________________
--------
ಷಷ್ಠಾಶ್ವಾಸಂ | ೩೦೭ * ವು ಎಂಬುದುಮದೆಲ್ಲಮಂ ನೆಜತೆಯೆ ಕೇಳು ಮುಂದಣ ಕಜ್ಜದ ಬಣ್ಣುಮನಳೆದಂ ಭೋರುಹನಾಭಂ ಶುಂಭದಂಭೋಧರಧ್ವನಿಯಿನಿಂತೆಂದಂಉll ಎಂತು ಬಿಗುರ್ತು ಧೀರರನ ಕೊಂದರಂತು ಸಮಸ್ತ ವಾರ್ಧಿ ಪ
ರ್ಯಂತ ಧರಿತ್ರಿಯಂ ವಶಕೆ ತಂದಪಿರೆಂತು ಧನಂಗಳಂ ಪ್ರಯೋ | ಗಾಂತರದಿಂ ತೆರಳಿದಪಿರಾಗದಿದಾದೊಡಮೆಂತು ರಾಜಸೂ
ಯಾಂತವಿದೆಂತು ಬೇಳಪಿರಪಾಯಶತಂ ಬರೆ ರಾಜಸೂಯಮಂ || ೨೩ ಕಂ.
ಗಾಳು ಗೊರವಂ ತಗುಳ್ಳಿ ಪ ತಾಳಮನೇನೋಂದನಪೊಡಂ ಗಣಪಿದೊಡಾ | ಚೇಳುನುಡಿಗೇಳು ಕಮನೆ ಬೇಲ್ ನಿಮಗಂತು ರಾಜಸೂಯಂ ಮೊಗೇ ||
ವll ಮುನ್ನ ಕೃತಯುಗದೊಳ್ ಸೋಮನ ವರುಣನ ರಾಜಸೂಯದ ಕಡೆಯೊಳ್ ದೇವಾಸುರಯುದ್ದ ನೆಗಟಿತ ಹಿರಣ್ಯ ಕಾಳನೇಮಿಗಳೇ ಮೊದಲಾಗಿ ನಗುತ್ತಿಯ ದೈತ್ಯರೆಲ್ಲಮನ್ನ ಚಕ್ರಘಾತದೊಳಟ್ಟಿ ಮಚ್ಚದಂತಾದರದೊಂದು ಧರಾವನಿತೆಯ ಭಾರಾವತಾರದೊಳನಿತಾನುಂ ಘಸಣಿ ಪೋದುದದು ಕಾರಣದಿಂ ರಾಜಸೂಯದ ಮಾತು ಕೇಳಲ್ಲಿಯೆ ಮಜವುದು ನುಡಿಯಲ್ವೇಡನೆ ಮಜುಮಾತುಗುಡಲಣಿಯದ ಧರ್ಮಪುತ್ರಂ ಮೌನಂಗೊಂಡುಸಿರದಿರೆ ಪರಾಕ್ರಮಧವಳನಿಂತೆಂದಂ
೨೪
ಪಾಲಿಸುವವನು ನೀನು; ನಿನ್ನೊಡನೆ ಆಲೋಚಿಸದೆ ಮಾಡಲು ನಮಗೆ ಸಾಧ್ಯವೇ?' ವ|| ಎಂಬುದಾಗಿ ಹೇಳಲು ಅದೆಲ್ಲವನ್ನೂ ಸಂಪೂರ್ಣವಾಗಿ ಕೇಳಿ ಮುಂದಿನ ಕಾರ್ಯದ ಭಾರವನ್ನು ತಿಳಿದು ಕೃಷ್ಣನು ಪ್ರಕಾಶಮಾನವಾದ ಗುಡುಗಿನ ಧ್ವನಿಯಿಂದ ಹೀಗೆ ಹೇಳಿದನು-೨೩.. ಭಯಪಡಿಸಿ ವೀರರನ್ನು ಹೇಗೆ ಕೊಲ್ಲುವಿರಿ? ಸಮಸ್ತಸಮುದ್ರದವರೆಗಿರುವ ಭೂಮಿಯನ್ನು ಹೇಗೆ ವಶಕ್ಕೆ ತಂದುಕೊಳ್ಳುವಿರಿ? ಬೇರೆ ಬೇರೆ ಉಪಾಯಗಳಿಂದ ಹೇಗೆ ಧನವನ್ನು ಶೇಖರಿಸುವಿರಿ? ಇದು ಸಾಧ್ಯವಿಲ್ಲ, ಇಷ್ಟಾದರೂ ರಾಜಸೂಯದ ಕೊನೆಮುಟ್ಟುವುದು ಹೇಗೆ? ನೂರಾರು ಅಪಾಯಗಳು ಬರುವ ಈ ರಾಜಸೂಯಯಾಗವನ್ನು ಹೇಗೆ ಮಾಡುವಿರಿ? ೨೪, ಆ ಕಪಟಸನ್ಯಾಸಿಯು ರೇಗಿಸಿ ಯಾವುದೋ ಕಾಡುಹರಟೆಯನ್ನು ಹರಟಿದರೆ ಆ ಪೊಳ್ಳು ಮಾತನ್ನು ಕೇಳಿ ಸುಮ್ಮನೆ ಹಾಗೆ ಯಜ್ಞವನ್ನು ಮಾಡಲು ರಾಜಸೂಯವು ನಿಮಗೆ ಸಾಧ್ಯವೇ? ವ! 'ಮೊದಲು ಕೃತಯುಗದಲ್ಲಿ ಸೋಮ ಮತ್ತು ವರುಣ ರಾಜಸೂಯದ ಕಡೆಯಲ್ಲಿ ದೇವಾಸುರಯುದ್ಧವು ಪ್ರಾಪ್ತವಾಯಿತು. ಹಿರಣ್ಯ ಕಾಲನೇಮಿಗಳೇ ಮೊದಲಾಗಿ ಪ್ರಸಿದ್ದರಾದ ರಾಕ್ಷಸರೆಲ್ಲ ನನ್ನ ಸುದರ್ಶನಚಕ್ರದ ಹೊಡೆತದಿಂದ ನಾಶವಾಗಿ ಮಟ್ಟದಂತಾದರು. ಭೂದೇವಿಯ ಆ ಒಂದು ಭಾರವನ್ನು ಇಳಿಸುವುದರಲ್ಲಿ ಎಷ್ಟೋ ಆಯಾಸವಾಯಿತು. ಆ ಕಾರಣದಿಂದ ರಾಜಸೂಯದ ಮಾತನ್ನು ಕೇಳಿದಲ್ಲಿಯೇ ಮರೆಯುವುದು ಲೇಸು ಮಾತನಾಡಬೇಡ' ಎಂದನು. ಪ್ರತ್ಯುತ್ತರವನ್ನು ಕೊಡಲು ಶಕ್ತಿಯಿಲ್ಲದೆ ಧರ್ಮರಾಜನು ಮೌನವನ್ನು ತಾಳಿರಲು ಪರಾಕ್ರಮಧವಳನಾದ