________________
ಷಷ್ಠಾಶ್ವಾಸಂ | ೩೧೩
ವಜ್ರಮುಮಿಂದ್ರಾಣಿಯ ಕೈಗನ್ನಡಿಯುಮುಲೆಯ ಸಮಸ್ತ ವಸ್ತುಗಳಂ ತಂದಂ ಸಹದೇವನುಂ
ಪಡುವಣ ದೆಸೆಯ ಮಂಡಳಿಕರನದಿರ್ಪಿಯುಮುದಿರ್ಪಿಯುಂ ಕೊಂಡು ವರುಣನ ಮಕರಮುಂ ವರುಣಾನಿಯ ಕೊರಲೊಳಯೆ ಮಿನುಗುಮುಟೆಯೆಯುಟದ ವಸ್ತುಗಳೆಲ್ಲಮಂ ತಂದು ಮುಂದಿಟ್ಟಂ ನಕುಳನುಂ ತಂಕಣ ದೆಸೆಯ ಮಲೆಪರಂ ಮಂಡಳಿಕರುಮನಸಿಯರಾಗ ಕವರ್ದುಕೊಂಡು ಲಂಕೆಯ ಮೇಗೆ ನಡೆದು ವಿಭೀಷಣಂ ತನಗೆ ಬಾಯ್ಕಳದಿರ್ದೊಡೆ ವಿಕ್ರಮಾರ್ಜುನಂಗೆ ಪೇಳಿಟ್ಟಿದೊಡೆ
eroll
ತೊಂಡಿನೊಳುರ್ಕಿ ಕೆಟ್ಟ ದಶಕಂಠನನಕ್ಕಟ ಕೊಂಡ ಪರ್ಮರುಳ್ ಕೊಂಡುದೆ ತನ್ನುಮಂ ಬಿಸುಡು ನೀಂ ಬಲಗರ್ವಮನಾ ಸಮುದ್ರ ಮೇ | ಬಂಡಮ್ ಪಾಯೊಡೆಂದು ನಿಜ ಸಾಯಕದೊಳ್ ಬರೆದೆಚ್ಚು ಕಪ್ಪಮಂ ಕೊಂಡನವುಂಕಿ ಲಂಕೆಯ ವಿಭೀಷಣನಂ ಪರಸೈನ್ಯಭೈರವಂ ||
22
ವ|| ಅಂತು ನಾಲ್ಕುಂ ಸಮುದ್ರಂಗಳ ನೀರುಡೆಯ ರತುನಂಗಳುಮಂ ದಿಶಾಗಜಂಗಳುಟೆಯ ಗಜಂಗಳುಮಂ ಆದಿತ್ಯನ ಕುದುರೆಗಳುಟೆಯೆ ಕುದುರೆಗಳುಮಂ ದೇವೇಂದ್ರನ ಸುರಭಿಯುಮಶ್ವರನ ನಂದಿಯುಮುಟೆಯ ಗೋವಜಂಗಳುಮನಿಂದ್ರಪ್ರಸ್ಥಕ್ಕೆ ತೆರಳಿ ಬಟೆಯಂ
ಮೇಲಕ್ಕೆ ಬಂದು ಕುಬೇರನಿಂದ ಕಪ್ಪವನ್ನು ಸ್ವೀಕರಿಸಿ ಯಕ್ಷರು ಚಿನ್ನವನ್ನು ಗುಂಪಾಗಿ ಹೊತ್ತು ಬರಲು ಸಾವಕಾಶಮಾಡದೆ ಇಂದ್ರಪ್ರಸ್ಥಕ್ಕೆ ಬಂದನು. ಈ ಕಡೆ ಭೀಮನೂ ಪೂರ್ವದಿಕ್ಕಿನ ಭಾಗವನ್ನು ಆಜ್ಞಾಧೀನರನ್ನಾಗಿ ಮಾಡಿ ದೇವೇಂದ್ರನ ವಜ್ರಾಯುಧವನ್ನೂ ಶಚೀದೇವಿಯ ಕೈಗನ್ನಡಿಯನ್ನೂ ಬಿಟ್ಟು ಮಿಕ್ಕ ಸಮಸ್ತವಸ್ತುಗಳನ್ನೂ ತಂದನು. ಸಹದೇವನೂ ಪಶ್ಚಿಮದಿಕ್ಕಿನ ಸಾಮಂತರನ್ನು ನಡುಗಿಸಿಯೂ ನಾಶಮಾಡಿಯೂ ಅವರ ಐಶ್ವರ್ಯವನ್ನೂ ತೆಗೆದುಕೊಂಡು ವರುಣನ ವಾಹನವಾದ ಮಕರವನ್ನೂ ಅವನ ಹೆಂಡತಿಯ ಮಾಂಗಲ್ಯವನ್ನೂ ಉಳಿದು ಮಿಕ್ಕೆಲ್ಲ ವಸ್ತುಗಳನ್ನೂ ತಂದು ಮುಂದಿಟ್ಟನು. ನಕುಳನು ದಕ್ಷಿಣ ದಿಕ್ಕಿಗೆ ಗರ್ವಿಷ್ಟರನ್ನೂ ಸಾಮಂತರನ್ನೂ ಕೃಶವಾಗುವ ಹಾಗೆ ದೋಚಿಕೊಂಡು ವಿಭೀಷಣನು ತನಗೆ ಅಧೀನವಾಗದಿರಲು ಅರ್ಜುನನಿಗೆ ಹೇಳಿ ಕಳುಹಿಸಿದನು. ೩೩. ಪರಸೈನ್ಯಭೈರವನಾದ ಅರ್ಜುನನು ಅಯ್ಯೋ ದೌಷ್ಟದಿಂದ ಉಬ್ಬಿ ಕೆಟ್ಟ ಆ ರಾವಣನನ್ನು ಹಿಡಿದಿದ್ದ ಪೆಡಂಭೂತವೇ ನಿನ್ನನ್ನೂ ಹಿಡಿದಿದೆಯೆ? ನಿನ್ನ ಬಲಗರ್ವವನ್ನು ಬಿಸಾಡು; ನಾನು ನಿನ್ನ ಮೇಲೆ ಹಾಯ್ದು ಬಂದರೆ ನಿನ್ನ ಆ ಸಮುದ್ರವು ಯಾವ ಪ್ರಯೋಜನಕ್ಕೆ ಬರುತ್ತದೆ ಎಂದು ತನ್ನ ಬಾಣದಲ್ಲಿ ಬರೆದು ಪ್ರಯೋಗಿಸಿ ಆ ಲಂಕೆಯ ವಿಭೀಷಣನನ್ನು ಅಡಗಿಸಿ ಕಪ್ಪವನ್ನು ಕೊಂಡನು.
ವ ಹಾಗೆ ನಾಲ್ಕು ಸಮುದ್ರಗಳ ನೀರನ್ನುಳಿದು ಮಿಕ್ಕೆಲ್ಲ ರತ್ನಗಳನ್ನೂ ದಿಗ್ಗಜಗಳನ್ನೂ ಬಿಟ್ಟು ಮಿಕ್ಕೆಲ್ಲ ಆನೆಗಳನ್ನೂ ಸೂರ್ಯನ ಕುದುರೆಗಳನ್ನುಳಿದು ಮಿಕ್ಕೆಲ್ಲ ಕುದುರೆಗಳನ್ನೂ ದೇವೇಂದ್ರನ ಕಾಮಧೇನುವನ್ನೂ ಈಶ್ವರನ ನಂದಿಯನ್ನೂ ಬಿಟ್ಟು ಮಿಕ್ಕೆಲ್ಲ ಗೋಸಮೂಹಗಳನ್ನೂ ಇಂದ್ರಪ್ರಸ್ಥದಲ್ಲಿ ಕೂಡಿಸಿದರು. ಬಳಿಕ ಕೃಷ್ಣನ ಅಭಿಪ್ರಾಯದ