________________
೩೦೬ | ಪಂಪಭಾರತಂ
ವ|| ಎಂಬುದುಮಾ ಮಾತಂ ನಿಲೆ ನುಡಿದುದರ್ಕೆ ಮೆಚ್ಚಿ ನಿನಗದೇವಿರಿದುಕಂ|| ಪರಪಿನ ನೀಳದ ಕಡೆಯಂ
ಮರುಳಂ ತವ ನೋಡಲಾಗಿದಂಬರತಳಮಂ | ಕರಿದೆಂಬಂತಿರೆ ನಿನ್ನಂ ನರನೆಂಬುದೆ ನಿನ್ನ ಸಾಹಸಕ್ಕದು ಒರಿದೇ ||
• ೨೦ ವll ಎಂದು ನುಡಿದು ನಾಡೆಯುಂ ಪೊತ್ತಿರ್ದುಮಿನ್ ಪೋಪಮಂದ ಮುನಿನಾಥನು ನರನಾಥಂ ಬಿಜಯಂಗೆಯ್ಕೆಮನೆ ನಾರದನಿರದೆ ಗಗನತಳಕೊಗೆದು ಮುಗಿಲ ಪೊರೆ ಯೋಳಡಂಗಿದನಿತ್ತ ಧರ್ಮರಾಜಂ ನಿಜಾನುಜರೊಡನೆ ರಾಜಸೂಯಪ್ರಪಂಚಮನಾಳೋಚಿಸಿ ಪುರುಷೋತ್ತಮನನೀ ಪದದೊಳ್ ಬರಿಸುವುದು ನಮಗುತ್ತಮಪಕ್ಷವೆಂದು, ಉll ದ್ವಾರವತೀಪುರಕ್ಕೆ ಚರರಂ ತಡವಿಲ್ಲದೆ ಬೇಗಮಟ್ಟಿ ಪಂ
ಕೇರುಹನಾಭನಂ ಬರಿಸಿ ಮಜ್ಜನ ಭೋಜನ ಭೂಷಣಾದಿ ಸ | ತಾರದೊಳಂ ನೆಯ ಮಾಡಿ ಮುರಾಂತಕ ಪಾಂಡು ಭೂಭುಜಂ ಕಾರಣಮಾಗೆ ನಾರದನ ಪೇಟ್ಟ ನೆಗಟ್ಯ ರಾಜಸೂಯಮಂ | ೨೧ ಕಂ| ಬೇಳಳ ಬಗವೊಡ ಹರಿಯೊಡ
ನಾಚಿಪಮೆಂದು ಬಲೆಯನಟ್ಟಿದನೆನ್ನಂ | ಪಾಳಿಸುವೆ ನೀನ್ ನಿಮ್ಮೊಡ ನಾಲೋಚಿಸದಮಗ ನಗಬಲೇಂ ನೆರವುಂಟೇ |
೨೨
ತೃಪ್ತಿಪಡುತ್ತಾರೆ. ಗೌರವವುಂಟಾಗುತ್ತದೆ. ಕೀರ್ತಿ ಹರಡಿ ಹಬ್ಬುತ್ತದೆ. ಹಿಂದೆ ಮಾಡಿದ ಪುಣ್ಯದಿಂದ ಮಾತ್ರ ಪ್ರಾಪ್ತವಾಗುತ್ತದೆ ಎಂದಾಗ ಈ ಯಜ್ಞವನ್ನು ನಡೆಸುವುದೇ ನಿಶ್ಚಯ ಎಂದನು. ವ|| ಆತನ ನಿಷ್ಕರ್ಷೆಯನ್ನು ಕೇಳಿ ನಾರದನು ನಿನಗೆ ಇದೇನು ದೊಡ್ಡದು-೨೦. ಹುಚ್ಚನು ವಿಸ್ತಾರವಾಗಿ ಹರಡಿರುವ ನೀಲಿಯ ಬಣ್ಣದ ಕೊನೆಯನ್ನು ನೋಡಲಾರದೆ ಆಕಾಶಪ್ರದೇಶವನ್ನು ಕಪ್ಪು ಎನ್ನುವ ಹಾಗೆ ನಿನ್ನನ್ನು ಮನುಷ್ಯ ಸಾಮಾನ್ಯನೆನ್ನಬಹುದೇ? ನಿನ್ನ ಪರಾಕ್ರಮಕ್ಕೆ ಅದು ದೊಡ್ಡದೇ? ವ|| ಎಂದು ಹೇಳಿ ಕೆಲಕಾಲವಿದ್ದು ಇನ್ನು ಹೋಗುತ್ತೇವೆ, ಎಂದ ನಾರದನನ್ನು ಧರ್ಮರಾಜನು “ದಯಮಾಡಿಸಿ' ಎನ್ನಲು ನಾರದನು ಸಾವಕಾಶಮಾಡದೆ ಆಕಾಶಪ್ರದೇಶಕ್ಕೆ ಹಾರಿ ಮೋಡದ ಪದರದಲ್ಲಿ ಅಡಗಿದನು. ಈ ಕಡೆ ಧರ್ಮರಾಜನು ತನ್ನ ತಮ್ಮಂದಿರೊಡನೆ ರಾಜಸೂಯವಿಷಯವನ್ನು ಆಲೋಚಿಸಿದನು. ಈ ಸಮಯದಲ್ಲಿ ಕೃಷ್ಣನನ್ನು ಬರಿಸುವುದು ನಮಗೆ ಉತ್ತಮಪಕ್ಷವೆಂದು ನಿಶ್ಚಯಿಸಿದರು. ೨೧. ದ್ವಾರಾವತೀಪಟ್ಟಣಕ್ಕೆ ಚಾರರನ್ನು ಸಾವಕಾಶಮಾಡದೆ ಬೇಗ ಕಳುಹಿಸಿ ಕೃಷ್ಣನನ್ನು ಬರಮಾಡಿದರು. ಸ್ನಾನ ಭೋಜನ ಅಲಂಕಾರಾದಿಸತ್ಕಾರಗಳಿಂದ ವಿಶೇಷ ಪ್ರೀತಿಯನ್ನು ಪ್ರದರ್ಶಿಸಿ 'ಕೃಷ್ಣಾ ಪಾಂಡುಮಹಾರಾಜನ ಕಾರಣವಾಗಿ ನಾರದನು ಹೇಳಿದ ಪ್ರಸಿದ್ದ ವಾದ ರಾಜಸೂಯಯಾಗವನ್ನು -೨೨. ಮಾಡಲು ಯೋಚಿಸುವುದಾದರೆ ನಿನ್ನೊಡನಾಲೋಚಿಸೋಣ ಎಂದು ದೂತರನ್ನಟ್ಟಿದೆನು. (ನೀನು ನಮ್ಮರಕ್ಷಕ, ನಮ್ಮನ್ನು