________________
೩೦೮ | ಪಂಪಭಾರತಂ ಕಂ|| , ಎನಿತು ಗಡಂ ಪಯೋನಿಧಿಪರೀತಮಹೀತಳಮಂಬುದಾಂಪ ಬೀ
ರನ ಹೆಸರಾವುದೀ ನುಡಿಯನೀ ಪದದೊಳ್ ಪಳಗಿಕ್ಕೆ ನಾರದಂ | ಮನದೋಳೆ ಪೇಸುಗುಂ ಸುರಪನುಂ ನಗುಗುಂ ಕಡುವಿನಕುಮ ಯ್ಯನ ಮುಖಮಂತುಪೇಕ್ಷಿಸುವುದೀ ಮಖಮಂ ಸರಸೀರುಹೋದರಾ II೨೫
೨೬
ವ|| ಎಂದೂಡೆ ಭೀಮಸೇನನಿಂತೆಂದಂಕಂ || ಪನ್ನತರ ನಡುವನುಡಿಯ
ಲೈನ್ನ ಭುಜಾರ್ಗಳಯ ಸಾಲುಮೊಸ ಮೇಣ್ ಮುನಿ ಮೇ | ನನ್ನ ನುಡಿ ಚಾಠಡಾಢಣ
ಮನ್ನಂ ಬೆಸಸುವುದು ರಾಜಸೂಯಂ ಬೇಳಲ್ || ವ|| ಎಂದು ಗಜ ಗರ್ಜಿಸುವುದುಮಮಳರುಮಾ ಬೇಳ್ಳೆಯ ಮಾತಂ ತಮಳೆ ನುಡಿದೂಡಮ ಗಂಡವಾರುಮಳುಬಂ ಭೂತಮಕುಮಂದು ಮಮ್ಮೆಯ ಬೆಸಸೆಂಬುದುಂ ರಾಜಸೂಯಮಂ ಬೇಳದಿರಿರಪೊಡ ಗಂಗಾನದಿಯ ಬಡಗಣ ತಡಿಯ ಮಘಮಘಿಸುವ ವಾರಣಾಸಿ, ಪುರಮನಾಳ್ವ ಬೃಹದ್ಬಳಂ ಪುಷೋತ್ಪತ್ತಿನಿಮಿತ್ತಮತ್ತೊಂದು ದಿವ್ಯಪಿಂಡಮಂ ತನ್ನಿರ್ವರರಸಿಯರ್ಗೆ ಪಚ್ಚು ಕೊಟ್ಟೋಡ ಪುಟ್ಟದೆರಡು ಪೋಚುಮನಿವೇವುವೆಂದು ಬಿಸುಡೆ
ಅರ್ಜುನನು ಹೀಗೆಂದನು. ೨೫. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಭೂಭಾಗವೆಂಬುದು ಎಷ್ಟು ದೊಡ್ಡದು ? ಪ್ರತಿಭಟಿಸುವ ವೀರನ ಹೆಸರಾವುದು? ಈ ಯಜ್ಞಮಾಡುವ ವಿಚಾರವನ್ನು ಈ ಸಮಯದಲ್ಲಿ ಉಪೇಕ್ಷಿಸಿದಲ್ಲಿ ನಾರದನು ಮನಸ್ಸಿನಲ್ಲಿಯೇ ಜುಗುಪ್ಪೆಪಟ್ಟುಕೊಳ್ಳುವನು; ದೇವೇಂದ್ರನು ನಗುವನು; ಅಯ್ಯನಾದ ಪಾಂಡುವಿನ ಮುಖವೂ ಖಿನ್ನವಾಗುವುದು. ಕೃಷ್ಣನೇ ಈ ಯಜ್ಞವನ್ನು ಉದಾಸೀನಮಾಡುವುದಾದರೂ ಹೇಗೆ? ವll ಭೀಮಸೇನನು ಹೀಗೆಂದನು-೨೬. ವೀರರ ಸೊಂಟವನ್ನು ಮುರಿಯುವುದಕ್ಕೆ ನನ್ನ ಬಲಿಷ್ಟವಾದ ತೋಳುಗಳೇ ಸಾಕು ಒಪ್ಪು ಅಥವಾ ಒಪ್ಪದಿರು ನನ್ನ ಮಾತು ಟವರ್ಗಾಕ್ಷರಗಳಂತೆ ಶಾಶ್ವತವಾದುದು ನಾನು ರಾಜಸೂಯಯಾಗವನ್ನು ಮಾಡುವುದಕ್ಕೆ ಅಪ್ಪಣೆ ಕೊಡು (ಆಜ್ಞೆ ಮಾಡು) ವ|| ಎಂದು ರೇಗಿ ಗರ್ಜನೆಮಾಡಿದನು. ಅವಳಿಗಳಾದ ನಕುಲಸಹದೇವರೂ ಈ ಯಜ್ಞದ ಮಾತನ್ನು ಜಾರಿಹೋಗುವಂತೆ ಉದಾಸೀನವಾಗಿಯೇ ಮಾತನಾಡಿ ನಮ್ಮ ಪರಾಕ್ರಮದ ಮಾತೂ ವಿಶೇಷವಾಗಿ ಹೀನವಾಗುತ್ತದೆ, ನಮ್ಮೊಬ್ಬೊಬ್ಬರಿಗೂ (ರಾಜಸೂಯಯಾಗ ಮಾಡುವಂತೆ) ಆಜ್ಞೆಮಾಡು ಎಂದರು. 'ಕೃಷ್ಣನು' ನೀವು ರಾಜಸೂಯಯಾಗವನ್ನು ಮಾಡದೇ ಬಿಡುವುದಿಲ್ಲವಾದರೆ ಹೀಗೆ ಮಾಡಿ. ಗಂಗಾನದಿಯ ಉತ್ತರತೀರದಲ್ಲಿ ಬಹುವಾಸನಾಯುಕ್ತವಾಗಿರುವ ವಾರಣಾಸಿ ಪಟ್ಟಣವನ್ನು ಬೃಹದ್ಬಲನೆಂಬ ರಾಜನು ಆಳುತ್ತಿದ್ದನು. ಅವನು ಮಕ್ಕಳಾಗಬೇಕೆಂಬ ಒಂದು ಕಾರಣದಿಂದ ಒಂದು ದಿವ್ಯವಾದ ಪಿಂಡ(ಉಂಡೆ)ವನ್ನು ತನ್ನ ಇಬ್ಬರು ರಾಣಿಯರಿಗೆ ಭಾಗಮಾಡಿಕೊಟ್ಟನು. ಅವರಿಬ್ಬರಿಗೂ ಪ್ರತ್ಯೇಕವಾಗಿ ಹುಟ್ಟಿದ ಎರಡು ಹೋಳುಗಳನ್ನು ಇವುಗಳಿಂದೇನು ಪ್ರಯೋಜನವೆಂದು ಬಿಸಾಡಲು ಜರೆಯೆಂಬ