________________
೩೧೬ | ಪಂಪಭಾರತಂ
ವ|| ಅಂತು ಪುರೋಡಾಶ ಪವಿತ್ರೋದರನುಂ ಸೋಮಪಾನ ಕಷಾಯಿತೋದರನುಮಾಗಿ ಮೂವತ್ತೆರಡು ದಿವಸದೊಳ್ ಕಡುವಂ ನಿರ್ವತಿ್ರಸಿ ಮಹಾದಾನಂಗೆಯ್ದು ದಕ್ಷಿಣಾಕಾಲದೊಳ್ ಉll ಒಟ್ಟದ ಪೊನ್ನ ಬೆಟ್ಟುಗಳನೀವಡಗೇವುದೂ ತೂಕಮನ್ನ ಕೆ
“ಟ್ಟಳೆ ಕೊಳ್ಳಿಮಂದು ಕುಡ ಷೋಡಶ ಋತ್ವಿಜರ್ರಿತ್ತುದರ್ಕೆ ಬಾ | ↑ಟ್ಟರೆ ವಿಪ್ರಕೋಟಿ ಮಡಗಡೆಯಿಲ್ಲದೆ ಪೊನ್ನ ರಾಶಿಯಂ
ಬಟ್ಟನೆ ಬಂದು ಕಾಯೆ ಯಮನಂದನನೇನ್ ತೊದಳಿಲ್ಲದಿತ್ತನೆ || ೩೯ ಸ | ದಾನಾಂಭಃ ಪೀನ ಗಂಡಸ್ಥಳ ಕರಿನಿಕರಂ ಬಾಯೋ ಮಚ್ಚುವೇಲಾ
ಜಾನೇಯಾಶ್ಚರಂ ಬಾಯೊ ಮಣಿನಿಚಯಂ ಬಾಚಿಯೋ ಪೇಟಿಮೆಂದಾ | ದೀನಾನಾಥರ್ಗೆ ವೃದ್ಧ ದ್ವಿಜ ಮುನಿನಿಕರಕ್ಕಂದೆಡರ್ ಪೋಪಿನಂ ಕಃ ಕೇನಾರ್ಥಿ ಕೋ ದರಿದ್ರ ಎನುತುಮನಿತುಮಂ ಧರ್ಮಜಂ ಸೂಚಿಗೊಟ್ಟಂ ||೪೦
ವ|| ಅಂತು ನಿಜ ಧವಳಚ್ಚತ್ರ ಚಾಮರ ಸಿಂಹಾಸನಾದಿ ರಾಜಚಿಹ್ನಂಗಳುಟಿಯ ಸರ್ವಸ್ವಮಲ್ಲಮಂ ದಕ್ಷಿಣೆಗೊಟ್ಟು ವ್ಯಾಸ ಗಾಂಗೇಯ ವಿದುರ ಬಾತ್ಮೀಕ ಸೋಮದತ್ತ ಭಗದತ್ತ
ತಿಳಿಸಲು ಹರಿಯುವಂತೆ ಹಲವು ಹೊಗೆಗಳೂ ಆಕಾಶವನ್ನು ಮುಟ್ಟಿದುವು. ಆ ಹೋಮದ ಹೊಗೆಯ ವಾಸನೆಯು ತಮ್ಮನ್ನು ಸ್ಪರ್ಶಿಸಲು ಆ ಶ್ರೇಷ್ಟವಾದ ಯಜ್ಞವನ್ನು ಸ್ವೀಕರಿಸಿ ಪಾರಿವಾಳ ಮತ್ತು ಚಕ್ರವಾಕಪಕ್ಷಿಗಳು ಸ್ವರ್ಗಕ್ಕೆ ಹಾರಿದುವು. ಆ ಮಹಾಯಜ್ಞದ ಹಿರಿಮೆಯನ್ನು ಏನೆಂದು ವರ್ಣಿಸುವುದು. ವ|| ಹಾಗೆ ಧರ್ಮರಾಜನು ಪುರೋಡಾಶದಿಂದ ಪವಿತ್ರೀಕೃತವಾದ ಹೊಟ್ಟೆಯುಳ್ಳವನೂ ಸೋಮರಸಪಾನದಿಂದ ಕದಡಿದ ಉದರವುಳ್ಳವನೂ ಆಗಿ ಆ ಮುವ್ವತ್ತೆರಡುದಿವಸಗಳಲ್ಲಿ ಯಜ್ಞವನ್ನು ಮುಗಿಸಿ ಮಹಾದಾನವನ್ನು ಮಾಡಿ ದಕ್ಷಿಣೆಯನ್ನು ಕೊಡುವ ಕಾಲದಲ್ಲಿ ೩೯. ರಾಶಿಮಾಡಿದ ಚಿನ್ನದ ಬೆಟ್ಟಗಳನ್ನು ದಾನಮಾಡುವಾಗ ತೂಕಮಾಡುವುದೇತಕ್ಕೆ? ನನ್ನ ಕೈಕಟ್ಟಳೆಯ ತೂಕದಿಂದಲೇ ಕೊಳ್ಳಿ ಎಂದು ಹದಿನಾರು ಋತ್ವಿಕ್ಕುಗಳಿಗೆ ದಾನಮಾಡಿದುದನ್ನು ನೋಡಿ ಬ್ರಾಹ್ಮಣರ ಸಮೂಹವು ಆಶ್ಚರ್ಯದಿಂದ ಬಾಯ್ದಿಟ್ಟಿತು. ದಾನಮಾಡಿದ ಹೊನ್ನರಾಶಿಯನ್ನು ಮಡಗುವುದಕ್ಕೆ ಸ್ಥಳವಿಲ್ಲದಷ್ಟು ದ್ರವ್ಯವನ್ನು ರಕ್ಷಿಸುತ್ತಿರಲು ಧರ್ಮರಾಯನು ವಂಚನೆಯಿಲ್ಲದೆ ದಾನಮಾಡಿದನು. ೪೦. ಮದೋದಕದಿಂದ ಕೂಡಿದ ದಪ್ಪವಾದ ಗಂಡಸ್ಥಳಗಳನ್ನುಳ್ಳ ಆನೆಯು ನಿಮಗೆ ಬೇಕೆ? ನಿಮ್ಮ ಇಷ್ಟವಾದು. ದನ್ನು ಹೇಳಿ; ಉತ್ತಮವಾದ ಕುದುರೆಗಳ ಸಮೂಹವು ನಿಮಗೆ ಪ್ರಯೋಜನವಾದೀತೇ. ರತ್ನಸಮೂಹವು ಬೇಕೆ ಹೇಳಿ ಎಂದು ದೀನರಿಗೂ ಅನಾಥರಿಗೂ ಮುದುಕರಿಗೂ ಬ್ರಾಹ್ಮಣರಿಗೂ ಋಷಿಸಮೂಹಕ್ಕೂ ಬಡತನವು ಹೋಗವಷ್ಟು, ಯಾರಿಗೆ ಏನುಬೇಕು, ದರಿದ್ರರಾರು, ಎನ್ನುತ್ತ ಅಷ್ಟನ್ನೂ ಧರ್ಮರಾಜನು ಸೂರೆಯಾಗಿ ಕೊಟ್ಟನು. ವ ಹಾಗೆ ತನ್ನ ಶ್ವೇತಚ್ಛತ್ರಿ ಚಾಮರ ಸಿಂಹಾಸನವೇ ಮೊದಲಾದ ರಾಜಚಿಹ್ನೆಗಳನ್ನು ಬಿಟ್ಟು ಉಳಿದ ಸರ್ವಸ್ವವನ್ನೂ ದಕ್ಷಿಣೆಯಾಗಿ ಕೊಟ್ಟು ವ್ಯಾಸ ಗಾಂಗೇಯ ವಿದುರ ಬಾಘೀಕ ಸೋಮದತ್ತ ಭಗದತ್ತ ಧೃತರಾಷ್ಟ್ರ ದ್ರೋಣಾಶ್ವತ್ಥಾಮ ಕೃಪ ಮೊದಲಾದ