________________
ಷಷ್ಠಾಶ್ಚಾಸಂ / ೩೧೫ ಕಂll ಚಾರುತರ ಯಜ್ಞವಿದ್ಯಾ
ಪಾರಗರ ರವಂಗಳಿಂ ಸಧಾಕಾರ ವಷ | ಟ್ಯಾರ ಸ್ವಾಹಾಕಾರೋಂ | ಕಾರ ಧ್ವನಿ ನೆಗಟಿ ನೆಗಟ್ಟುದಾಹುತಿಧೂಮಂ ಬಳಸೆ ಮುಗಿಲಲ್ ಕನಕಾ ಚಳಮಂ ಬಳಸುವವೊಲಿಕ್ಕಿದಾಹುತಿಗಳ ಗೊಂ | ದಳದಿನೊಡನೂಗೆಹ ಪೊರೆಗಳ
ಬಳಸಿದುವೆಡೆವಿಡದ ಕನಕಯೂಪಮನಾಗಳ್ || ಚಂil ಒಡನೆ ದಿಗಂತ ದಂತಿಗಳ ಕೊಡ ಮೊದಲ್ಗಳೊಳೆಯ ಪೊಕ್ಕು ಸಿ
ಪಡಸಿದ ಮಾಣಿಯಾದುವು ಕರಂಗಳಡಂಗಿ ಕಿಲುಬುಗೊಂಡ ಕ | ನಡಿಗಣೆಯಾಯ್ತು ಭಾನುವಳಯಂ ದಿವಿಜಾಪಗೆ ನೋಡೆ ಕೂಡ ಕ ರ್ಪಡರ್ದಣೆಯಾದುದಾ ಯಮುನೆಗಗ್ಗದ ಯಾಗದ ಧೂಮದೇಣಿಯೊಳ್ ll೩೬ ಕ೦ll ಗಣನಾತೀತಾಜಾಹುತಿ
ಗಣದಿಂದ ತಣಿಯ ಜಾತವೇದನುಮಾ ಬ್ರಾ: | ಹಣಸಮಿತಿ ಬೇಳೆ ದೇವರ್ ತಣಿಯುಂಡರ್ ನೆರೆದು ದಿವ್ಯಹವ್ಯಾಮೃತಮಂ |
೩೭ ಮll ತ್ರಿದಶೇಂದ್ರಂಗೆ ಯುಧಿಷ್ಠಿರಾಧ್ವರದ ಮಾಸಾಮರ್ಥ್ಯಮಂ ಸೂಟು ಸೂ
ಬದ ಪೇಪಲ್ ಪರಿವಂತೆ ಪೊ ಪಲವುಂ ಧೂಮಂಗಳಾ ಹೋಮ ಧೂ || ಮದ ಗಂಧಂ ನಸು ಮುಟ್ಟಿ ದಿವ್ಯಮಖಮಂ ಕಳ್ಕೊಂಡು ಸಗ್ಯಕ್ಕೆ ಪಾ ಆದುವಾ ಪಾರಿವ ಜಕ್ಕವಕ್ಕಿಗಳದೇಂ ಪಂಪೋ ಮಹಾಯಜ್ಞದಾ || ೩೮
ಉದ್ದಾತೃ, ನೇತ್ರ, ಹೋತೃ, ಜಮದಗ್ನಿಗಳೇ ಮೊದಲಾದ ೧೬. ಋತ್ವಿಜರುಗಳಿಂದ ಯಜ್ಞ ಮಾಡಹೇಳಿ ಧರ್ಮರಾಜನು ಪತ್ನಿಯಿಂದ ಕೂಡಿ ಯಜಮಾನನಾದನು. ೩೪. ಯಜ್ಞವಿದ್ಯೆಯಲ್ಲಿ ಪೂರ್ಣಪಂಡಿತರಾದವರ ಅತ್ಯಂತ ಮನೋಹರವಾದ ಧ್ವನಿಗಳಿಂದ ಸ್ವಾಹಾಕಾರ, ಸ್ವಧಾಕಾರ, ವಷಟ್ಕಾರ, ಓಂಕಾರಧ್ವನಿಗಳುಂಟಾದುವು, ಹವಿಸ್ಸಿನ ಹೊಗೆಯು ಮೇಲಕ್ಕೆದ್ದಿತು. ೩೫. ಮೋಡಗಳು ಮೇರುಪರ್ವತವನ್ನು ಬಳಸುವ ಹಾಗೆ ಹೋಮಮಾಡಿದ ಆಹುತಿಗಳ ಸಮೂಹದಿಂದ ಹುಟ್ಟಿದ ಹೊಗೆಗಳು ಅವಿಚ್ಛಿನ್ನವಾಗಿ ಚಿನ್ನದ ಯೂಪಸ್ತಂಭವನ್ನು ಬಳಸಿದುವು. ೩೬. ಅತಿಶಯವಾದ * ಯಾಗದ ಹೆಚ್ಚಿದ ಹೊಗೆಯು ದಿಕ್ಕುಗಳ ಕೊನೆಯಲ್ಲಿರುವ ಆನೆಗಳ ಕೊಂಬುಗಳ ಮೂಲವನ್ನು ವಿಶೇಷವಾಗಿ ಪ್ರವೇಶಿಸಿ ಚಿಪ್ಪನ್ನು ತೊಡಿಸಿದಂತಾಯಿತು. ಸೂರ್ಯ ಬಿಂಬವು ಕಿಡಿಗಳು ಹೊಗೆಯಿಂದ ಮರೆಯಾಗಿ ಕಿಲುಬುಗೊಂಡ ಕನ್ನಡಿಗೆ ಸಮಾನ ವಾಯಿತು. ದೇವಗಂಗಾನದಿಯು ಕರಗಾಗಿ ಯಮುನಾದಿಗೆ ಸಮಾನವಾಯಿತು. ೩೭. ಅಸಂಖ್ಯಾತವಾದ ಆಜ್ಞಾಹುತಿಗಳ ಸಮೂಹದಿಂದ ಅಗ್ನಿಯು ತೃಪ್ತಿಪಡುವಂತೆ ಆ ಬ್ರಾಹ್ಮಣಸಮೂಹವು ಹೋಮಮಾಡಲು ದೇವತೆಗಳೆಲ್ಲ ಒಟ್ಟುಗೂಡಿ ಶ್ರೇಷ್ಠವಾದ ಹವಿಸ್ಸುಗಳೆಂಬ ಅಮೃತವನ್ನು ತೃಪ್ತಿಯಾಗಿ ಊಟಮಾಡಿದರು. ೩೮. ಧರ್ಮರಾಜನ ಯಜ್ಞದ ಮಹಾಮಹಿಮೆಯನ್ನು ದೇವೇಂದ್ರನಿಗೆ ಕ್ರಮಕ್ರಮವಾಗಿ