________________
. . ೩೧೮ / ಪಂಪಭಾರತ
ಕುರುವೃದ್ಧಃ ಕುಲವೃದ್ದ ಸರಿತ್ತುತಂ ತಕನೆಂದು ನಂಬಿದ ಸಭೆಯೊಳ್ | ದೊರಗಿಡಿಸಿ ನುಡಿದೊಡೇನೂಲ ವರಮೆನ್ನದೆ ನೀನುಮದನ ಕೊಂಡೆಸಗುವುದೇ || ಮನದೋಲವರಮುಳ್ಳೂಡ ಕುಡು ಮನೆಯೊಳ್ ಹರಿಗಗ್ರಪೂಜೆಯಂ ಯಜ್ಞದೊಳೀ | ಮನುಜಾಧೀಶ್ವರಸಭೆಯೋಳ್ ನೆನೆಯಲುಮಾಗದು ದುರಾತ್ಮನಂ ಬೆಸಗೊಳ್ತಾ || ಅಳವಡೆಯದೆದ್ದು ಬಳವಳ ಬಳೆವಿನೆಗಂ ಪಚ್ಚ ಪಸಿಯ ತುಲುಕಾಳಿಂಗ ಗಳಿಕೆಯನೆ ಮಾಡಿ ನೀನುಂ ಪಳಿಯಂ ಕಟ್ಟದೆಯೊ ಭೂಪರಿನಿಬರ ಕೊರಳೊಳ್ || ೪೬ ದೇವರನಡಿಗಜಗಿಸಿ ಸಕ ಭಾವನಿತಳದದಟರಂ ಪಡಲ್ವಡಿಸಿದ ಶಾ | ರ್ಯಾವಷ್ಟಂಭದೊಳಾನಿರೆ ಗೋವಳಿಗಂಗಗ್ರಪೂಜೆಯಂ ನೀನ್ ಕುಡುವಾ || ಸಮಕಟ್ಟಳೆಯದ ಹರಿಗ ರ್ಫಮ ನಿಂದಿರ್ದ ಯಜ್ಞಮದು ಮೊದಲೊಳ್ ತಾ | ನಮರ್ದುಮಮರ್ದಿರದೆ ತಣಿಯುಂ |
ಡಮರ್ದ೦ ಗೋಮೂತ್ರದಿಂದ ಬಾಯೂಸಿದವೋಲ್ || ೪೮ ೪೪. ಭೀಷ್ಮನು ಕುರುವಂಶದಲ್ಲಿ ಹಿರಿಯ, ಕುಲದಲ್ಲಿ ಹಿರಿಯವ ಯೋಗ್ಯ ಎಂದು ನಂಬಿದ ಈ ಸಭೆಯಲ್ಲಿ ತನ್ನ ಯೋಗ್ಯತೆಯನ್ನು ಕೆಡಿಸಿಕೊಂಡು ಇನ್ನೂ ಕೃಷ್ಣನಿಗೆ ಅರ್ಥ್ಯವನ್ನು ಕೊಡು ಎಂದು ಹೇಳಿದರೆ ಅದನ್ನು ಪಕ್ಷಪಾತವೆಂದು ತಿಳಿದುಕೊಳ್ಳದೆ ನೀನೂ ಆ ಭೀಷ್ಮನು ಹೇಳಿದುದನ್ನೇ ಅಂಗೀಕರಿಸಿ ಹಾಗೆ ಮಾಡುವುದೇ? ೪೫. ಮನಸ್ಸಿನಲ್ಲಿ ಪಕ್ಷಪಾತವಿದ್ದರೆ ಕೃಷ್ಣನಿಗೆ ನಿಮ್ಮ ಮನೆಯಲ್ಲಿ ಅರ್ಥ್ಯವನ್ನು ಕೊಡು. ಯಜ್ಞದಲ್ಲಿ ಈ ಚಕ್ರವರ್ತಿಗಳ ಸಭೆಯಲ್ಲಿ ಆ ದುರಾತ್ಮನನ್ನು ನೆನೆಸಿಕೊಳ್ಳಲೂ ಆಗದು. ಆ ದುರಾತ್ಮನನ್ನು ಪ್ರಶ್ನೆಮಾಡುವುದೇಕೆ ? ೯೬. ಅಳತೆಯಿಲ್ಲದ ದಡ್ಡತನವು ಅತಿಶಯವಾಗಿ ಬೆಳೆಯುತ್ತಿರಲು ಆ ಹಚ್ಚಹಸಿಯ ದನಕಾಯುವವನಿಗೆ ಗೌರವವನ್ನು ಮಾಡಿ ನೀನೂ ಕೂಡ ಇಷ್ಟು ಜನ ರಾಜರ ಕೊರಳಿನಲ್ಲಿ ಅಪಯಶಸ್ಸನ್ನು ಕಟ್ಟಿದೆಯಲ್ಲ! ೪೭. ದೇವತೆಗಳನ್ನೆಲ್ಲ ಕಾಲಿಗೆ ಬೀಳುವ ಹಾಗೆ ಮಾಡಿ ಸಮಸ್ತಭೂಮಂಡಲದ ರಾಜರುಗಳನ್ನೂ ಕೆಳಗುರುಳುವ ಹಾಗೆ ಮಾಡಿದ ಪರಾಕ್ರಮದ ಗರ್ವದಿಂದ ಕೂಡಿದ ನಾನಿರುವಾಗ ಸಾಮಾನ್ಯನಾದ ದನಕಾಯುವವನಿಗೆ ನೀನು ಅಗ್ರಪೂಜೆಯನ್ನು ಕೊಡುತ್ತೀಯಾ, ೪೮, ಔಚಿತ್ಯ ಅನೌಚಿತ್ಯಗಳನ್ನು ಅರಿಯದೆ ಹರಿಗೆ (ಕೃಷ್ಣನಿಗೆ) ಎತ್ತಿದ ಅರ್ಭ್ಯವನ್ನುಳ್ಳ ಈ ಯಜ್ಞವು ಮೊದಲು ಸರಿಯಾಗಿದ್ದರೂ ಕೊನೆಯಲ್ಲಿ