ಷಸನುನು ಹುಟ್ಟದೆ ಇದ್ದುದರಿಂದ ಪ್ರಾಪ್ತವಾಯಿತು. ನಿನಗೆ ಈ ಹೆಸರು ನನ್ನ ಮುಂದೆಯೂ ಸಲ್ಲುತ್ತದೆಯೇ? ೫೫. ನಾನಿರುವ ಸಭೆಯಲ್ಲಿ ಅರ್ಭ್ಯವನ್ನು ಪಡೆಯುವುದಕ್ಕೆ ಬಯಸಿದ ನಿನ್ನ ಬಿಸಿರಕ್ತವನ್ನು ಈ ಸಭೆಯು ನೋಡುತ್ತಿರುವ ಹಾಗೆಯೇ ಕುಡಿಯದಿದ್ದರೆ ಶಿಶುಪಾಲನೆಂಬ (ನನ್ನ ಹೆಸರು ಪ್ರಕಾಶಿಸುತ್ತದೆಯೇನೋ ? ೫೬. ಅಂದು ಮುಚುಕುಂದನೆಂಬುವನನ್ನು ಮೊರೆಹೊಕ್ಕದ್ದನ್ನೂ ಮರೆತೆಯಾ ? ಅಂದು ನೀನು ಜರಾಸಂಧನಿಗೂ ಹೆದರಿ ಓಡಿದುದನ್ನೂ ಪ್ರಪಂಚವೇ ಅರಿಯದೇ? ಜ್ಞಾಪಿಸಿಕೊಳ್ಳೋಳ, ನೀನು ದನಕಾಯುವುದು ಸುಳ್ಳೇನೊ ? ೫೭. ಮೀನು, ಆಮೆ, ಹಂದಿ ಎಂದು ಎಷ್ಟೋ ರೀತಿಯಲ್ಲಿ ಡೊಂಬರವಿದ್ಯೆಯನ್ನಾಡಲು ನೀನು ಬಲ್ಲೆ? ವೇಗವಾಗಿ ಎದುರಿಸಿದರೆ ನಿನ್ನನ್ನು ಇಲ್ಲಿ