________________
೬೧೪ | ಪಂಪಭಾರತಂ ನಾರಾಯಣನ ಮತದೊಳ್ ಹಸ್ತಿನಾಪುರದೊಳಿರ್ದ ದೃತರಾಷ್ಟ್ರ ವಿದುರ ಗಾಂಗೇಯ ದ್ರೋಣಾಶ್ವತ್ಥಾಮ ಕೃಪಬಾಘೀಕ ಸೋಮದತ್ತ ಭಗದತ್ತ ಭೂರಿಶ್ರವಃ ಕರ್ಣ ಶಲ್ಯ ಶಕುನಿ ಸೈಂಧವ ದುರ್ಯೋಧನ ದುಶ್ಯಾಸನಾದಿಗಳೆಲ್ಲಂ ಬಲಿಯನಟ್ಟಿ ಬರಿಸಿ ಶಿಶುಪಾಲಾದಿ ಗಳಪ್ಪನೇಕಾಧೀಶ್ವರರೆಲ್ಲರುಮಂ ಬರಿಸಿ ವ್ಯಾಸರ್ ಮೊದಲಾಗೆ ಬ್ರಹ್ಮಋಷಿಯರೆಲ್ಲರುಮಂ ಬರಿಸಿ ತುಟಿಲ ಪರಕೆಯ ಸಮಾನ ಪ್ರತಿಪತ್ತಿಯಿಂ ಕಿವಿರಿಯರಳೆದು ಪೊಡೆವಟ್ಟು ಪರಸಿಯಪ್ಪಿಕೊಂಡು ನುಡಿದು ನೋಡಿಯುಂ ನಕ್ಕುಂ ಕೆಯ್ಯಂ ಪಿಡಿದುಂ ಬಲ್ಲಿದಿರೆ ಎಂದು ಪ್ರಿಯದೊಳಂ ಬಿರ್ದಿನೊಳಂ ಸಂತಸಂಬಡಿಸಿ ಶುಭ ದಿನ ವಾರ ನಕ್ಷತ್ರ ಯೋಗ ಕರಣ ಮುಹೂರ್ತದೊಳಿಂದ ಪ್ರಸ್ತಕ್ಕೆ ಉತ್ತರ ದಿಣ್ಣಾಗದೊಳ್ ಸಹಸ್ರ ಯೋಜನ ಪ್ರಮಾಣದೊಳ್ ಯಾಗಮಂಟಪಮಂ ಸಮೆದು ಮಯನ ಕೊಟ್ಟ ಸಭಾಮಂಟಪದೊಳ್ ಬ್ರಹ್ಮಋಷಿಯರುಮನರಸುಮಕ್ಕಳು ಮನೆಡೆಯದಿರಿಸಿ ಯಜ್ಞದ್ರವ್ಯಂಗಳೆಲ್ಲಮಂ ನೆರಪಿ ಮಹಾವಿಭವದೊಳ್ ಶಮಾ ಪಾರ್ಶ್ವತಳ ದಕ್ಷಿಣಾಶಾಲೆಯೊಳ್ ಹಿರಣ್ಯದಾನವಂ ಮಾಡಿ ವೇದಿನಿಹಿತಂಗಳಷ್ಟಾಹವನೀಯ ದಕ್ಷಿಣ ಗಾರ್ಹಪತ್ಯಂಗಳೆಂಬ ಮೂಜುಂ ಕೊಂಡಂಗಳೊಳುತ್ತರವೇದಿಯೊಳಗ್ನಿಸಂಧಾನಂಗೆಯ್ದು ವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜ ಬ್ರಹ್ಮಾಧ್ವರ್ಯಾಕ್ಷೀಧ ಮೈತ್ರಾವರುಣಾಗ್ನಿ ಪರಿಚಾರಕೋದ್ಧಾತ್ಮ ನೇತೃ ಹೋತೃ ಜಮದಗ್ನಾದಿಗಳಪ್ಪ ಷೋಡರ್ಶಜರ್ಕಳಿಂ ಬೇಳಟ್ಟು ಧರ್ಮಪುತ್ರಂ ಸಪತ್ನಿ ಯಜಮಾನನಾಗಿರ್ದಾಗಳ
ಪ್ರಕಾರ ಹಸ್ತಿನಾಪುರದಲ್ಲಿದ್ದ ಧೃತರಾಷ್ಟ್ರ ವಿದುರ ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಬಾಘೀಕ ಸೋಮದತ್ತ ಭಗದತ್ತ ಭೂರಿಶ್ರವ ಕರ್ಣ ಶಲ್ಯ ಶಕುನಿ ಸೈಂಧವ ದುರ್ಯೋಧನ ದುಶ್ಯಾಸನನೇ ಮೊದಲಾದವರನ್ನೆಲ್ಲ ದೂತರನ್ನು ಕಳುಹಿಸಿ ಬರಮಾಡಿಕೊಂಡರು. ಶಿಶುಪಾಲನೇ ಮೊದಲಾದ ಅನೇಕ ಚಕ್ರವರ್ತಿಗಳನ್ನು ಬರಿಸಿದರು. ವ್ಯಾಸರೇ ಮೊದಲಾದ ಬ್ರಹ್ಮಋಷಿಗಳನ್ನು ನಮಸ್ಕಾರ ಆಶೀರ್ವಾದ ಸಮಾನಸತ್ಕಾರಗಳಿಂದ ಕಿರಿಯರು ಹಿರಿಯರು ಎಂಬುದನ್ನು ತಿಳಿದು ನಮಸ್ಕರಿಸಿ ಆಶೀರ್ವದಿಸಿ ಆಲಿಂಗಿಸಿದರು. ಮಾತನಾಡಿದರು, ನೋಡಿದರು, ನಕ್ಕರು, ಹಸ್ತಲಾಘವವನ್ನಿತ್ತು ಕ್ಷೇಮವಾಗಿದ್ದೀರಾ ಎಂದು ಪ್ರಶ್ನೆಮಾಡಿದರು. ಪ್ರೀತಿಯಿಂದಲೂ ಆತಿಥ್ಯದಿಂದಲೂ ಸಂತೋಷಪಡಿಸಿದರು, ಶುಭದಿನ ವಾರ ನಕ್ಷತ್ರ ಯೋಗ ಕರಣ ಮುಹೂರ್ತದಲ್ಲಿ ಇಂದ್ರಪ್ರಸ್ಥಕ್ಕೆ ಉತ್ತರದಿಗ್ಯಾಗದಲ್ಲಿ ಸಹಸ್ರ ಯೋಜನದಳತೆಯಲ್ಲಿ ಯಾಗಮಂಟಪವನ್ನು ನಿರ್ಮಿಸಿದರು. ಮಯನು ಕೊಟ್ಟ ಸಭಾಮಂಟಪದಲ್ಲಿ ಬ್ರಹ್ಮಋಷಿಯರನ್ನೂ ರಾಜಕುಮಾರರನ್ನೂ ಉಚಿತ ಸ್ಥಳಗಳಲ್ಲಿ ಕುಳ್ಳಿರಿಸಿದರು. ಯಜ್ಞದ್ರವ್ಯಗಳನ್ನೆಲ್ಲ ಒಟ್ಟುಗೂಡಿಸಿದರು. ಮಹಾವೈಭವದಿಂದ ಬನ್ನಿಮರದ ಪಕ್ಕದಲ್ಲಿದ್ದ ದಕ್ಷಿಣಶಾಲೆಯಲ್ಲಿ ಹಿರಣ್ಯದಾನವನ್ನು ಮಾಡಿ ಜಗಲಿಗಳ ಮೇಲೆ ಇಡಲ್ಪಟ್ಟ ಆಹವನೀಯ ದಕ್ಷಿಣ ಗಾರ್ಹಪತ್ಯಗಳೆಂಬ ಮೂರು ಕುಂಡಗಳಲ್ಲಿ ಉತ್ತರದ ಜಗಲಿಯಲ್ಲಿ ಅಗ್ನಿಸಂಧಾನಮಾಡಿಕೊಂಡರು. ವ್ಯಾಸ, ಕಶ್ಯಪ, ವಿಶ್ವಾಮಿತ್ರ, ಭಾರದ್ವಾಜ, ಬ್ರಹ್ಮ, ಅಧ್ವರ್ಯ, ಆಗ್ನಿದ್ರ, ಮೈತ್ರಾವರುಣ, ಅಗ್ನಿಪರಿಚಾರಕ,